ಸವದತ್ತಿಯಲ್ಲಿಂದು ಹೋಳಿ ಸಂಭ್ರಮ

| Published : Mar 25 2024, 12:46 AM IST

ಸಾರಾಂಶ

ಸವದತ್ತಿ: ಬಣ್ಣದ ಹಬ್ಬ ಹೋಳಿ ಆಚರಣೆಗೆ ಪಟ್ಟಣದಲ್ಲಿ ಸಿದ್ಧತೆ ಜೋರಾಗಿದೆ. ಸೋಮವಾರ ಹೋಳಿ ಆಚರಿಸಲಾಗುತ್ತಿದ್ದು, ಕಾಮದಹನದೊಂದಿಗೆ ಹೋಳಿ ಹಬ್ಬ ಆಚರಿಸಲು ಊರಿನ ಪ್ರಮುಖರು ಸೇರಿದಂತೆ ರೈತರು ನಗರದಲ್ಲಿ ಪೂರ್ವ ಸಿದ್ಧತೆ ನಡೆಸಿದರು. ಈ ಹಿನ್ನೆಲೆಯಲ್ಲಿ ಹೋಳಿ ಹಬ್ಬವನ್ನು ಸಂತಸ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆ ಮಾಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಸವದತ್ತಿ

ಬಣ್ಣದ ಹಬ್ಬ ಹೋಳಿ ಆಚರಣೆಗೆ ಪಟ್ಟಣದಲ್ಲಿ ಸಿದ್ಧತೆ ಜೋರಾಗಿದೆ. ಸೋಮವಾರ ಹೋಳಿ ಆಚರಿಸಲಾಗುತ್ತಿದ್ದು, ಕಾಮದಹನದೊಂದಿಗೆ ಹೋಳಿ ಹಬ್ಬ ಆಚರಿಸಲು ಊರಿನ ಪ್ರಮುಖರು ಸೇರಿದಂತೆ ರೈತರು ನಗರದಲ್ಲಿ ಪೂರ್ವ ಸಿದ್ಧತೆ ನಡೆಸಿದರು. ಈ ಹಿನ್ನೆಲೆಯಲ್ಲಿ ಹೋಳಿ ಹಬ್ಬವನ್ನು ಸಂತಸ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆ ಮಾಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನಮ್ಮ ಹಬ್ಬಗಳಲ್ಲಿ ಹೋಳಿ ಹಬ್ಬ ತನ್ನದೇ ಆದ ವಿಶೇಷತೆ ಪಡೆದುಕೊಂಡಿದೆ. ಬಾನುವಾರ ಕಾಮದಹನ ಮಾಡುವ ಮೂಲಕ ಪಟ್ಟಣದಲ್ಲಿ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ಸೋಮವಾರ ನಗರದಲ್ಲಿ ಬಣ್ಣ ದೋಕುಳಿ ನಡೆಯಲಿದೆ. ಪ್ರಪ್ರಥಮವಾಗಿ ಇನಾಮತಿ ಓಣಿಯಲ್ಲಿ ಬೆಳಗ್ಗೆ ಕಾಮದಹನ ಮಾಡಿ ಬಣ್ಣ ದೋಕುಳಿ ಪ್ರಾರಂಭಿಸಲಾಗುತ್ತದೆ. ಉಪ್ಪಾಸಗೇರಿ ಓಣಿ, ಸವಳಭಾವಿ ಓಣಿ, ಅಂಬೇಡ್ಕರ್‌ ನಗರ, ಆನಿ ಅಗಸಿ, ಗಾಂಧಿ ಚೌಕ, ಹೊಸಪೇಟಿ ಓಣಿಗಳಲ್ಲಿ ಹೋಳಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು, ಇಲ್ಲಿಯ ಕಾಮಣ್ಣನ ಮೂರ್ತಿಗಳು ನಗರದ ಪ್ರಮುಖ ಕಾಮಣ್ಣನ ಮೂರ್ತಿಗಳಾಗಿವೆ. ಅದರಲ್ಲಿ ಆನಿ ಅಗಸಿಯ ಕಾಮಣ್ಣನಿಗೆ ಕಸಬಿ ಕಾಮಣ್ಣ ಎನ್ನಲಾಗುತ್ತಿದ್ದು, ಈ ಕಾಮಣ್ಣನ ಗೊಂಬೆಗೆ ಪಾಯಜಾಮ್ ಹಾಕುವುದು ಸಂಪ್ರದಾಯ. ಬಳಿಕ ಅದನ್ನು ದಹನ ಮಾಡಲಾಗುತ್ತದೆ. ಇದರಲ್ಲಿ ಊರಿನ ಎಲ್ಲ ಪ್ರಮುಖರು, ರೈತರು, ಗೌಡರು, ಕುಲಕರ್ಣಿಗಳು ಭಾಗವಹಿಸುತ್ತಾರೆ.