ಪ್ರಾಮಾಣಿಕ ಪತ್ರಕರ್ತರಿಗೆ ಪ್ರಶಸ್ತಿ ಹುಡುಕಿ ಬರುತ್ತವೆ: ಚಿದಾನಂದಗೌಡ

| Published : Apr 21 2025, 12:49 AM IST

ಪ್ರಾಮಾಣಿಕ ಪತ್ರಕರ್ತರಿಗೆ ಪ್ರಶಸ್ತಿ ಹುಡುಕಿ ಬರುತ್ತವೆ: ಚಿದಾನಂದಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಮಾಣಿಕ ಮತ್ತು ವಸ್ತುನಿಷ್ಠ ವರದಿಗಾರಿಕೆಯಲ್ಲಿ ಎಲೆಮರೆಯ ಕಾಯಂತೆ ಇದ್ದು ಸಮಾಜ ತಿದ್ದುವ ಕಾರ್ಯದಲ್ಲಿ ಮಗ್ನರಾಗುವ ಪತ್ರಕರ್ತರಿಗೆ ಪ್ರಶಸ್ತಿ, ಸನ್ಮಾನಗಳು ತಾವಾಗಿಯೇ ಹುಡುಕಿ ಬರುತ್ತವೆ. ಇಂಥ ಪ್ರವೃತ್ತಿಯಲ್ಲಿರುವವರು ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಹೇಳಿದರು.

ಅಭಿನಂದನಾ ಸಮಾರಂಭ

ಸೊರಬ: ಪ್ರಾಮಾಣಿಕ ಮತ್ತು ವಸ್ತುನಿಷ್ಠ ವರದಿಗಾರಿಕೆಯಲ್ಲಿ ಎಲೆಮರೆಯ ಕಾಯಂತೆ ಇದ್ದು ಸಮಾಜ ತಿದ್ದುವ ಕಾರ್ಯದಲ್ಲಿ ಮಗ್ನರಾಗುವ ಪತ್ರಕರ್ತರಿಗೆ ಪ್ರಶಸ್ತಿ, ಸನ್ಮಾನಗಳು ತಾವಾಗಿಯೇ ಹುಡುಕಿ ಬರುತ್ತವೆ. ಇಂಥ ಪ್ರವೃತ್ತಿಯಲ್ಲಿರುವವರು ಇಂದಿನ ಯುವ ಪತ್ರಕರ್ತರಿಗೆ ಮಾದರಿಯಾಗಿದ್ದಾರೆ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಹೇಳಿದರು.

ಪಟ್ಟಣದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನೀಡಲಾಗುವ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಗೆ ಭಾಜನರಾದ ಎಚ್.ಕೆ.ಬಿ.ಸ್ವಾಮಿ ಅವರಿಗೆ ಹಮ್ಮಿಕೊಂಡ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತ್ರಕರ್ತರಿಗೆ ಸರಳತೆ ಮತ್ತು ಸಜ್ಜನಿಕೆಯೊಂದಿಗೆ ವಸ್ತುನಿಷ್ಠ ವರದಿಗಾರಿಕೆಯಲ್ಲಿ ಗುರುತಿಸಿಕೊಂಡ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಅವರಿಗೆ ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿ ಲಭಿಸಿರುವುದು ತಾಲೂಕಿಗೆ ಹೆಮ್ಮೆಯಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿದ ಪತ್ರಕರ್ತ ಎಚ್.ಕೆ.ಬಿ. ಸ್ವಾಮಿ ಮಾತನಾಡಿ, ತಮಗೆ ಪ್ರಶಸ್ತಿ ಲಭಿಸಿರುವುದಕ್ಕೆ ಪ್ರೆಸ್ ಟ್ರಸ್ಟ್ಗೆ ಅಭಾರಿಯಾಗಿದ್ದೇನೆ ಜೊತೆಗೆ ಅನೇಕ ಪತ್ರಕರ್ತರು ಸಲಹೆ ನೀಡುತ್ತಾ, ಸಹಕಾರವನ್ನು ನೀಡಿದ್ದಾರೆ. ಪ್ರಶಸ್ತಿ ಲಭಿಸಿರುವುದರಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಿದಂತಾಗಿದೆ. ಪ್ರಶಸ್ತಿ ಲಭಿಸಿದ ತರುವಾಯ ಸಂಘ-ಸAಸ್ಥೆಯವರು ಗೌರವಿಸುತ್ತಿರುವುದು ಸಂತಸವಾಗುತ್ತಿದೆ ಎಂದರು.

ಗೋ ಸಂರಕ್ಷಣಾ ಹೋರಾಟ ಸಮಿತಿಯ ಉಪಾಧ್ಯಕ್ಷ ದತ್ತಾ ಸೊರಬ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ, ಕಾರ್ಯದರ್ಶಿ ಶರತ್ ಸ್ವಾಮಿ, ನಾಮದೇವ ಸಿಂಪಿ ಸಮಾಜದ ಉಪಾಧ್ಯಕ್ಷ ಅನಿಲ್ ಕುಮಾರ್ ಬಾಂಬೋರೆ, ಪತ್ರಕರ್ತ ನೋಂಪಿ ಶಂಕರ್, ಪ್ರವೀಣ್‌ಕುಮಾರ್, ಯುವರಾಜ್ ಕಾನುಗೋಡು ಸೇರಿ ಇತರರು ಇದ್ದರು.