ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ಅಂಗವಾಗಿ ಓಕುಳಿ ಸಂಭ್ರಮ

| Published : Mar 27 2024, 01:01 AM IST

ಸಾರಾಂಶ

ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ಜರುಗಿದ ಹಿನ್ನಲೆಯಲ್ಲಿ ದೇವಾಲಯದಲ್ಲಿ ಮಂಗಳವಾರ ವಸಂತೋತ್ಸವ ಪ್ರಯುಕ್ತ ಅವಬೃತ ಸ್ನಾನ ಹಾಗೂ ತೀರ್ಥ ಸ್ನಾನ ಮತ್ತು ಓಕುಳಿ ಸಂಭ್ರಮದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ಜರುಗಿದ ಹಿನ್ನಲೆಯಲ್ಲಿ ದೇವಾಲಯದಲ್ಲಿ ಮಂಗಳವಾರ ವಸಂತೋತ್ಸವ ಪ್ರಯುಕ್ತ ಅವಬೃತ ಸ್ನಾನ ಹಾಗೂ ತೀರ್ಥ ಸ್ನಾನ ಮತ್ತು ಓಕುಳಿ ಸಂಭ್ರಮದಿಂದ ನಡೆಯಿತು.

ಮಂಗಳವಾರ ದಿನದಂದು ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಸ್ವಾಮಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದೇವಾಲಯದ ಪ್ರಹಾಂಗಣದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿದ ನಂತರ ಸಂಪ್ರದಾಯದ ಆಚರಣೆಯಂತೆ ತೀರ್ಥ ಸ್ನಾನದ ಪೂಜಾ ಮಹೋತ್ಸವ ನೆರವೇರಿಸಿ, ದೇವಾಲಯದಲ್ಲಿ ಪ್ರತಿಷ್ಠಾಪಿಸಿ, ಪೂಜಿಸುತ್ತಿರುವ ಎಲ್ಲಾ ಮೂರ್ತಿಗಳು ಹಾಗೂ ಭಕ್ತರಿಗೆ ತೀರ್ಥ ಸ್ನಾನದ ತೀರ್ಥ ಸಂಪ್ರೋಕ್ಷಿಸಿ, ವಸಂತೋತ್ಸವ ಪ್ರಯುಕ್ತ ರಾಜಬೀದಿ ಉತ್ಸವದಲ್ಲಿ ಓಕುಳಿ ಆಚರಿಸಿದ ನಂತರ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥ ಪ್ರಸಾಧ ವಿನಿಯೋಗ ಮಾಡಲಾಯಿತು.

ಹಿರಿಯ ಆಗಮಿಕರಾದ ಅಕ್ಕಿಹೆಬ್ಬಾಳ್ ಶ್ರೀಧರಭಟ್ಟರು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಸಂಪ್ರದಾಯದ ಆಚರಣೆಯಂತೆ ಮಾರ್ಚ್ ೨೪ ರಂದು ಬ್ರಹ್ಮ ರಥೋತ್ಸವ ವೈಭವದಿಂದ ಜರುಗಿದೆ. ಬ್ರಹ್ಮ ರಥೋತ್ಸವ ಪ್ರಯುಕ್ತ ಸಂಪ್ರದಾಯದ ಆಚರಣೆಯಂತೆ ದೇವಾಲಯದಲ್ಲಿ ೯ ದಿನಗಳ ವಿಶೇಷ ಪೂಜಾ ಮಹೋತ್ಸವದಲ್ಲಿ ೯ನೇ ದಿನವಾದ ಮಂಗಳವಾರ ವಸಂತೋತ್ಸವ ಪ್ರಯುಕ್ತ ಅವಬೃತ ಸ್ನಾನ ಹಾಗೂ ತೀರ್ಥ ಸ್ನಾನದ ಅಂಗವಾಗಿ ಓಕುಳಿ ರಥಬೀದಿಯಲ್ಲಿ ಜರುಗಿದೆ ಎಂದರು.

ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಹಿರಿಯ ಆಗಮಿಕ, ಅಕ್ಕಿಹೆಬ್ಬಾಳ್ ಶ್ರೀಧರ ಭಟ್ಟರ ನೇತೃತ್ವದಲ್ಲಿ ನಾರಾಯಣ ಭಟ್ಟರು, ರಾಮಪ್ರಸಾದ್, ಆನೆಕನ್ನಂಬಾಡಿ ರವಿ, ನಾಗರಾಜು, ಅನಂತಪ್ರಸಾದ್, ವಿಜಯಕುಮಾರ್, ವೆಂಕಟೇಶ್, ಪೂಜಾಕೈಂಕರ್ಯ ನೆರವೇರಿಸಿದರು.