ಬೀರೂರು: ಜಗತ್ತಿನಾಧ್ಯಂತ ಏನೇ ಆದರೂ ಸನಾತನ ಹಿಂದು ಧರ್ಮ ಪ್ರತಿ ನಿತ್ಯ ಪುಟಿದೇಳುವ ರೀತಿ ನಾವೆಲ್ಲರು ಮತ್ತೆ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗ ಸನ್ನಿವೇಶ ಎದುರಾಗಿದೆ ಎಂದು ರಂಭಾಪುರಿ ಶಾಖಾಮಠದ ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿ ಹೇಳಿದರು.

ಆರ್ ಎಸ್ ಎಸ್‌ ಗೆ ನೂರು ವರ್ಷದ ಸಂಭ್ರಮ । ಡಿ.ಎಲ್.ನಂಜುಂಡಸ್ವಾಮಿ ಸಭಾಂಗಣದಲ್ಲಿ ಬೃಹತ್ ಸಮಾವೇಶ

ಕನ್ನಡಪ್ರಭ ವಾರ್ತೆ, ಬೀರೂರು: ಜಗತ್ತಿನಾಧ್ಯಂತ ಏನೇ ಆದರೂ ಸನಾತನ ಹಿಂದು ಧರ್ಮ ಪ್ರತಿ ನಿತ್ಯ ಪುಟಿದೇಳುವ ರೀತಿ ನಾವೆಲ್ಲರು ಮತ್ತೆ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗ ಸನ್ನಿವೇಶ ಎದುರಾಗಿದೆ ಎಂದು ರಂಭಾಪುರಿ ಶಾಖಾಮಠದ ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯ ಸ್ವಾಮಿ ಹೇಳಿದರು.ಪಟ್ಟಣದ ಶ್ರೀ ಗಣಪತಿ ಪೆಂಡಾಲ್‌ ಆವರಣದಲ್ಲಿ ಕಡೂರು ತಾಲೂಕು ಹಿಂದೂ ಸಮಾಜೋತ್ಸವ ಸಮಿತಿ ಶನಿವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.ಸನಾತನ ಧರ್ಮವಾದ ಹಿಂದೂ ಧರ್ಮ ಅಂತ್ಯವಿಲ್ಲ. ಕೆಲವು ಮತಗಳು ಯಾವಾಗ ಹುಟ್ಟುತ್ತವೊ ಯಾವಾಗ ಸಾಯುತ್ತವೋ ಗೊತ್ತಿಲ್ಲ. ಹಿಂದು ಧರ್ಮ ಎಲ್ಲಾ ಜಾತಿ, ಮತ, ವರ್ಗಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡು ಜಗತ್ತಿಗೆ ಜ್ಞಾನ, ವಿಜ್ಞಾನ, ಯೋಗ, ಆಯುರ್ವೇದ, ವೇದ ಮತ್ತು ಉಪನಿಷತ್ತು, ಶಾಸ್ತ್ರಗಳನ್ನು ನೀಡಿದ ದೇಶ ಎಂದರೆ ಭಾರತ.

ಹಿಂದೂಗಳಿಗೆ ಸೀಮಿತವಾದ ಭಾರತ ಉಳಿದರೆ ನಿಮ್ಮ ಸಂತಾನ ಉಳಿಯುತ್ತದೆ. ನಿಮ್ಮ ಮನೆ ಮಕ್ಕಳು, ಹೆಣ್ಣು ಮಕ್ಕಳನ್ನು ಕಾಪಾಡುವುದು ಆರ್ ಎಸ್ ಎಸ್‌ ಸ್ವಯಂ ಸೇವಕರಿಂದ ಮಾತ್ರ ಸಾಧ್ಯ, ಇಂಗ್ಲೆಂಡಿನ ಮೆಕಾಲೆ ಶಿಕ್ಷಣ ಪದ್ಧತಿಯನ್ನು ಭಾರತದ ಮೇಲೆ ಹೇರಲು ಪ್ರಯತ್ನಗಳು ನಡೆದವು ಆದರೆ ನಮ್ಮ ಸನಾತನ ಪದ್ಧತಿಯನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅನೇಕರು ದೇಶದ ಮೇಲೆ ದಾಳಿ ನಡೆಸಿ ಸಂಪತ್ತನ್ನು ಕೊಳ್ಳೆ ಹೊಡೆದರು ಆದರೆ ನಮ್ಮ ಸನಾತನ ಸಂಸ್ಕೃತಿ ಯಾರಿಂದಲೂ ದೋಚಲು ಸಾಧ್ಯ ವಾಗಲಿಲ್ಲ. ಈ ದೇಶ, ಜಲ, ನೆಲದ ಬಗ್ಗೆ ಚಿಂತನೆ ಇರಬೇಕು. ಸನಾತನ ಧರ್ಮಕ್ಕೆ ಎಂದಿಗೂ ಜಯ ವಾಗಲಿದೆ ಸಂಘಟನೆಗೆ ಒತ್ತು ನೀಡಿ ನೂರು ವರ್ಷಗಳ ಸಂಭ್ರಮದಲ್ಲಿರುವ ಸಂಘಕ್ಕೆ ಬಲ ನೀಡಿದರೆ ನಮ್ಮನ್ನು ನಾವು ಉಳಿಸಿಕೊಂಡಂತೆ ಇಲ್ಲವಾದರೆ ಮುಂದೊಂದು ದಿನ ಸಂಕಷ್ಟ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಶ್ರೀಗಳು ನೀಡಿದರು.ಸಾಮಾಜಿಕ ಕಾರ್ಯಕರ್ತ ವಿಕಾಸ್‌ ಪುತ್ತೂರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ಹಿಂದೂ ಸಮಾಜ ಒಗ್ಗೂಡಿಸಿ ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆ ಆಧಾರದ ಮೇಲೆ ಪುನರುತ್ಥಾನ ಮಾಡಿ ನವ ಭಾರತ ಕಟ್ಟಬೇಕು ಎಂದು ಪಣತೊಟ್ಟು ಪ್ರಾರಂಭವಾದ ಸಂಘವೇ ಆರ್ ಎಸ್ ಎಸ್‌. ಇದೀಗ ನೂರು ವರ್ಷ ತುಂಬಿದ ನೆನಪಿಗೆ ಹಿಂದೂ ಸಮಾಜೋತ್ಸವ ದೇಶದಾದ್ಯಂತ ನಡೆಯುತ್ತಿದೆ ಎಂದು ತಿಳಿಸಿದರು.

ಆರ್ ಎಸ್ ಎಸ್‌ ಮೂಲ ಉಸಿರೇ ಹಿಂದುತ್ವ, ಹಿಂದುತ್ವದ ಬಗ್ಗೆ ಇಲ್ಲ ಸಲ್ಲದ ಮಾತುಗಳು ಕೇಳಿಬಂದವು, ಆಡಳಿತಾರೂಢ ರಾಜಕೀಯ ಪಕ್ಷ ಆರ್ ಎಸ್ ಎಸ್‌ ಬ್ಯಾನ್ ಮಾಡಿದರೂ ಬೆನ್ನು ತೋರಿಸದೆ ಗುರಿ ಮುಟ್ಟ ಬೇಕೆಂಬ ನಿಟ್ಟಿನಲ್ಲಿ ತನ್ನ ಕೆಲಸ ಮುಂದುವರಿಸಿದೆ.ವಿಶ್ವ ಹಿಂದೂ ಪರಿಷತ್, ವಿದ್ಯಾರ್ಥಿ ಪರಿಷತ್‌ ನಂತಹ 50ಕ್ಕೂ ಹೆಚ್ಚು ಸಂಘಟನೆಗಳ ಪರಿವಾರ ಇಟ್ಟುಕೊಂಡು ಆರ್ ಎಸ್ ಎಸ್‌ ಸಂಘಟನೆ ಮುಂದುವರಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಪ್ರತಿಮಂಡಲದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಗಳ ಮೂಲಕ ಹಿಂದೂಗಳು ಒಗ್ಗೂಡುತ್ತಿದ್ದಾರೆ.ನೂರು ವರ್ಷದಲ್ಲಿ ಏನನ್ನು ಸಾಧಿಸಿದೆ ಸ್ವಾತಂತ್ರ ಪೂರ್ವ ನಂತರ ಭಾರತ ಹೇಗಿದೆ? ಪಾಕಿಸ್ತಾನ, ಬಾಂಗ್ಲ, ಅಫ್ಘನಿಸ್ಥಾನ,ಮಲೇಶಿಯ ಬೇರೆಯಾಗಿದೆ. ಅನಾದಿಕಾಲದಿಂದ ಈ ನೆಲದ ಮೂಲ ಸಂಸ್ಕೃತಿಯಡಿ ಜಾಗೃತಿ ಮೂಡಿಸಿ ಸಂಘಟನೆ ಕಟ್ಟಬೇಕೆಂಬುದೇ ಮೂಲಗುರಿಯಾಗಿದೆ.ಹಿಂದೂಗಳನ್ನು ಜಾತಿ ಎಂದು ಗುರುತಿಸಿ ಒಡೆಯುವ ಹುನ್ನಾರ ನಡೆಯುತ್ತಿದೆ ನಮ್ಮ ದೇವಾಲಯದ ಮೇಲೆ ಧ್ವಜ ಹಾರಿಸಲು ಸರ್ಕಾರಗಳು ಬಿಡುತ್ತಿಲ್ಲ ಎಂದರೆ ಭಾರತ ಎತ್ತ ಸಾಗುತ್ತಿದೆ ಯೋಚಿಸಿ ಸನಾತನ ಹಿಂದು ಧರ್ಮ ಎತ್ತ ಸಾಗುತ್ತಿದೆ ಇದು ಮುಂದುವರಿದರೆ ಮುಂದೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಲಿಷ್ಠ ಭಾರತ ಕಟ್ಟಲು ಆರ್ ಎಸ್ ಎಸ್‌ ಸಂಘಟನೆ ಬೆಳೆದರೆ ಜಗತ್ತಿನಲ್ಲಿಯೆ ಬೆಳಕು ಚೆಲ್ಲುತ್ತದೆ ಎಂದರು.ಬೀರೂರಿನ ಸವಿತಾ ಜಗದೀಶ್ ಮಾತನಾಡಿ ಹೆಣ್ಣನ್ನು ಮಾತೃ ಭೂಮಿಗೆ ಹೋಲಿಸುತ್ತಾರೆ ಇಂತಹ ದೇಶ ದಲ್ಲಿ ಹುಟ್ಟಿರುವ ನಾವುಗಳೇ ಪುಣ್ಯವಂತರು ದೇಶದ ತಾಯಿ ಬೇರನ್ನು ರಕ್ಷಿಸುವ ಕೆಲಸವಾಗಬೇಕಾಗಿದೆ ಇಂತಹ ತಾಯಿ ಬೇರು ಬಿಡಲು ಅನೇಕರ ಶ್ರಮ ಇದೆ ಅವರಲ್ಲಿ ಶಿವಾಜಿ ಮಹಾರಾಜ್, ಅಹಲ್ಯ,ರಾಣಿ ಚನ್ನಮ್ಮ ಅವರಂತಹವರನ್ನು ನೆನೆಯಬೇಕು. ಯುವಕರು ಹಿಂದೂಗಳ ಶಕ್ತಿಯಾಗಿ ನಿಲ್ಲಬೇಕು ಮಹಿಳೆಯರು ಮನೆಯಿಂದಲೆ ಮಕ್ಕಳಿಗೆ ಹಿಂದು ಸಂಘಟನೆಗಳ ಬಗ್ಗೆ ತಿಳಿಸಬೇಕು ಎಂದು ಕರೆ ಬೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀರೂರು ಅರೇಕಲ್ ಆರ್.ಪ್ರಕಾಶ್ ವಹಿಸಿದ್ದರು. ಆಯೋಜನ ಸಮಿತಿ ಅಧ್ಯಕ್ಷ ಅಡಿಕೆ ಚಂದ್ರ, ಮಾಜಿ ಶಾಸಕ ಬೆಳ್ಳಿಪ್ರಕಾಶ್, ಬಿಜೆಪಿ ಘಟಕದ ಅಧ್ಯಕ್ಷ ದೇವಾನಂದ, ಟಿ.ಆರ್. ಲಕ್ಕಪ್ಪ, ಕಾವೇರಿ ಲಕ್ಕಪ್ಪ, ಬೀರೂರು ಕಡೂರು ಹಿಂದೂ ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇದ್ದರು.

24ಬೀರೂರು 1ಬೀರೂರು ಪಟ್ಟಣದಲ್ಲಿ ಶನಿವಾರ ಹಿಂದೂ ಸಮಾಜೋತ್ಸವ ಶೋಭಾಯಾತ್ರೆಯಲ್ಲಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ ನೂರಾರು ಆರ್ಎಸ್ಎಸ್ ಕಾರ್ಯಕರ್ತರೊಂದಿಗೆ ಪಾಲ್ಗೊಂಡಿದ್ದರು.24 ಬೀರೂರು 2ಬೀರೂರಿನ ಗಣಪತಿ ಪೆಂಡಾಲ್ನಲ್ಲಿ ಹಿಂದೂ ಸಮಾಜೋತ್ಸವ ಯೋಜನಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಪುತ್ತೂರು ವಿಕಾಸ್ ಉದ್ಘಾಟಿಸಿದರು.ರುದ್ರಮುನಿ ಶ್ರೀಗಳು,ಅಡಿಕೆಚಂದ್ರು ಇದ್ದರು.