ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ಕೆ. ಷಡಕ್ಷರಿ

| Published : May 15 2025, 01:38 AM IST

ಸಾರಾಂಶ

ನಗರದ ಜನತೆಗೆ ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನಮ್ಮ ಆದ್ಯತೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ನಗರದ ಜನತೆಗೆ ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸ್ವಚ್ಛತೆ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನಮ್ಮ ಆದ್ಯತೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದಲ್ಲಿ ನಗರಸಭೆ ನಿಧಿಯಿಂದ 5.6 ಕೋಟಿ ರು. ವೆಚ್ಚದಲ್ಲಿ ಶಾಸಕರು ಮತ್ತು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ನಗರದ 31 ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿಗಳಿಗೆ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ 31ವಾರ್ಡ್‌ಗಳಿದ್ದು ನಗರಸಭೆ ಮತ್ತು ಕೆಆರ್‌ಐಡಿಎಲ್ ಇಲಾಖೆ ವತಿಯಿಂದ ಅಭಿವೃದ್ದಿ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಗಿದೆ. 2024-25ನೇ ಸಾಲಿನ ನಗರಸಭೆ ನಿಧಿಯಿಂದ ಸುಮಾರು 5.6 ಕೋಟಿ ರೂ ವೆಚ್ಚದಲ್ಲಿ 31 ವಾರ್ಡ್‌ಗಳಿಗೂ ಅಂದಾಜು ವೆಚ್ಚ ಪ್ರತಿ ವಾರ್ಡಿಗೆ ಸುಮಾರು 13 ಲಕ್ಷರೂಗಳಂತೆ ಸಿಸಿ ರಸ್ತೆ, ಫುಟ್ಬಾತ್, ಅಂಗನವಾಡಿ ಕಟ್ಟಡ ಕಾಮಗಾರಿ, ಬೀದಿದೀಪ, ಯುಜಿಡಿ ಮ್ಯಾನ್‌ಹೋಲ್ ಸೇರಿದಂತೆ ವಿವಿಧ ರೀತಿಯ ಕಾಮಗಾರಿಗಳಿಗೆ ಪೂಜೆ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನಬಳಕೆಗೆ ನೀಡಲಾಗುವುದು. ಸಂಬಂಧಪಟ್ಟ ಗುತ್ತಿಗೆದಾರರು ಕೂಡಲೆ ಕೆಲಸ ಪ್ರಾರಂಭಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘನಾ ಸುಜಿತ್ ಭೂಷಣ್ ಸೇರಿದಂತೆ ನಗರಸಭಾ ಸದಸ್ಯರುಗಳು, ಸ್ಥಳೀಯ ವಾರ್ಡ್‌ನ ಮುಖಂಡರು, ಜನಪ್ರತಿನಿಧಿಗಳು, ನಿವಾಸಿಗಳು ಭಾಗವಹಿಸಿದ್ದರು.