ಸಾರಾಂಶ
ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಸ್ಪರ್ಧೆಗಳಲ್ಲಿ ಹಿರಿಯರು, ಕಿರಿಯರು ಮಿಂಚಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಓಂ ಯುವಕ ಸಂಘದ ವತಿಯಿಂದ ಮೂರನೇ ವರ್ಷದ ಹಿಂದೂ ಕಪ್ ಕೆಸರುಗದ್ದೆ ಕ್ರೀಡಾಕೂಟವು ಸಂಭ್ರಮದಿಂದ ನಡೆಯಿತು.ಅರ್ವತೋಕ್ಲು ಅಪ್ಪಂಗಳದ ಕೆ.ಕೆ.ಶ್ರೀಪತಿ ಹೆಬ್ಬಾರ್ ಅವರ ಗದ್ದೆಯಲ್ಲಿ ನಡೆದ ಕ್ರೀಡಾಕೂಟವನ್ನು ಊರಿನ ಹಿರಿಯರು ಹಾಗೂ ದಾನಿಗಳಾದ ಶಂಕರ ನಾರಾಯಣ ಭಟ್ ಉದ್ಘಾಟಿಸಿದರು. ಕ್ರಿಕೆಟ್, ಹಗ್ಗಜಗ್ಗಾಟ, ರಿಲೆ ಓಟದ ಸ್ಪರ್ಧೆಗಳಲ್ಲಿ ಹಿರಿಯರು ಹಾಗೂ ಕಿರಿಯರು ಮಿಂಚಿದರು.
ಕ್ರಿಕೆಟ್‌ನಲ್ಲಿ ಟೀಮ್ ಭಗವತಿ ಪ್ರಥಮ, ಓಂ ಯುವಕ ಸಂಘ ದ್ವಿತೀಯ ಬಹುಮಾನ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಹೆರವನಾಡು ತಂಡ ಪ್ರಥಮ, ಅರ್ವತೋಕ್ಲು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಾರ್ವಜನಿಕರ ಓಟದಲ್ಲಿ ವಿಕ್ರಮ್ ಪ್ರಥಮ ಸ್ಥಾನ ಪಡೆದುಕೊಂಡರು.ತಳೂರು ಜೋಯಪ್ಪ ಅವರ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓಂ ಯುವಕ ಸಂಘದ ಅಧ್ಯಕ್ಷ, ಮಾಜಿ ಸೈನಿಕ ಕಂಬಳ್ಳಿ ಸುದೀಪ್ ಗೌಡ ವಹಿಸಿದ್ದರು. ಸ್ಥಳ ದಾನಿಗಳಾದ ಶಂಕರನಾರಾಯಣ ಹೆಬ್ಬಾರ್, ತಳೂರು ಜೋಯಪ್ಪ, ಮಚಂಡ ಲಾಲು, ಪಡಂಡ ಡಾಲಿ ಭೀಮಯ್ಯ, ಚಳಿಯಂಡ ಯತೀಶ್, ಕಟ್ರತಂಡ ಮನು, ಜಬ್ಬಂಡ ಮನು, ಕೊಪ್ಪಡ ಕೀರ್ತಿ ಅಯ್ಯಪ್ಪ ಹಾಜರಿದ್ದರು.