ಯಲ್ಲಟ್ಟಿ ಮಾರುತೇಶ್ವರ ಜಾತ್ರೆಯಲ್ಲಿ ಹಾಲೋಕುಳಿ ಸಂಭ್ರಮ

| Published : May 14 2024, 01:04 AM IST

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ತ ಗ್ರಾಮೀಣ ಪರಂಪರೆ ಬಿಂಬಿಸುವ ಸಂಭ್ರಮದ ಹಾಲೋಕುಳಿ ಜರುಗಿತು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ಮಾರುತೇಶ್ವರ ಜಾತ್ರೆ ನಿಮಿತ್ತ ಗ್ರಾಮೀಣ ಪರಂಪರೆ ಬಿಂಬಿಸುವ ಸಂಭ್ರಮದ ಹಾಲೋಕುಳಿ ಜರುಗಿತು.

ಮಲಗೌಡ ಪಾಟೀಲ ಕಂಬದ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಸಂಜೆ ಜರುಗಿದ ಹಾಲೋಕುಳಿ ಸಂದರ್ಭದಲ್ಲಿ ಹಾಲಗಂಬ ಏರಲು ಯುವಕರು ಹರಸಹಾಸ ಮಾಡಿದರು. ಹಾಲಗಂಬ ಏರುತ್ತಿದ್ದಂತೆ ಮೇಲೆ ಕುಳಿತವರೊಬ್ಬರು ಹಾಲು, ತುಪ್ಪ, ಬಾಳೆಹಣ್ಣಿನ ರಸ ಸೇರಿ ಇತರ ಪದಾರ್ಥಗಳನ್ನು ಏರಚಿ ಜಾರಿಸಲು ಯತ್ನಿಸಿದರು. ಇದನ್ನು ಎದುರಿಸಿ ಯುವಕರು ಕೊನೆಗೂ ಮೇಲೇರಿ ಯಶಸ್ಸು ಕಂಡರು.

ಓಕುಳಿ ಕಮಿಟಿಯ ಹಿರಿಯರಾದ ಚನ್ನಪ್ಪ ಮಗದುಮ್ಮ, ಗುರುಪಾದ ಮೋಪಗಾರ, ಮಹಾದೇವ ಮೋಪಗಾರ, ಸಿದ್ದಪ್ಪ ಮದುರಖಂಡಿ, ಶಂಕರ ಸಂತಿ, ಶಂಕರ ಮಳೆನ್ನವರ, ವಸಂತ ಪಾಟೀಲ, ಗಿರಮಲ್ಲ ತೇಲಿ, ಜಗದೀಶ ಮರನೂರ, ಅಶೋಕ ಕಿತ್ತೂರ ಮತ್ತು ಓಕಳಿ ಕಮಿಟಿಯ ಎಲ್ಲ ಹಿರಿಯರು ಹಾಗೂ ಸಮಸ್ತ ಯಲ್ಲಟ್ಟಿ ಗ್ರಾಮಸ್ಥರು ಇದ್ದರು.