ಸಾರಾಂಶ
ಕಾರ್ಯಕ್ರಮದಲ್ಲಿ ಚಿಣ್ಣರ ನೃತ್ಯ, ತೊದಲು ನುಡಿಯಿಂದ ಬರುವ ರೂಪಕಗಳು ಎಲ್ಲರ ಕಣ್ಮನ ಸೆಳೆಯುವಂತಿತ್ತು
ನರೇಗಲ್ಲ: ಶಾಲೆಗಳಿಗಿಂತ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ, ಮನೆಯಲ್ಲಿ ಉತ್ತಮ ವಾತಾವರಣ ಸೃಜನಾತ್ಮಕ ಕಲಿಕೆಗೆ ಅಣಿ ಮಾಡಬೇಕಾದದ್ದು ಪಾಲಕರ ಗುರುತರ ಜವಾಬ್ದಾರಿಯಾಗಿದೆ ಎಂದು ರೋಣದ ಬೂದೀಶ್ವರ ಮಠದ ಪೀಠಾಧಿಪತಿ ವಿಶ್ವನಾಥ ದೇವರು ಹೇಳಿದರು.
ಅವರು ಸ್ಥಳೀಯ ಮಂಜುನಾಥ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಪಂದನ-2025 ಸ್ನೇಹ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಓಂ ಶಾಂತಿಯ ಸವಿತಕ್ಕ ಮಾತನಾಡಿದರು, ಕಾರ್ಯಕ್ರಮದಲ್ಲಿ ಚಿಣ್ಣರ ನೃತ್ಯ, ತೊದಲು ನುಡಿಯಿಂದ ಬರುವ ರೂಪಕಗಳು ಎಲ್ಲರ ಕಣ್ಮನ ಸೆಳೆಯುವಂತಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೇತ್ರಾ ಅಪ್ಪಣ್ಣವರ ವಹಿಸಿದ್ದರು, ಕಾರ್ಯಕ್ರಮದಲ್ಲಿ ಸಿ.ವಿ. ವಂಕಲಕುಂಟಿ, ಮಲ್ಲೇಶ ಮಾಲಿಗೌಡ್ರ, ಜಗದೀಶ ಮಲ್ಲಣ್ಣವರ ಸೇರಿದಂತೆ ಗಣ್ಯಮಾನ್ಯರು ಉಪಸ್ಥಿತರಿದ್ದರು. ಅಡವಿ ಸೋಮಾಪುರದ ಗೋಣಿಬಸವೇಶ್ವರ ಕಲಾತಂಡದ ಮುಖ್ಯಸ್ಥ ಮುತ್ತಣ್ಣ ಅಂಗಡಿ ಹಾಗೂ ಸಂಗಡಿಗರಿಂದ ಜನಪದ ನೃತ್ಯಗಳು ಜರುಗಿದವು.