ಸಾರಾಂಶ
ದೇವರಹಿಪ್ಪರಗಿ: ಸರ್ಕಾರಿ ನೌಕರಿಯಾಗಲಿ, ಖಾಸಗಿ ಉದ್ಯೋಗದಲ್ಲಾಗಲಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಂಡರೆ ಯಾವ ಟೀಕೆ, ಟಿಪ್ಪಣಿಗಳು ಎದುರಾದರೂ ಕ್ಷಣದಲ್ಲಿ ಮಾಯವಾಗುತ್ತವೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡೀನ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಜಕುಮಾರ ಮಾಲಿಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸರ್ಕಾರಿ ನೌಕರಿಯಾಗಲಿ, ಖಾಸಗಿ ಉದ್ಯೋಗದಲ್ಲಾಗಲಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಂಡರೆ ಯಾವ ಟೀಕೆ, ಟಿಪ್ಪಣಿಗಳು ಎದುರಾದರೂ ಕ್ಷಣದಲ್ಲಿ ಮಾಯವಾಗುತ್ತವೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡೀನ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಜಕುಮಾರ ಮಾಲಿಪಾಟೀಲ ಹೇಳಿದರು .ಸುವರ್ಣ ಕನ್ನಡಿಗ ರಾಜ್ಯ ಪುರಸ್ಕಾರ ಪಡೆದ ಡಾ.ಅಶೋಕಕುಮಾರ ರಾ.ಜಾಧವ ದಂಪತಿಗೆ ವಿಜಯಪುರ ಪಟ್ಟಣದ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ದೇವರಹಿಪ್ಪರಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ.ಅಶೋಕಕುಮಾರ ಜಾಧವ ಇವರ ವೃತಿ ಜೀವನ ಅತ್ಯಂತ ಶ್ರಮದಾಯಕವಾಗಿದೆ. ಕಾಳಜಿಪೂರಕ ಮತ್ತು ಮಾನಸಿಕವಾಗಿ ಪ್ರೀತಿಯಿಂದ ಆ ವೃತಿಯಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಕಾರಣ, ರಾಜ್ಯದ ಅತ್ಯುನ್ನತ ಪುರಸ್ಕಾರ ದೊರತಿದೆ ಎಂದು ಹೇಳಿದರು.
ನಂತರ ಮಹಿಳಾ ವಿಶ್ವವಿದ್ಯಾಲಯದ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಬಾಬು ಲಮಾಣಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.