ಮೈಸೂರು ಆಕಾಶವಾಣಿ ಕೇಂದ್ರದ ಪ್ರಗತಿಗೆ ದುಡಿಯುತ್ತಿರುವವರು....

| Published : Sep 10 2024, 01:33 AM IST

ಮೈಸೂರು ಆಕಾಶವಾಣಿ ಕೇಂದ್ರದ ಪ್ರಗತಿಗೆ ದುಡಿಯುತ್ತಿರುವವರು....
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮೈಸೂರು ಆಕಾಶವಾಣಿ ಕೇಂದ್ರದ ಪ್ರಗತಿಗೆ ದುಡಿಯುತ್ತಿರುವವರು....ಎಸ್‌.ಎಸ್‌. ಉಮೇಶ್

ಮೈಸೂರು ಆಕಾಶವಾಣಿಯ ನಿಲಯ ನಿರ್ದೇಶಕರು. ಬಾನುಲಿ ನಾಟಕದ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಪರಿಣಿತರು. ಇವರ ನಿರ್ಮಾಣದ ನಾಟಕಗಳಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ಪ್ರಶಸ್ತಿಗಳು ಲಭಿಸಿವೆ. ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಧ್ವನಿಯಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ, ಎಸ್.ಎಲ್.ಭೈರಪ್ಪ ಅವರ ದೂರಸರಿದರು, ತ್ರಿವೇಣಿಯವರ ತಾವರೆಕೊಳ, ನಾ.ಕಸ್ತೂರಿ ಅವರ ಪಾತಾಳದಲ್ಲಿ ಪಾಪಚ್ಚಿ, ಅ.ನ.ಕೃ ಅವರ ಉದಯರಾಗ ಕಾದಂಬರಿಗಳು ಕಾದಂಬರಿ ವಿಹಾರ ಶೀರ್ಷಿಕೆಯಲ್ಲಿ ಸರಣಿ ರೂಪವಾಗಿ ಪ್ರಸಾರವಾಗಿ ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ.

---

ಅಬ್ದುಲ್ ರಶೀದ್

ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ. ಕನ್ನಡದ ಪ್ರಸಿದ್ಧ ಕವಿ, ಕಾದಂಬರಿಕಾರ, ಅಂಕಣಕಾರ, ಕಥೆಗಾರ ಹಾಗೂ ಅನುವಾದಕ. ಹೂವಿನಕೊಲ್ಲಿ ಇವರ ಪ್ರಸಿದ್ಧ ಕಾದಂಬರಿ. ಅಂತಾರಾಷ್ಟ್ರೀಯ ಕುಂಬಳಕಾಯಿ ಇವರ ಕಥಾಸಂಕಲನ. ಕೇಂದ್ರ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಲ್ಲದೆ ಹಲವು ಸಂಘ ಸಂಸ್ಥೆಗಳ ಪುರಸ್ಕಾರಗಳೂ ಇವರ ಸಾಹಿತ್ಯ ಕೃತಿಗೆ ಸಂದಿವೆ. ಹಾದಿಯಲ್ಲಿ ಕಂಡ ಮುಖ, ಹಳ್ಳಿಹಾಡು, ಹೀಗೆದೆ ನೋಡಿ ನಮ್ಮ ಜೋಡಿ ಇವರ ಜನಪ್ರಿಯ ಕಾರ್ಯಕ್ರಮಗಳು. ಮೇಘಾಲಯದ ಶಿಲ್ಲಾಂಗ್, ಲಕ್ಷದ್ವೀಪದ ಕವರತ್ತಿ ಅಲ್ಲದೆ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

----

ಟಿ.ವಿ. ವಿದ್ಯಾಶಂಕರ್

ಪ್ರಸ್ತುತ ಮೈಸೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕ. ಆರೋಗ್ಯ, ಯುವವಾಣಿ, ಸಂಗೀತ ವಿಭಾಗಗಳಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ರಾಜ್ಯದ ವಿವಿಧ ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

-----

ಎನ್. ಕೇಶವಮೂರ್ತಿ

ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಸಂಯೋಜಕರು. ಕೃಷಿ ವಿಷಯದಲ್ಲಿ ಪದವೀಧರ. ಕೃಷಿರಂಗ, ಕಿಸಾನ್ ವಾಣಿ ಕಾರ್ಯಕ್ರಮಗಳಲ್ಲಿ ಪ್ರಗತಿಪರ ರೈತರು, ಕೃಷಿ ತಜ್ಞರು, ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂರ್ದಶಿಸುವ ಮೂಲಕ ಕೃಷಿಕ ಸಮುದಾಯಕ್ಕೆ ಮಹತ್ವಪೂರ್ಣ ಮಾಹಿತಿಯನ್ನು ನೀಡುತ್ತಾ ಬರುತ್ತಿದ್ದಾರೆ. ಹತ್ತು ಹಲವು ರೂಪಕಗಳನ್ನು ಆಕಾಶವಾಣಿಗಾಗಿ ನಿರ್ಮಿಸಿದ್ದಾರೆ.

-----------------

ಬೇದ್ರೆ ಎನ್. ಮಂಜುನಾಥ್

ಮೈಸೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ. ವೃತ್ತಿ ಮಾರ್ಗದರ್ಶನ, ಯುವವಾಣಿ, ಆರೋಗ್ಯ ಕಾರ್ಯಕ್ರಮಗಳು ಶ್ರೋತ್ರುಗಳ ಪ್ರಶಂಸೆಗೆ ಪಾತ್ರವಾಗಿವೆ.

-------------

ಜಿ. ಶಾಂತಕುಮಾರ್

ಮೈಸೂರು ಆಕಾಶವಾಣಿಯ ಪ್ರಸಾರ ನಿರ್ವಾಹಕ. ಪಂಪನ ಪೆಂಪು, ಆದಿಕವಿ ಪಂಪನ ಭಾರತದ ನಾಟಕೀಯ ಪ್ರಸಂಗಗಳ ರೇಡಿಯೋ ಸರಣಿ. ಬಣ್ಣದ ಬಾನಾಡಿಗಳು. ಮೈಸೂರಿನ ಹಕ್ಕಿಗಳ ಕುರಿತು ಸರಣಿ. ಕಾಡಿನಲ್ಲಿನ ಕತೆಗಳು. ಕಾಡಿನ ಕುರಿತು ಬಿಡಿ ಬಿಡಿ ಅನುಭವಗಳ ಸಮಗ್ರ ಚಿತ್ರಣ ಸರಣಿ. ಕಾಡು ಹಾಗೂ ಪರಿಸರ ಕುರಿತ ಅನೇಕ ಕ್ರಾರ್ಯಕ್ರಮಗಳು.

-----

ಜಾಂಪಣ್ಣ ಆಶೀಹಾಳ್

ಮೈಸೂರು ಆಕಾಶವಾಣಿಯಲ್ಲಿ ಪ್ರಸಾರ ನಿರ್ವಾಹಕ. ’ಮಾತಿಗೆ ಸಿಕ್ಕಜನ’, ’ಸೈಕಲ್ ಸವಾರಿ -ಮಾತಿನ ಲಹರಿ’ ಮೈಸೂರು ಜಂಕ್ಷನ್ ಸಪ್ತಾಹಿಕ ಕಾರ್ಯಕ್ರಮಗಳ ಪ್ರಸ್ತುತಿ.

----------

ಬಿ. ದಿಗ್ವಿಜಯ್

ಮೈಸೂರು ಆಕಾಶವಾಣಿಯ ಪ್ರಸಾರ ನಿರ್ವಾಹಕ. ಯುವವಾಣಿ, ಆರೋಗ್ಯ ಕಾರ್ಯಕ್ರಮಗಳಲ್ಲದೆ ಗೇಮ್ ಶೋ ವಿನೂತನ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

---------------

ಪ್ರಭುಸ್ವಾಮಿ.ಸಿ.ಮಳೀಮಠ್

ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕ. ಚಟ್ ಪಟ್ ಚುರುಮುರಿ ಹತ್ತು ವರ್ಷ ಪೂರೈಸಿದೆ. ಲಾಕ್ ಡೌನ್ ಕಥೆಗಳು ಹಾಗೂ ಲಾಕ್ ಡೌನ್ ಕಥಾನಾಟಕ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಕನ್ನಡಿಯಲ್ಲಿ ಕಂಡತೆ - ಪ್ರಹಸನ ಮಾಲಿಕೆ. ಒಂದೇ ಕಥೆ - ವಿವಿಧ ಮುಖ, ಕಥೆಯಲ್ಲಿದೆ ಉತ್ತರ, ನಾಟಕ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಕಾರ್ಯಪ್ರವ್ರುತ್ತರಾಗಿದ್ದಾರೆ. ದಸರಾ ಜಂಬೂ ಸವಾರಿ ವೀಕ್ಷಕ ವಿವರಣೆಗಾರ. ಸೋಲಿಗರ ದೈವ ದೊಡ್ಡ ಸಂಪಿಗೆ ಕುರಿತ ರೂಪಕಕ್ಕೆ ರಾಷ್ಟ್ರಮಟ್ಟದ ಆಕಾಶವಾಣಿ ಪ್ರಶಸ್ತಿ ಪಡೆದಿದ್ದಾರೆ.

-----------

ಡಾ.ಮೈಸೂರು ಉಮೇಶ್

ಮೈಸೂರು ಆಕಾಶವಾಣಿಯ ಹಿರಿಯ ಉದ್ಘೋಷಕ. ಜಾನಪದ ವಿದ್ವಾಂಸರ ಜಾನಪದ ಕ್ಷೇತ್ರ ಕಾರ್ಯ ಕುರಿತ ಸಾಲಿಟ್ಟು ಹಣತೆ ಬೆಳಗೀವು, ಜನಪದ ಮಹಾಕಾವ್ಯಗಳ ಕಥಾನಕಗಳನ್ನು ಕುರಿತ ನೆಲದ ಹಾಡು, ನೆಲ ಮೂಲ. ಹಳ್ಳಿ ಹಾಡು - ಜನಪದ ಹಾಡುಗಾರರ ಸಂದರ್ಶನ ಮತ್ತು ಗಾಯನ. ನಮ್ಮೂರ್ ಹೆಸರು - ಊರ ಹೆಸರಿನ ಕಥೆಗಳು, ನಮಸ್ತೆ ಮೈಸೂರಿಗೆ - ಇವುಗಳು ಇವರ ಪ್ರಸ್ತುತಿಯ ಕಾರ್ಯಕ್ರಮಗಳು. ದಸರಾ ಜಂಬೂ ಸವಾರಿ ವೀಕ್ಷಕ ವಿವರಣೆಗಾರ. ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ.

-------------------

ತುಮಕೂರು ಬಿ. ರವಿಶಂಕರ್

ಮೈಸೂರು ಆಕಾಶವಾಣಿ ನಿಲಯದ ಮೃದಂಗ ಕಲಾವಿದ. ರಾಜ್ಯ ಮತ್ತು ರಾಷ್ಟ್ರಮಟ್ಟದ ಶಾಸ್ತ್ರೀಯ ಸಂಗೀತ ಕಲಾವಿದರ ಜೊತೆ ಮೃದಂಗ ಸಹಕಾರ ನೀಡಿದ್ದಾರೆ. ದೇಶ-ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರದು.

-------------

ಎಚ್. ಎಲ್ . ಶಿವಶಂಕರ ಸ್ವಾಮಿ

ಮೈಸೂರು ಆಕಾಶವಾಣಿ ನಿಲಯದ ಮೃದಂಗ ಕಲಾವಿದ. ಲಯ ಸಂಭ್ರಮ, ಸಂಗೀತ ಸಂಭ್ರಮ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ಶಾಸ್ತ್ರೀಯ ಸಂಗೀತ ಕಲಾವಿದರ ಜೊತೆ ಮೃದಂಗ ಸಹಕಾರ ನೀಡಿದ್ದಾರೆ. ದೇಶ-ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ ಅನುಭವ ಇವರದು.

-------------