ಸಾರಾಂಶ
ಕನ್ನಡಪ್ರಭ ವಾರ್ತೆ ಯಮಕನಮರಡಿ
28 ವರ್ಷಗಳ ಪರಿಶ್ರಮದ ಫಲವಾಗಿ ನಿರ್ದೇಶಕ, ಸರ್ವ ಸದಸ್ಯರ, ಸಿಬ್ಬಂದಿಯವರ ಪ್ರಾಮಾಣಿಕತೆ ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಪೂರಕ ವಾಗಿದೆ ನಮ್ಮ ಸಂಸ್ಥೆಯಲ್ಲಿನ ಪ್ರಾಮಾಣಿಕತೆ ಸಂಸ್ಥೆಯ ಶ್ರೇಯೋಭಿವೃದ್ದಿಗೆ ಭದ್ರ ಬುನಾದಿಯಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ರವಿಂದ್ರ ಜಿಂಡ್ರಾಳಿ ಹೇಳಿದರು,ಭಾನುವಾರ ಯಮಕನಮರಡಿಯ ಬನಶಂಕರಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ದಿ.ಯಮಕನಮರಡಿ ಲಕ್ಷ್ಮೀ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 28ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡಿ, ಸಂಸ್ಥೆ 2024ರ ಮಾರ್ಚ್ ಅಂತ್ಯಕ್ಕೆ 2.773 ಜನ ಸದಸ್ಯರನ್ನು ಹೊಂದಿ ₹9,60,625,00 ಷೇರು ಬಂಡವಾಳ ಹೊಂದಿದೆ, ಒಟ್ಟು ಠೇವು ₹37,62,24,482,94 ಇದ್ದು, ₹3,19,83,871,47 ನಿಧಿಗಳಿವೆ, ₹25,89,68,746,00 ಸಾಲ ನೀಡಿದ್ದು, ₹40,91,68,979,41 ದುಡಿಯುವ ಬಂಡವಾಳ ಹೊಂದಿದೆ. 2023-24ನೇ ಸಾಲಿನಲ್ಲಿ ₹32,61,476,15 ಲಾಭ ಗಳಿಸಿದ್ದು, ಶೇ.20 ಲಾಭಾಂಶ ಹಂಚಲಾಗುವುದು ಎಂದ ಹೇಳಿದರುಮುಖ್ಯ ಅತಿಥಿಗಳಾದ ಎಸ್.ಎಚ್. ಮೂಡಿ ಮತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ₹41 ಕೋಟಿ ಬಂಡವಾಳ ಹೊಂದಿರುವುದು ಸಾಧನೆಯೇ ಸರಿ. ಸಂಸ್ಥೆಯಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆ ಇದ್ದಾಗ ಸಂಸ್ಥೆ ಉತ್ತುಂಗಕ್ಕೆ ಏರುತ್ತದೆ. ಆ ದಿಸೆಯಲ್ಲಿ ಸಂಸ್ಥೆ ಬಡವರು, ಕೃಷಿಕರು, ಸದಸ್ಯರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕೆಂದು ಸಲಹೆ ನೀಡಿದರು.ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಕ್ಷೇತ್ರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಕರು, ಪತ್ರಕರ್ತರನ್ನು ಸತ್ಕರಿಸಲಾಯಿತು, ಅಡಿವೆಪ್ಪ ಜಿಂಡ್ರಾಳಿ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕಪರಿಶೋಧಕ, ಬಿ.ಬಿ. ಚಂದರಗಿ, ಮಾಜಿ, ತಾಪಂ ಸದಸ್ಯರಾದ ದಸ್ತಗೀರ ಬಸ್ಸಾಪೂರಿ, ಸಿದ್ದು ಕುಡಚಿ, ಹತ್ತರಗಿ ಗ್ರಾಪಂ ಅಧ್ಯಕ್ಷ ಸಮೀರ ಬೇಪಾರಿ, ಎಸ್.ವಿ. ಕಂಚಗಾರಟ್ಟಿ, ಪ್ರಧಾನ ವ್ಯವಸ್ಥಾಪಕ ಆರ್.ಎಸ್. ಸೂಜಿ, ರಂಜಾನ್ ನದಾಫ್, ನಿಂಗನಗೌಡ ಪಾಟೀಲ, ಎ.ಎ. ವಂಟಮೂರಿ, ಸಮೀರ ಬೇಪಾರಿ, ಸಮರ್ಥ ಜಿಂಡ್ರಾಳಿ, ಸಾಕ್ಷಿ ಕುಮಾರ, ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಮತ್ತು ಸಂಸ್ಥೆಯ ಸದಸ್ಯರು ಪಾಲ್ಗೊಂಡಿದ್ದರು, ಎಸ್.ಐ. ಅಮ್ಮಿನಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ರೇವಣ್ಣವರ, ನಿರೂಪಿಸಿ ಕೊನೆಯಲ್ಲಿ ಎ.ಬಿ. ಪಾಟೀಲ ವಂದಿಸಿದರು,