ಸಾರಾಂಶ
ಎಸ್‌ಎಸ್‌ಕೆ ಸಮಾಜದಲ್ಲಿ ವರದಕ್ಷಿಣೆ ರಹಿತ ಮದುವೆಗಳು ನಡೆಯುತ್ತಿರುವದು ಕೇಳಿ ಸಂತೋಷ
ಗದಗ: ಭಾರತೀಯ ಸಂಸ್ಕೃತಿಗೆ ಉನ್ನತ ಸ್ಥಾನಮಾನವಿದೆ. ಹಿಂದೂ ಧರ್ಮ ಹಾಳು ಮಾಡಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಹಳೆ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಭಾಸ್ಕರಸಾ ಪವಾರ ಸಭಾಂಗಣದ ದಸರಾ ದರ್ಬಾರ ವೇದಿಕೆಯಲ್ಲಿ ಜರುಗಿದ ನಮ್ಮೂರು ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್‌ಎಸ್‌ಕೆ ಸಮಾಜದಲ್ಲಿ ವರದಕ್ಷಿಣೆ ರಹಿತ ಮದುವೆಗಳು ನಡೆಯುತ್ತಿರುವದು ಕೇಳಿ ಸಂತೋಷವಾಯಿತು. ಇದೇ ರೀತಿ ವರದಕ್ಷಿಣೆ ರಹಿತ ಮದುವೆ ಮಾಡುವದನ್ನು ಇತರೆ ಸಮಾಜದವರು ಅಳವಡಿಸಿಕೊಳ್ಳಬೇಕೆಂದರು.ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿನಿತ್ಯ ಎಸ್.ಎಸ್.ಕೆ ಸಮಾಜದ ಮಹಿಳೆಯರು ಬೆಳಗ್ಗೆ ಎದ್ದು ದೇವಸ್ಥಾನಕ್ಕೆ ಆಗಮಿಸಿ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಧನ್ಯರಾಗುತ್ತಿದ್ದಾರೆ.ಎಸ್.ಎಸ್.ಕೆ. ಸಮಾಜದ ಬಾಂಧವರ ಶಿಸ್ತು, ಆಚರಣೆ, ಭಕ್ತಿ ನೋಡಿ ನನ್ನ ಕುಟುಂಬದವರನ್ನು ಕರೆದುಕೊಂಡು ಬರಬೇಕಿತ್ತು ಎಂದು ಅನಿಸುತ್ತಿದೆ. ಮುಂದಿನ ದಸರಾ ಹಬ್ಬದಲ್ಲಿ ಕುಟುಂಬ ಸಮೇತವಾಗಿ ಆಗಮಿಸಿ ದೇವಿಯ ದರ್ಶನ ಪಡೆಯುತ್ತೇನೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಎಸ್.ಎಸ್.ಕೆ ಸಮಾಜ ಪಂಚ ಕಮೀಟಿ ಅಧ್ಯಕ್ಷ ಫಕೀರಸಾ ಬಾಂಡಗೆ ವಹಿಸಿದ್ದರು. ಸಮಾಜದ ಹಿರಿಯರಾದ ಬಾಬಾಸಾ ಬಾಕಳೆ, ಚಿದಾನಂದ ಕ್ಷತ್ರೀಯ, ಉಪಾಧ್ಯಕ್ಷ ರಾಜು ಬದಿ, ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ, ಕಾರ್ಯದರ್ಶಿ ರವಿ ಶಿದ್ಲಿಂಗ, ದಸರಾ ಕಮೀಟಿಯ ಚೇರಮನ್ ವಿಷ್ಣುಸಾ ಶಿದ್ಲಿಂಗ, ಎನ್.ಆರ್. ಖಟವಟೆ, ವಿಶ್ವನಾಥಸಾ ಖಟವಟೆ, ಸುರೇಶಕುಮಾರ ಬದಿ, ಮಾರುತಿ ಪವಾರ, ಬಲರಾಮ ಬಸವಾ, ಶ್ರೀನಿವಾಸ ಬಾಂಡಗೆ, ಮೋತಿಲಾಲಸಾ ಪೂಜಾರಿ, ಪರಶುರಾಮಸಾ ಬದಿ, ಅನಿಲ್ ಖಟವಟೆ, ಗಣಪತಸಾ ಜಿತೂರಿ, ವಿನೋದ ಬಾಂಡಗೆ, ಪ್ರಕಾಶ ಬಾಕಳೆ, ಅಂಬಾಸಾ ಖಟವಟೆ, ವಿಶ್ವನಾಥ ಸೂಳಂಕಿ, ಸಾಗರ ಪವಾರ, ಸತೀಶ ದೇವಳೆ, ಶ್ರೀಕಾಂತ ಬಾಕಳೆ, ಮೋಹನಸಾ ಪವಾರ, ನಾಗರಾಜ ಖೋಡೆ, ಉಮಾಬಾಯಿ ಬೇವಿನಕಟ್ಟಿ, ಸ್ನೇಹಲತಾ ಕಬಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಜಿ.ಎನ್. ಹಬೀಬ ನಿರೂಪಿಸಿದರು. ರೇಖಾ ಖಟವಟೆ ವಂದಿಸಿದರು.