ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಉನ್ನತ ಸ್ಥಾನ: ಹೊನ್ನಾಳಿ ಶ್ರೀಗಳು

| Published : Mar 09 2024, 01:35 AM IST

ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಉನ್ನತ ಸ್ಥಾನ: ಹೊನ್ನಾಳಿ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರಿನ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶರಭಿ ಗುಗ್ಗಳದ ಅಂಗವಾಗಿ ಧರ್ಮಸಭೆ ನಡೆಯಿತು. ಇದಕ್ಕೂ ಮೊದಲು ಗುಗ್ಗಳ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ರಾಣಿಬೆನ್ನೂರು: ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಉನ್ನತ ಸ್ಥಾನವಿದ್ದು, ನಮ್ಮ ನಂಬಿಕೆ ಎಲ್ಲ ಕಾರ್ಯಗಳಿಗೂ ಯಶಸ್ಸು ನೀಡುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಇಲ್ಲಿನ ವಾಗೀಶ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶರಭಿ ಗುಗ್ಗಳದ ಅಂಗವಾಗಿ ಜರುಗಿದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನಾವು ಮಾಡುವ ಕಾಯಕದಲ್ಲಿ ಭಗವಂತನನ್ನು ಕಾಣಲಾಗುತ್ತದೆ. ಈ ಪರಂಪರೆಯನ್ನು ಉಳಿಸಿಕೊಳ್ಳಲು ಅನೇಕ ಹಿರಿಯರ ಶ್ರಮವಿದೆ. ಇಂದಿಗೂ ಧಾರ್ಮಿಕ ಭಾವನೆಯನ್ನು ಬೆಳೆಸಿಕೊಂಡು ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ನಾಗರಾಜ ಪವಾರ, ರಾಜಣ್ಣ ಮೋಟಗಿ, ತ್ರಿವೇಣಿ ಪವಾರ ಮುಖ್ಯ ಅತಿಥಿಗಳಾಗಿದ್ದರು.

ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿದರು.

ಬಾಬಣ್ಣ ಶೆಟ್ಟರ, ವಿರೂಪಾಕ್ಷಪ್ಪ, ಜಿ.ಜಿ. ಹೊಟ್ಟಿಗೌಡ್ರ, ಕಸ್ತೂರಿ ಪಾಟೀಲ, ಯುವರಾಜ ಬಾರಾಟಕ್ಕೆ, ಕರಬಸಪ್ಪ ಶಿವಮೊಗ್ಗಿ, ರವಿ ಪಟ್ಟಣಶೆಟ್ಟಿ, ಪಿ.ಆರ್. ಮಂಜುನಾಥ, ಮುದುಗಲ್, ಕೆ.ಆರ್. ರಾಮಲಿಂಗಣ್ಣನವರ, ಎಸ್.ಎ. ಮಂಜುನಾಥ, ವಿನೋದ ಜಂಬಗಿ, ಬದ್ರಿಪ್ರಸಾದ ಪಟ್ಟಣಶೆಟ್ಟಿ ಮತ್ತಿತರರಿದ್ದರು.

ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ 8ಕ್ಕೆ ಗಂಗಾಧರ ಶೆಟ್ಟರ ಮನೆಯ ಬಳಿಯಿಂದ ಹೊರಟ ಶರಭಿ ಗುಗ್ಗಳ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ಸೇರಿತು.