ಹಿಂದೂ ಮಹಾಗಣಪತಿ ಅದ್ಧೂರಿ ಮಹೋತ್ಸವ, ಮೆರವಣಿಗೆ

| Published : Sep 11 2025, 12:03 AM IST

ಸಾರಾಂಶ

ಮಾಗಡಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 3ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ ಶೋಭಾಯಾತ್ರೆಯೊಂದಿಗೆ ಅದ್ಧೂರಿ ತೆರೆ ಎಳೆಯಲಾಯಿತು.

ಮಾಗಡಿ: ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 3ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವ ಶೋಭಾಯಾತ್ರೆಯೊಂದಿಗೆ ಅದ್ಧೂರಿ ತೆರೆ ಎಳೆಯಲಾಯಿತು.

ಪಟ್ಟಣದ ಕೋಟೆ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶೋತ್ಸವಕ್ಕೆ ಪ್ರತಿದಿನ ವಿಶೇಷ ಪೂಜೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು‌. ಗಣೇಶೋತ್ಸವದ ಲಕ್ಕಿ ಡ್ರಾನಲ್ಲಿ ಮೊದಲ ಬಹುಮಾನ ದ್ವಿಚಕ್ರ ವಾಹನ ಮಾಗಡಿಯ ಬಿಂದುಶ್ರೀ, ದ್ವಿತೀಯ ಬಹುಮಾನ ಹೊಂಬಾಳಮ್ಮನಪೇಟೆಯ ಗೀತಾರವಿ, ಹಾಗೂ 3ನೇ ಬಹುಮಾನ ಬೆಂಗಳೂರಿನ ಕಲ್ಮೇಶ್‌ ಮೂವರಿಗೂ ದ್ವಿಚಕ್ರ ವಾಹನ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಸಮಾಧಾನಕರ ಬಹುಮಾನ ನೀಡಲಾಯಿತು.

ಗಣೇಶನ ಮೆರವಣಿಗೆ: ಗಣೇಶೋತ್ಸವದ ಕೊನೆಯ ದಿನ ಭಾನುವಾರ ಬೆಳಗ್ಗೆ 11 ಗಂಟೆಗೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೋಟೆ ಮೈದಾನದಿಂದ ಕೆಂಪೇಗೌಡ ವೃತ್ತದ ಮೂಲಕ ಡೂಮ್ ಲೈಟ್ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಕಲ್ಯಾಗೇಟ್ ಮುಖಾಂತರ ಗೌರಮ್ಮನ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು.

ಕಲಾತಂಡಗಳ ಮೆರವಣಿಗೆ: ಕರ್ನಾಟಕ‌ ಮತ್ತು ಕೇರಳದ ಸುಪ್ರಸಿದ್ಧ ಕಲಾತಂಡ ಚಂಡೆ ಮೇಳ, ಪೂಜಾ ಕವಡಿ, ದೈವ ಕುಣಿತ, ತಮಟೆ ವಾದ್ಯ, ಹುಲಿ ವೇಷ, ಡೊಳ್ಳು ಕುಣಿತ, ಮಹಾರಾಷ್ಟ್ರ ನಾಸಿಕ್ ಡೋಲು ಮಂಗಳವಾದ್ಯ ಹಾಗೂ ಡಿಜೆ ಮ್ಯೂಸಿಕ್‌ನೊಂದಿಗೆ ರಾಜ ಬೀದಿಗಳಲ್ಲಿ ಬಾಣಬಿರುಸು ಸಿಡಿಮದ್ದುಗಳೊಂದಿಗೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು.