ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಸಮಾನತೆಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿನ ಅಸಮಾನತೆ ತೊಲಗಿಸಲು ಸಾಧ್ಯ ಎಂದು ಬಿ. ಮಟಕೆರೆ ಗ್ರಾಪಂ ಅಧ್ಯಕ್ಷ ಎಂ. ನಾಗೇಂದ್ರ ತಿಳಿಸಿದರು. ತಾಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಯ ಬಿ. ಮಟಕೆರೆ ಗ್ರಾಮದ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಡ್ರೀಮ್ ಇಂಡಿಯಾ ಟ್ರಸ್ಟ್ ವತಿಯಿಂದ ಅಸ್ಪೃಶ್ಯತೆ ನಿವಾರಣೆ ಅರಿವು ಮೂಡಿಸುವ ಹೋಬಳಿ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಕಲ್ಪಿಸುವ ಸಲುವಾಗಿ ಎಲ್ಲರಿಗೂ ಶಿಕ್ಷಣ ಪಡೆದು ಕಾನೂನಿನ ಅರಿವು ಪಡೆದುಕೊಂಡು ಜೀವನ ನಡೆಸಬೇಕು. ಸಮಸಮಾಜದಲ್ಲಿ ಸಮಾನತೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು, ಅಸಮಾನತೆ ತೊಲಗಿಸಲು ಎಲ್ಲರೂ ಪಣ ತೊಡಬೇಕು ಎಂದು ಅವರು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮಸ್ವಾಮಿ ಮಾತನಾಡಿ, ಸಮಾಜದಲ್ಲಿ ಅರಿವಿನ ಕೊರತೆ ಇದೆ. ಎಲ್ಲರೂ ಜ್ಞಾನ ಸಂಪಾದನೆಗೆ ಮುಂದಾಗಬೇಕು. ಅನಿಷ್ಟ ಪದ್ಧತಿಗಳನ್ನು ಬದಿಗಿಟ್ಟು ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಎಂದರು.ಡ್ರೀಮ್ ಇಂಡಿಯಾ ಟ್ರಸ್ಟ್ ನಿರ್ದೇಶಕ ವಿ. ಸಚಿನ್ ಮಾತನಾಡಿದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗ್ಯಮ್ಮ, ಬಿಲ್ ಕಲೆಕ್ಟರ್ ಮಹೇಶ್, ಪಂಚಾಯಿತಿ ಸದಸ್ಯರಾದ ದೇವದಾಸ್, ಡ್ರೀಮ್ ಇಂಡಿಯಾ ಟ್ರಸ್ಟ್ ನ ಪದಾಧಿಕಾರಿಗಳಾದ ವಿ. ಸಚಿನ್, ಎಸ್. ರವಿ, ಪ್ರಕಾಶ್, ರಾಜೇಂದ್ರ, ಮಣಿಕಂಠ, ಗೋವಿಂದರಾಜು, ನಾಗೇಂದ್ರ, ಕೃಷ್ಣ, ವೈಕುಂಠ, ಮಹಾವೀರ, ರಾಣಿ, ಸ್ವಪ್ನ, ಕಾವ್ಯ ಇದ್ದರು.