ಮರಿಯಮ್ಮನಹಳ್ಳಿಯ 14 ಪ್ರೌಢಶಾಲೆ ಪೈಕಿ ಏಳು ವಿದ್ಯಾರ್ಥಿಗಳು ಗೈರು

| Published : Mar 26 2024, 01:01 AM IST

ಮರಿಯಮ್ಮನಹಳ್ಳಿಯ 14 ಪ್ರೌಢಶಾಲೆ ಪೈಕಿ ಏಳು ವಿದ್ಯಾರ್ಥಿಗಳು ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಮರಿಯಮ್ಮನಹಳ್ಳಿ ವಲಯದ 14 ಪ್ರೌಢಶಾಲೆಗಳ 437 ಬಾಲಕಿಯರು, ಬಾಲಕರು ಸೇರಿ ಒಟ್ಟಾರೆ 550 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.

ಮರಿಯಮ್ಮನಹಳ್ಳಿ: 2023-​24ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸೋಮವಾರದಿಂದ ಆರಂಭವಾಗಿದ್ದು, ಪಟ್ಟಣದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್ ಪರೀಕ್ಷೆಗೆ 7 ಅಭ್ಯರ್ಥಿಗಳು ಪರೀಕ್ಷೆಗೆ ಗೈರು ಹಾಜರಿಯಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕ ಓಬಯ್ಯ ಎಸ್‌. ಕಾಶೀಂಸಾಹೇಬ್ ತಿಳಿಸಿದರು.ಮರಿಯಮ್ಮನಹಳ್ಳಿ ವಲಯದ 14 ಪ್ರೌಢಶಾಲೆಗಳ 437 ಬಾಲಕಿಯರು, ಬಾಲಕರು ಸೇರಿ ಒಟ್ಟಾರೆ 550 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಇದಕ್ಕಾಗಿ ಪಟ್ಟಣದಲ್ಲಿ ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ ಮತ್ತು ಪ್ರಾರ್ಥನಾ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳ ಪ್ರಿಯದರ್ಶಿನಿ ಬಾಲಕಿಯರ ಶಾಲೆಯ ಕೇಂದ್ರದಲ್ಲಿ ಒಟ್ಟು 515 ವಿಧ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು.ಇಂಗ್ಲಿಷ್ ಪ್ರಥಮ ಭಾಷೆಯಾಗಿ 41, ಕನ್ನಡ ಪ್ರಥಮಭಾಷೆಯಾಗಿ 469, 20 ಖಾಸಗಿ ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಿದ್ದರು.ಇನ್ನು ಪ್ರಾರ್ಥನಾ ಆಂಗ್ಲ ಮಾದ್ಯಮ ಶಾಲೆಯ ಕೇಂದ್ರದಲ್ಲಿ ಒಟ್ಟು 525 ನೋಂದಣಿಯಾಗಿ, ಇಬ್ಬರು ವಿದ್ಯಾರ್ಥಿಗಳು ಗೈರು ಹಾಜರಿಯಾಗಿದ್ದರು. 523 ವಿಧ್ಯಾರ್ಥಗಳು ಹಾಜರಿದ್ದರು.ಪ್ರಥಮ ಭಾಷೆ ಕನ್ನಡವನ್ನು 478 ವಿದ್ಯಾರ್ಥಿಗಳು, ಪ್ರಥಮ ಭಾಷೆ ಇಂಗ್ಲಿಷನ್ನು 45 ವಿದ್ಯಾರ್ಥಿಗಳು, ಖಾಸಗಿ 13 ವಿಧ್ಯಾರ್ಥಿಗಳಲ್ಲಿ ಒಬ್ಬರು ಗೈರಾಗಿದ್ದರು.ಪರೀಕ್ಷಾ ಕೇಂದ್ರಗಳ ಕೊಠಡಿಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಿತವಾಗಿತ್ತು. ಸಹ ಅಧೀಕ್ಷಕ ವೆಂಕಟೇಶ, ರಸೂಲ್ ಉಪಸ್ಥಿತರಿದ್ದರು.ಬುಧವಾರ ಸಮಾಜವಿಜ್ಞಾನ ಪರೀಕ್ಷೆ ನಡೆಯಲಿದೆ.