ಸಾರಾಂಶ
ಕನ್ನಡಪ್ರಭವಾರ್ತೆ ನಾಗಮಂಗಲ
ಸಂಘದಲ್ಲಿ ಸದಸ್ಯತ್ವ ಹೊಂದಿರುವ ರೈತರು ಮತ್ತು ಆಡಳಿತ ಮಂಡಳಿಯ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು, ಕಳೆದ ಸಾಲಿನಲ್ಲಿ ೨.೧೯ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯ ಪಡೆದು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೊಣಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಂಗನಹಳ್ಳಿ ಚಂದ್ರಶೇಖರ್ ತಿಳಿಸಿದರು.ಸಂಘದ ಆವರಣದಲ್ಲಿ ಆಯೋಜಿಸಿದ್ದ ಕಳೆದ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ ಒಟ್ಟು ೨೬೨೫ ಷೇರುದಾರರಿದ್ದು, ಈ ಪೈಕಿ ೮೦೩ಮಂದಿ ರೈತರಿಗೆ ವಿವಿಧ ಬಗೆಯ ಸಾಲ ಸೌಲಭ್ಯದ ಜೊತೆಗೆ ೪.೮೦ ಕೋಟಿ ರು.ಗೂ ಹೆಚ್ಚು ಎಂಕೆಸಿಸಿ ಸಾಲ ನೀಡಲಾಗಿದೆ. ೧೭ಮಂದಿ ರೈತರಿಗೆ ೨೬.೯೮ಲಕ್ಷಕ್ಕೂ ಹೆಚ್ಚು ಎಂಟಿಎಲ್ ಸಾಲ, ೧೮ ಮಹಿಳಾ ಸ್ವಸಹಾಯ ಸಂಘಗಳಿಗೆ ೪೧ಲಕ್ಷಕ್ಕೂ ಹೆಚ್ಚು ಸಾಲ ವಿತರಿಸಲಾಗಿದೆ. ಸಂಘದ ನೌಕರರಿಗೆ ೫.೫ ಲಕ್ಷ ರು. ಸಾಲ ನೀಡಲಾಗಿದೆ ಎಂದರು.
ಸಂಘವನ್ನು ಮತ್ತಷ್ಟು ಲಾಭದಾಯಕವಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಶ್ರಮಿಸುತ್ತಿದೆ. ಈ ಭಾಗದ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಘದಿಂದ ಎಲ್ಲಾ ಬಗೆಯ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತಿದೆ. ಸಂಘದ ಕಟ್ಟಡ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸಂಘದಲ್ಲಿ ಶೂನ್ಯ ಬಡ್ಡಿದರದ ಸಾಲ ಪಡೆದಿರುವ ರೈತರು ಸುಸ್ತಿಯಾಗದಂತೆ ನಿಗದಿತ ಅವಧಿಯೊಳಗೆ ಮರುಪಾವತಿಸಿದರೆ ಮತ್ತಷ್ಟು ರೈತರಿಗೆ ಹೊಸದಾಗಿ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.ಸಂಘದ ಮಾಜಿ ಅಧ್ಯಕ್ಷ ಡಿ.ಕೃಷ್ಣೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಚಂದ್ರು ಹಾಗೂ ಮುಖಂಡ ಹೊಣಕೆರೆ ರಮೇಶ್ ಮಾತನಾಡಿದರು.
ಸಂಘದ ಸಿಇಒ ಪಿ.ಶೋಭಾ ಕಳೆದ ಸಾಲಿನ ಜಮಾ ಖರ್ಚು, ಆಡಿಟ್ ವರದಿ, ಲಾಭ ನಷ್ಟಗಳ ವಿವರ ನೀಡಿದರು.ಸಂಘದ ಉಪಾಧ್ಯಕ್ಷೆ ರಮ್ಯ, ನಿರ್ದೇಶಕರಾದ ಅಶೋಕ್, ಜಯೇಂದ್ರ, ನರಸಿಂಹೇಗೌಡ(ಅನಿ) ಎಚ್.ವಿ.ಲೋಕೇಶ್, ಜಿ.ಎಸ್.ಗಂಗಾಧರ, ವಿ.ಪಿ.ಕೃಷ್ಣೇಗೌಡ, ಚಿಕ್ಕತಾಯಮ್ಮ, ಜವರಯ್ಯ, ಬಿ.ಎನ್.ಶಿವಲಿಂಗಯ್ಯ, ವೆಂಕಟಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗಂಗವಾಡಿ ಪುಟ್ಟಸ್ವಾಮಿ, ಅಲ್ಪಹಳ್ಳಿ ಸತೀಶ್‌ಚಂದ್ರ, ಸಂಘದ ಸಿಇಒ ಪಿ.ಶೋಭಾ, ಸಿಬ್ಬಂದಿ ಕೆ.ಬಿ.ದಿವ್ಯ, ಗಂಗಾಧರ್, ಸಿ.ಜೆ.ಅಶ್ವಿನಿ ಸೇರಿದಂತೆ ಹಲವರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))