ಇಳಕಲ್ಲ: ನಗರದ ಇಳಕಲ್ಲ ಅರ್ಬನ್ ಬ್ಯಾಂಕಿನ ತೇರವಾದ ಒಂದು ಸ್ಥಾನಕ್ಕೆ ಚುನಾವಣೆ ಮಾಡಲೇಬೇಕು ಎಂದು ಹೋರಾಟಗಾರ್ತಿ ಲಕ್ಷ್ಮಿಬಾಯಿ ಗಾಜಿ ಆಗ್ರಹಿಸಿದ್ದಾರೆ.
ಇಳಕಲ್ಲ: ನಗರದ ಇಳಕಲ್ಲ ಅರ್ಬನ್ ಬ್ಯಾಂಕಿನ ತೇರವಾದ ಒಂದು ಸ್ಥಾನಕ್ಕೆ ಚುನಾವಣೆ ಮಾಡಲೇಬೇಕು ಎಂದು ಹೋರಾಟಗಾರ್ತಿ ಲಕ್ಷ್ಮಿಬಾಯಿ ಗಾಜಿ ಆಗ್ರಹಿಸಿದ್ದಾರೆ. ಇಳಕಲ್ಲ ನಗರದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಇಳಕಲ್ಲ ಸಹಕಾರಿ ಬ್ಯಾಂಕಿ ದಿ.ಎಂ.ಎಸ್. ಪಾಟೀಲ ಅವರು ನಿಧನರಾದ ಪ್ರಯುಕ್ತ ಆ ಸ್ಥಾನಕ್ಕೆ ಕಾನೂನು ಪ್ರಕಾರ 6 ತಿಂಗಳಲ್ಲಿ ಚುನಾವಣೆ ನಡೆಸಬೇಕು. ಆದರೆ ಇಲ್ಲಿಯವರೆಗೂ ೯ ತಿಂಗಳು ಕಳೆದರೂ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಇಲಾಖೆಯವರು ಈಯವರೆಗೂ ಚುನಾವಣೆ ನಡೆಸುತ್ತಿಲ್ಲ ಎಂಬುದು ನಮ್ಮ ಆರೋಪವಿದೆ. ಬ್ಯಾಂಕಿನವರು ಹಾಗೂ ಜಿಲ್ಲಾ ಸಹಕಾರ ಇಲಾಖೆಯವರು ಎಂ.ಎಸ್. ಪಾಟೀಲ ಇವರ ಸ್ಥಾನಕ್ಕೆ ಯಾರನ್ನೋ ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹಾಗೇನಾದರೂ ಮಾಡಿದರೆ ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗುವೆ. ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡಲು ಮುಂದಾಗುವುದಾಗಿ ಎಂದು ತಿಳಿಸಿದ ಅವರು, ಈ ವಿಷಯವಾಗಿ ತಕರಾರು ಅರ್ಜಿಯನ್ನು ಸಹಕಾರ ಇಲಾಖೆಯ ಜಿಲ್ಲಾಧಿಕಾರಿಗೆ ಮತ್ತು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಿಗೆ ಅರ್ಜಿ ಸಲ್ಲಿದ್ದೇನೆ. ಅವರು ಚುನಾವಣೆ ಪ್ರತಿಕ್ರಿಯೆ ಪ್ರಾರಂಭ ಮಾಡಬೇಕೆಂದು ನನ್ನ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.