ಸಾರಾಂಶ
ಸುರಪುರ: ಕಲಬುರಗಿಯ ದಾಸೋಹ ಮೂರ್ತಿಗಳಾದ ಶರಣಬಸವೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಶ್ರಾವಣ ಮಾಸ ನಿಮಿತ್ತ ಕೊಪ್ಪಳ ಜಿಲ್ಲೆಯ ಹೊಮ್ಮಿನಾಳ ಹುಚ್ಚೇಶ್ವರ ಭಜನಾ ಮಂಡಳಿಯಿಂದ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.ಹುಚ್ಚೇಶ್ವರ ಭಜನಾ ಮಂಡಳಿಯಿಂದ ಕಲಬುರಗಿಯ ಶರಣಬಸವೇಶ್ವರ ಶ್ರಾವಣ ಮಾಸದ 3ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸುರಪುರ ಮಾರ್ಗವಾಗಿ ಹೋಗುತ್ತಿರುವ ಪಾದಯಾತ್ರೆಯ ಭಕ್ತರಿಗೆ ಶರಣಬಸವೇಶ್ವರ ವಿದ್ಯಾವರ್ಧಕ ಕಲಬುರಗಿಯ ಅಡಿಯಲ್ಲಿ ನಡೆಯುತ್ತಿರುವ, ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸಂಘ-ಸಂಸ್ಥೆಗಳು ಸುರಪುರದ ಮಹಾವಿದ್ಯಾಲಯದ ಆವರಣದಲ್ಲಿ ಪ್ರಸಾದ ವ್ಯವಸ್ಥೆ ಕೈಗೊಳ್ಳಲಾಯಿತು. ಪಾದಯಾತ್ರಾ ಭಜನಾ ಮಂಡಳಿ ಭಕ್ತಾದಿಗಳ ವತಿಯಿಂದ ಶರಣರ ಮಹಿಮೆ ಸಾರುವ ಭಜನಾ ಹಾಡುಗಳ ಸೇವೆಯನ್ನು ನಡೆಸಿಕೊಟ್ಟರು. ಎಂ.ಬಿ.ಎ ವಿಭಾಗ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆದಿನಾಥ್ ಮಹಾರಾಜ್, ಶರಣಬಸವ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ರೇವಪ್ಪ ಪಾಟೀಲ್, ಪ್ರಥಮ ದರ್ಜೆ ಸಹಾಯಕರಾದ ಸಿದ್ದಲಿಂಗಯ್ಯ ಸ್ವಾಮಿ, ದೊಡ್ಡಪ್ಪಗೌಡ ಪಾಟೀಲ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.
-------29ವೈಡಿಆರ್13: ಸುರಪುರ ನಗರದ ವೀರಪ್ಪ ನಿಷ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೊಪ್ಪಳ ಜಿಲ್ಲೆಯ ಹೊಮ್ಮಿನಾಳ ಹುಚ್ಚೇಶ್ವರ ಭಜನಾ ಮಂಡಳಿ ವತಿಯಿಂದ ಸಂಗೀತ ಸೇವೆ ನಡೆಸಿಕೊಟ್ಟರು.