ಹಿಂದೂ ಮಹಾಗಣಪತಿ ದಶಮಾನೋತ್ಸವ ಸಂಭ್ರಮವನ್ನು ವೈಭವಯುತವಾಗಿ ಸೌಹಾರ್ದತೆಯ ಸಂಕೇತ ಮೂಡಿಸಿ ರಾಜ್ಯಕ್ಕೆ ಮಾದರಿಯಾಗುವ ರೀತಿ ಮಹೋತ್ಸವ ನಡೆಯಬೇಕು ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕಿನ ಪಟ್ಟ ನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಶಿರಾ ಹಿಂದೂ ಮಹಾ ಗಣಪತಿ ಆಚರಣ ಸಮಿತಿ ಆಮಂತ್ರಣ ಸ್ವೀಕರಿಸಿ ಮಾತನಾಡಿದರು. ಶಿರಾ ಹಿಂದೂ ಮಹಾಗಣಪತಿ ಪ್ರತಿ ವರ್ಷ ವೈಭವಯುತವಾಗಿ ನಡೆಸಲು ಭಕ್ತರು ಮತ್ತು ಚಾರಿಟಬಲ್ ಟ್ರಸ್ಟ್ ಅವರು ಮುಂದಾಗಿದ್ದು, ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲು ತಾಲೂಕು ಆಡಳಿತ ಶಾಶ್ವತವಾದ ನೆಲೆ ಕಲ್ಪಿಸುವ ಅವಶ್ಯಕತೆ ಇದೆ. ಶಿರಾ ನಗರದ ಹೃದಯ ಭಾಗದಲ್ಲಿ ೨೦ ಗುಂಟೆ ಜಾಗವನ್ನು ಶಿರಾ ಹಿಂದೂ ಮಹಾ ಗಣಪತಿ ಚಾರಿಟಬಲ್ ಟ್ರಸ್ಟ್ ಗೆ ಮಂಜೂರು ಮಾಡುವಂತಹ ಕೆಲಸ ಮಾಡಬೇಕು.ಈ ನಿಟ್ಟಿನಲ್ಲಿ ಶಾಸಕ ಟಿ.ಬಿ. ಜಯಚಂದ್ರ ಅವರು ಹೆಚ್ಚು ಆಸಕ್ತಿವಹಿಸಿ ಭೂಮಿ ಮಂಜೂರು ಮಾಡಿಕೊಡಬೇಕು ಎಂದರು.

ಶಿರಾ ಹಿಂದೂ ಮಹಾಗಣಪತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಅಂಜಿನಪ್ಪ, ಮುಖಂಡರಾದ ವಿಜಯರಾಜು, ಸಂತೆಪೇಟೆ ನಟರಾಜ್, ಮಂಜುನಾಥ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಕುಮಾರ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಹೇಮಂತ ಗೌಡ, ಮುಖಂಡರಾದ ಪವನ್ ಗೌಡ, ಸೋಮಣ್ಣ, ಮಂಜೇಶ್,ಅಶೋಕ್, ಪವನ್ ಚಲಪತಿ, ಕುಳ್ಳ ಶ್ರೀಧರ್ ಸೇರಿದಂತೆ ಹಲವರು ಹಾಜರಿದ್ದರು.