ಸಾರಾಂಶ
ಶಿಕ್ಷಣ ತಜ್ಞ, ಉತ್ತಮ ಸಂಸದೀಯ ಪಟು, ಪಕ್ಷದ ಸಂಘಟನೆ ಜೊತೆಗೆ ರಾಜ್ಯದ 8ನೇ ಉಪಮುಖ್ಯಮಂತ್ರಿಯಾಗಿ, 5 ಬಾರಿ ಸಚಿವರಾಗಿ, ಎರಡು ಬಾರಿ ಗೃಹ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವ ಡಾ.ಜಿ.ಪರಮೇಶ್ವರ್ ರಾಜ್ಯದ ಅಪರೂಪದ ಸೂಕ್ಷ್ಮ ಸಂವೇದನ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ 74ನೇ ಹುಟ್ಟುಹಬ್ಬವನ್ನು ಅವರ ಅಭಿಮಾನಿ ಬಳಗದವರು ಬುಧವಾರ ವಿವಿಧ ಸಾಮಾಜಿಕ ಕಾರ್ಯಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಿದರು.ರಾಜ್ಯ ಶೋಷಿತ ಸಮುದಾಯದ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ನೇತೃತ್ವದಲ್ಲಿ ಅಭಿಮಾನಿಗಳು ದೇಗುಲದಲ್ಲಿ ವಿಶೇಷ ಪೂಜೆ, ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಅನ್ನ ದಾಸೋಹ ಮಾಡಿದರು.
ಮೊದಲು ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಸಚಿವ ಡಾ.ಪರಮೇಶ್ವರ್ ಹೆಸರಿನಲ್ಲಿ ಅರ್ಚನೆ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ದೀರ್ಘಾಯುಷ್ಯನೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.ಇದಕ್ಕೂ ಮುನ್ನಾ ಮಂಡ್ಯದ ಮಿಮ್ಸ್ ಹೆರಿಗೆ ವಾರ್ಡ್‌ನ ಆವರಣದ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.
ಈ ವೇಳೆ ಮಾತನಾಡಿದ ಶೋಷಿತ ಸಮುದಾಯದ ವೇದಿಕೆ ರಾಜ್ಯಾಧ್ಯಕ್ಷ ಸುರೇಶ್ ಕಂಠಿ, ಶಿಕ್ಷಣ ತಜ್ಞ, ಉತ್ತಮ ಸಂಸದೀಯ ಪಟು, ಪಕ್ಷದ ಸಂಘಟನೆ ಜೊತೆಗೆ ರಾಜ್ಯದ 8ನೇ ಉಪಮುಖ್ಯಮಂತ್ರಿಯಾಗಿ, 5 ಬಾರಿ ಸಚಿವರಾಗಿ, ಎರಡು ಬಾರಿ ಗೃಹ ಸಚಿವರಾಗಿ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾ ಬಂದಿರುವ ಡಾ.ಜಿ.ಪರಮೇಶ್ವರ್ ರಾಜ್ಯದ ಅಪರೂಪದ ಸೂಕ್ಷ್ಮ ಸಂವೇದನ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಬದುಕು ಮತ್ತಷ್ಟು ಉತ್ತುಂಗ ಕೇರಲಿ ಎಂದು ಆಶಿಸಿದರು.ಈ ವೇಳೆ ಅಭಿಮಾನಿ ಬಳಗದ ಕುಮಾರಸ್ವಾಮಿ, ಪ್ರಾಣೇಶ್, ಸುಂಡಹಳ್ಳಿ ಸಿದ್ದರಾಜು, ಕಾಡುಕೋತನಹಳ್ಳಿ ಮರಿಸ್ವಾಮಿ, ಶಿವಣ್ಣ, ಕರಠಗೆರೆ ಯೋಗೇಶ್, ರವಿಕುಮಾರ್, ತಿಮ್ಮಯ್ಯ, ಮಮತೆಯ ಮಡಿಲು ಮಂಗಲ ಎಂ.ಯೋಗೇಶ್ ಸೇರಿದಂತೆ ಮತ್ತಿತರರು ಇದ್ದರು.