ಸಾರಾಂಶ
ಕುತ್‌ನಾಡು ಬೆರಳಿನಾಡು ಪ್ರೌಢಶಾಲೆ ವಜ್ರಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ನೋಂದಾಯಿತ ಲೀಗ್ ಹಾಕಿ ಪಂದ್ಯವಾಳಿಯ ಪ್ರಥಮ ಕ್ವಾರ್ಟರ್ ಫೈನಲ್‌ನಲ್ಲಿ ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು ತಂಡ 3-0 ಅಂತರದಿಂದ ಕೆಎಸ್‌ಆರ್‌ಸಿ ವಿರಾಜಪೇಟೆ ತಂಡವನ್ನು ಸೋಲಿಸಿ ಸೆಮಿಫೈನಲ್ಸ್ ಪ್ರವೇಶಿಸಿತು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕುತ್‌ನಾಡು ಬೆರಳಿನಾಡು ಪ್ರೌಢಶಾಲೆ ವಜ್ರಮಹೋತ್ಸವ ಪ್ರಯುಕ್ತ ನಡೆಯುತ್ತಿರುವ ನೋಂದಾಯಿತ ಲೀಗ್ ಹಾಕಿ ಪಂದ್ಯವಾಳಿಯ ಪ್ರಥಮ ಕ್ವಾರ್ಟರ್ ಫೈನಲ್‌ನಲ್ಲಿ ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು ತಂಡ 3-0 ಅಂತರದಿಂದ ಕೆಎಸ್‌ಆರ್‌ಸಿ ವಿರಾಜಪೇಟೆ ತಂಡವನ್ನು ಸೋಲಿಸಿ ಸೆಮಿಫೈನಲ್ಸ್ ಪ್ರವೇಶಿಸಿತು. ಅತಿಥಿ ಆಟಗಾರ ಮೋಕ್ಷಿತ್ ಮತ್ತು ಸುಬ್ಬಯ್ಯ ಮತ್ತು ಪೊನ್ನಣ್ಣ ಗಳಿಸಿದ ಗೋಲಿನಿಂದ ಸುಲಭ ಜಯ ಪ್ರಾಪ್ತಿಯಾಯಿತು.ದ್ವಿತೀಯ ಪಂದ್ಯದಲ್ಲಿ ಮಹದೇವರ ಸ್ಪೋರ್ಟ್ಸ್ ಕ್ಲಬ್ ಬಲಂಬೆರಿ ತಂಡದ ಮುಹಮ್ಮದ್ ನಹಿಮ್ ಬೊಟ್ಟಿಯತ್ ನಾಡು ಕುಂದ ತಂಡದ ಸೋಮಣ್ಣ ಗಳಿಸಿದ ಗೋಲಿನಿಂದ ಪೂರ್ಣ ಅವಧಿಯಲ್ಲಿ ಇತ್ತಂಡಗಳು1-1 ಗೋಲಿನ ಸಮಬಲ ಸಾಧಿಸಿದವು. ನಂತರ ಟೈ ಬ್ರೇಕರ್ ನಿಯಮ ಅನ್ವಿಯಸಲಾಯಿತು. ಅಂತಿಮವಾಗಿ 4-2 ಗೋಲುಗಳ ಅಂತರದಿಂದ ಮಹದೇವರ ಸ್ಪೋರ್ಟ್ಸ್ ಕ್ಲಬ್ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಿತು.
ಮೂರನೆ ಪಂದ್ಯದಲ್ಲಿ ಕೊಣನಕಟ್ಟೆ ತಂಡವು 4-0 ಗೋಲುಗಳ ಅಂತರದಿಂದ ಕಿರುಗೂರು ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಜಯ ಗಳಿಸಿ ಸೆಮಿಫೈನಲ್ಸ್ ಪ್ರವೇಶಿಸಿತು ವಿಜೇತ ತಂಡದ ಪರವಾಗಿ ರಂಜಿತ್ 18ನೇ ನಿಮಿಷ, ಯಶ್ವಿನ್ 24 ಹಾಗೂ 59ನೇ ನಿಮಿಷ ನೆರನ್ ಗೋಲು ಗಳಿಸಿದರು.ದಿನದ ಅಂತಿಮ ಪಂದ್ಯದಲ್ಲಿ ಬ್ಲೆಜ್ ಮೂರ್ನಾಡು ತಂಡವು ಸಮೀರ್ 10ನೇ ನಿಮಿಷ ಹಾಗೂ ಹರ್ ಪಾಲ್ 27 ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಮಲ್ಮ ಕಕ್ಕಬೆ ತಂಡವನ್ನು 2-0 ಗೋಲುಗಳ ಅಂತರದಿಂದ ಸೋಲಿಸಿ ಸೆಮಿಫೈನಲ್ಸ್ ಪ್ರವೇಶ ಪಡೆಯಿತು.
ಪಂದ್ಯಾವಳಿ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ತೀರ್ಪುಗಾರರಾಗಿ ವಿನೋದ್ ಕುಮಾರ್, ಕುಪ್ಪಂಡ ದಿಲನ್, ಮೂಕಚಂಡ ನಾಚಪ್ಪ, ಕಲ್ಮಾಡಂಡ ಸೋಮಣ್ಣ ,ಬೊಳ್ಳಚಂಡ ನಾಣಯ್ಯ, ಕರವಂಡ ಅಪ್ಪಣ್ಣ , ಪಟ್ರಪಂಡ ಸಚಿನ್ ಕಾರ್ಯ ನಿರ್ವಹಿಸಿದರು........................
ಇಂದಿನ ಸೆಮಿಫೈನಲ್ ಪಂದ್ಯಗಳು....ಅಪರಾಹ್ನ 1ರಿಂದ ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು-ಮಹದೇವರ ಸ್ಪೋರ್ಟ್ಸ್ ಕ್ಲಬ್ ಬಲಂಬೆರಿ.
ಅಪರಾಹ್ನ 2.30ರಿಂದ ಕೊಣನಕಟ್ಟೆ ಇಲೆವೆನ್-ಬ್ಲೆಜ್ ಮೂರ್ನಾಡು