ಹಿರೇಮಠ ಶ್ರೀಗಳ ಜನ್ಮವರ್ಧಂತಿ ಆಚರಣೆಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ
ಕನ್ನಡಪ್ರಭ ವಾರ್ತೆ, ತುಮಕೂರುನಗರದ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ 65 ನೇ ಜನ್ಮವರ್ಧಂತಿಯನ್ನು ಭಾನುವಾರ ಭಕ್ತರು ಭಕ್ತಿ, ಸಂಭ್ರಮದಿಂದ ಆಚರಿಸಿದರು. ಇದರ ಅಂಗವಾಗಿ ಮಠದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್‌ಅವರು ಸ್ವಾಮೀಜಿಗಳೊಂದಿಗೆ 65 ದೀಪಗಳನ್ನು ಬೆಳಗಿ ಜನ್ಮವರ್ಧಂತಿಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಮಾಡಿದರು.ತಮ್ಮ 65ನೇ ಜನ್ಮವರ್ಧಂತಿಯ ಸಂದರ್ಭದಲ್ಲಿ ಬೆಳಿಗ್ಗೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಶ್ರೀಮಠದ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿದರು. ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ, ಎಸ್. ನಾಗಣ್ಣ, ವೀರಶೈವ ಸಮಾಜ ಸೇವಾ ಸಮಿತಿ ಮುಖಂಡರು, ವೀರಶೈವ ಸಹಕಾರ ಬ್ಯಾಂಕ್ ಸೇರಿದಂತೆ ಸಮಾಜದ ವಿವಿಧ ಅಂಗಸಂಸ್ಥೆಗಳ ಪದಾಧಿಕಾರಿಗಳು, ನಗರದ ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಹಲವು ಗಣ್ಯರು ಆಗಮಿಸಿ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಿದರು.ಆಗಮಿಸಿದ್ದ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀಗಳ ನೇತೃತ್ವದಲ್ಲಿ ಲಿಂಗದೀಕ್ಷಾಕಾರ್ಯಕ್ರಮ ನೆರವೇರಿದವು. ಸಜ್ಜನಗೋಷ್ಠಿ, ಸದ್ಭಾವನಾಗೋಷ್ಠಿ, ಸತ್ಸಂಗಗೋಷ್ಠಿ, ಸತ್ಕಥಾಗೋಷ್ಠಿ, ಸಂಜೀವಿನಿಗೋಷ್ಠಿ, ಸಾಧುವಾದಗೋಷ್ಠಿ, ಶಿವಸಹಸ್ರನಾಮಗೋಷ್ಠಿ, ಸತ್ಕಾವಿತಾವಾಚನಾಗೋಷ್ಠಿ, ಸದಾಶಯಗೋಷ್ಠಿ ಮತ್ತುಗೀತಗೋಷ್ಠಿಗಳು ನಡೆದವು. ನಿವೃತ್ತ ಪ್ರಾಧ್ಯಾಪಕಡಾ.ಎಂ.ಪಿ.ಶಂಕರಪ್ಪನವರು ರಚಿಸಿರುವ ‘ತುಮಕೂರಿನಆನಂದ ಶ್ರೀ ಶಿವಾಚಾರ್ಯ ಗುರುಗಳು’ ಎಂಬ ಗೀತೆಯಧ್ವನಿಮುದ್ರಿಕೆ ಬಿಡುಗಡೆ ಮಾಡಿ ಸ್ವಾಮೀಜಿಗಳಿಗೆ ಸಮರ್ಪಣೆ ಮಾಡಲಾಯಿತು.ಈ ಗೀತೆಗೆ ಸಿದ್ಧೇಂದ್ರಕುಮಾರ್ ಧ್ವನಿ ನೀಡಿದ್ದಾರೆ, ದೇವೇಂದ್ರಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.ಪ್ರಸ್ತುತ ಸಂದರ್ಭದ ಯುದ್ಧದ ದುಷ್ಪರಿಣಾಮಗಳನ್ನು ಕುರಿತುಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬರೆದಿರುವ ಲೇಖನ ಹಾಗೂ ತಮ್ಮ ೬೫ ವರ್ಷಗಳ ಪೂರ್ವಭಾವಿ ಲೇಖನವನ್ನುಇದೇ ವೇಳೆ ಓದುಗರಿಗೆಅರ್ಪಣೆ ಮಾಡಲಾಯಿತು.