ದಾಂಡೇಲಿ ನಗರದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ, ಬಣ್ಣದಲ್ಲಿ ಮಿಂದೆದ್ದ ಯುವ ಜನತೆ

| Published : Mar 15 2025, 01:01 AM IST

ದಾಂಡೇಲಿ ನಗರದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ, ಬಣ್ಣದಲ್ಲಿ ಮಿಂದೆದ್ದ ಯುವ ಜನತೆ
Share this Article
  • FB
  • TW
  • Linkdin
  • Email

ಸಾರಾಂಶ

ಬಣ್ಣಗಳ ಹಬ್ಬ ಹೋಳಿಯನ್ನು ನಗರದೆಲ್ಲೆಡೆ ಸಡಗರ ಸಂಭ್ರಮದಿಂಂದ ಆಚರಿಸಲಾಯಿತು.

ದಾಂಡೇಲಿ: ಬಣ್ಣಗಳ ಹಬ್ಬ ಹೋಳಿಯನ್ನು ನಗರದೆಲ್ಲೆಡೆ ಸಡಗರ ಸಂಭ್ರಮದಿಂಂದ ಆಚರಿಸಲಾಯಿತು. ಶುಕ್ರವಾರ ಬೆಳಿಗ್ಗೆಯಿಂದಲೇ ಹೋಳಿ ಸಂಭ್ರಮ ನಗರದೆಲ್ಲೆಡೆ ಮನೆಮಾಡಿತ್ತು.

ಹೋಳಿ ಆಚರಣೆಯ ಪ್ರಯುಕ್ತ ನಗರದ ಗಲ್ಲಿಗಲ್ಲಿಗಳಲ್ಲಿ ರಂಗಿನಾಟ ತನ್ನ ಮೆರುಗನ್ನು ಹೆಚ್ಚಿಸಿಕೊಂಡಿತ್ತು. ಮಕ್ಕಳು ಮಹಿಳೆಯರು ವಯೋವೃದ್ಧರು ಎನ್ನದೇ ಪರಸ್ಪರ ಬಣ್ಣ ಎರಚಿ ಹೋಳಿ ಹಬ್ಬವನ್ನು ಆಚರಿಸಿಕೊಂಡರು. ಪ್ರಮುಖ ವಿಶೇಷವೆಂದರೆ ನಗರದಲ್ಲಿ ಎಲ್ಲ ಜಾತಿ, ಮತ, ಧರ್ಮದವರು ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಸರ್ವಧರ್ಮ ಸಮನ್ವಯತೆ ಸಾರಿದರು. ನಗರದ ಸೋಮಾನಿ ವೃತ್ತದಲ್ಲಿ ನಂದಿಶ ಮುಂಗರವಾಡಿ ಮತ್ತು ಅವಿನಾಶ ಗೊಡಕೆ ಗೆಳೆಯರ ಬಳಗದ ವತಿಯಿಂದ ಕುಳಗಿ ರಸ್ತೆಯಲ್ಲಿ ಸ್ಥಳೀಯ ಗೆಳೆಯರ ಬಳಗದ ಆಶ್ರಯದಡಿ, ಲೆನಿನ್ ರಸ್ತೆಯಲ್ಲಿ ಶಿರಡಿ ಸಾಯಿ ಸೇವಾ ಟ್ರಸ್ಟ್ ಆಶ್ರಯದಡಿ ಮತ್ತು ಗಾಂಧಿನಗರ, ಹಳೆದಾಂಡೇಲಿ, ಆಶ್ರಯ ಕಾಲೋನಿ, ಗಣೇಶನಗರ, ಬೈಲಪಾರ, ಸುಭಾಸನಗರ, ಅಂಬೇವಾಡಿ, ನಿಮರ್ಮಲನಗರ, ಬಸವೇಶ್ವರ ನಗರ, ಸುದರ್ಶನಗರ ಮಾರುತಿ ನಗರ, ೧೪ನೇ ಬ್ಲಾಕ್, ಟೌನಶಿಪ್, ಕುಳಗಿರಸ್ತೆ, ಬಾಂಬೇಚಾಳ, ಹಳಿಯಾಳ ರಸ್ತೆ, ವಿನಾಯಕ ನಗರ, ಮಿರಾಶಿ ಗಲ್ಲಿ, ದೇಶಪಾಂಡೆ ನಗರ, ಪಟೇಲ ನಗರ, ಸಂಡೇಮಾರ್ಕೆಟ ಸೇರಿದಂತೆ ನಗರ ಎಲ್ಲ ವಾರ್ಡಗಳ ಜನರು ಹೋಳಿ ಸಂಭ್ರಮ ಮುಗಿಲು ಮುಟ್ಟಿತ್ತು.

ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಪೊಲೀಸ್ ಇಲಾಖೆಯು ಕರೆನೀಡಿತ್ತು. ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ಜಯಪಾಲ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐಗಳಾದ ಅಮೀನ ಅತ್ತಾರ ಮತ್ತು ಕಿರಣ ಪಾಟೀಲ ನೇತೃತ್ವದ ಪೊಲೀಸ ತಂಡ ಹೋಳಿಹಬ್ಬದ ಶಾಂತಿಯುತ ಆಚರಣೆಗೆ ಸೂಕ್ತ ಕ್ರಮವನ್ನು ಕೈಕೊಂಡಿತ್ತು.