ರಾಜ್ಯದ 16 ಹಾಲು ಒಕ್ಕೂಟಗಳು ನಷ್ಟದಲ್ಲಿವೆ

| Published : Jan 28 2025, 12:47 AM IST

ಸಾರಾಂಶ

ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಸಂಗ್ರವಾಗುತ್ತಿದ್ದು, ಪಿರಿಯಾಪಟ್ಟಣ ತಾಲೂಕಿನ 200 ಕ್ಕೂ ಅಧಿಕ ಸಂಘಗಳಿದ್ದು,

ಕನ್ನಡಪ್ರಭ ವಾರ್ತೆ ರಾವಂದೂರುದಕ್ಷಿಣ ಕನ್ನಡ ಜಿಲ್ಲೆಯ ಹಾಲು ಒಕ್ಕೂಟ ಹೊರತು ಪಡಿಸಿದರೆ ರಾಜ್ಯದ 16 ಒಕ್ಕೂಟಗಳು ನಷ್ಟದಲ್ಲಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಹೇಳಿದರು.ಪಿರಿಯಾಪಟ್ಟಣ ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಬಿಎಂಸಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದ 17 ಹಾಲು ಒಕ್ಕೂಟಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲು ಒಕ್ಕೂಟ ಹೊರತು ಪಡಿಸಿ ಉಳಿದ 16 ಒಕ್ಕೂಟಗಳು ನಷ್ಟದಲ್ಲಿವೆ. ರಾಜ್ಯ ಸರ್ಕಾರ ಹೈನುಗಾರರಿಗೆ ಪ್ರತಿ ಲೀ. ಹಾಲಿಗೆ ಸರಾಸರಿ 32 ರು. ದೊರೆಯುತ್ತಿದ್ದು, ಜೊತೆಗೆ ಸರ್ಕಾರ ಪ್ರತಿ ಲೀ.ಗೆ ಜಿಡ್ಡಿನಾಂಶದ ಆಧಾರದ ಮೇಲೆ 5 ರು. ವರೆವಿಗೂ ಪ್ರೋತ್ಸಾಹಧನ ನೀಡುತ್ತಿರುವುದು ದೇಶದಲ್ಲೇ ಪ್ರಥಮ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಸರಕಾರದ ಅವಧಿಯಲ್ಲಿ ಹಾಲು ಉತ್ಪಾದಕರಿಗೆ 5 ರು. ಸಹಾಯಧನ ಹಾಗೂ ಪಶುಭಾಗ್ಯೆ ಯೋಜನೆಯಡಿ ನಾನಾ ಸವಲತ್ತುಗಳನ್ನು ನೀಡಿದ ಪರಿಣಾಮವಾಗಿ ರೈತರು ಹೈನುಗಾರಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು, ಜೀವನೋಪಾಯ ಕಂಡು ಕೊಂಡರು ಎಂದರು.ರಾಜ್ಯದಲ್ಲಿ 1 ಕೋಟಿ ಲೀಟರ್ ಹಾಲು ಸಂಗ್ರವಾಗುತ್ತಿದ್ದು, ಪಿರಿಯಾಪಟ್ಟಣ ತಾಲೂಕಿನ 200 ಕ್ಕೂ ಅಧಿಕ ಸಂಘಗಳಿದ್ದು, ಪ್ರತಿನಿತ್ಯ 1 ಲಕ್ಷ ಲೀ. ಹಾಲು ಉತ್ಪಾದಿಸುತ್ತಿದ್ದು, ಇದರಲ್ಲಿ ಶೇ. 60 ಮಾತ್ರ ಬಳಕೆ ಮಾಡಿಕೊಂಡು ಉಳಿದ ಶೇ.40 ರಷ್ಟನ್ನು ವಿವಿಧ ಹಾಲಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ ಎಂದರು.ಮೈಮುಲ್ ಅಧ್ಯಕ್ಷ ಚಲುವಾರಾಜು ಮಾತನಾಡಿದರು.ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕೆಪಿಸಿಸಿ ಸದಸ್ಯ ಅನಿಲ್ ಕುಮಾರ್, ಮೈಮುಲ್ ನಿರ್ದೇಶಕ ಪ್ರಕಾಶ್, ಸಂಘದ ಅಧ್ಯಕ್ಷ ವಿನೋದ್ ಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ ನಿರ್ದೇಶಕರಾದ ಎಚ್.ಸಿ. ಮಹದೇವ, ಎಚ್.ಜಿ. ದಶರಥರ, ಗೋವಿಂದ, ತಮ್ಮಯ್ಯ, ಎಚ್.ಎಸ್. ಪ್ರಸನ್ನ, ಎಚ್.ಪಿ. ಜವರಪ್ಪ, ಎಚ್.ಜೆ. ಶ್ರೀನಿವಾಸ, ಕವಿತ, ಶಶಿಕುಮಾರ್, ಮಂಜುನಾಯಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಜಿ. ಗಣೇಶ್, ಹಾಲು ಪರೀಕ್ಷಕ ಗೋವಿಂದೇಗೌಡ, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಓ ಸುನಿಲ್ ಕುಮಾರ್, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಸಹಕಾರ ಸಂಘದ ನಿರ್ದೇಶಕ ಮಹಾದೇವ್ ಇದ್ದರು.