ಪಾಲಿಬೆಟ್ಟ ಹಿಂದೂ ಮಲಯಾಳಿ ಸಮಾಜದ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಪಾಲಿಬೆಟ್ಟದ ಚೆಫ್ ನೈಫ್ ಸಭಾಂಗಣದಲ್ಲಿ ನಡೆಯಿತು.
ಸಿದ್ದಾಪುರ: ಪಾಲಿಬೆಟ್ಟ ಹಿಂದೂ ಮಲಯಾಳಿ ಸಮಾಜದ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಪಾಲಿಬೆಟ್ಟದ ಚೆಫ್ ನೈಫ್ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಸಮಾಜದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಸುಶಾ ಮೋಹನ್ ಪ್ರತಿಜ್ಞಾವಿಧಿ ಬೋಧಿಸಿದರು.ನೂತನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಟಿ.ವೈ. ಮುರುಳಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಬಂಡೆ, ಖಜಾಂಚಿಯಾಗಿ ಮಧುಸೂದನ್, ಗೌರವ ಅಧ್ಯಕ್ಷರಾಗಿ ರಿನೀಶ್ ವಿ.ಬಿ., ಉಪಾಧ್ಯಕ್ಷರಾಗಿ ಸಾಯುಜ್ ಹಾಗೂ ಮಂಜುಳಾ, ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಹಾಗೂ ನಿರ್ದೇಶಕರಾಗಿ ಶಶಿ ಎಂ.ಎಸ್., ಪ್ರಿಯಾ ಚಂದ್ರನ್, ಶೀಲಾ ಅನಿಲ್, ಸುರೇಂದ್ರ, ಅಖಿಲ್ ಎಂ.ಎ., ಗಂಗಾಧರ್ ಪಿ.ಕೆ., ನಳಿನಿ ದುರ್ಗಾ ಮತ್ತು ಅಭಿನಂದನ್ ವಿ.ಪಿ. ಆಯ್ಕೆಯಾಗಿದ್ದಾರೆ. ನಿವೃತ್ತ ತಹಸೀಲ್ದಾರ್ ಸಿ.ಯು. ರಾಧಾಕೃಷ್ಣ ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಲೀಲಾವತಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯ ಸ್ಥಾಪಕ ಅಧ್ಯಕ್ಷ ಶರತ್ ಕಾಂತ್, ಖಜಾಂಚಿ ಶಾಜಿ ಅಚ್ಯುತ್ತನ್, ಉಪಾಧ್ಯಕ್ಷೆ ಪುಷ್ಪಾ ಮನೋಜ್ ಮತ್ತಿತರರಿದ್ದರು.