ಹೊನ್ನಾದೇವಿ ಅಮ್ಮನ ಅದ್ಧೂರಿ ಜಾತ್ರಾ ಮಹೋತ್ಸವ

| Published : Apr 26 2024, 01:00 AM IST

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗೆಯ ಶ್ರೀ ಹೊನ್ನಾದೇವಿ ಅಮ್ಮನವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣ ಕಾಶಿ ಶಿವಗಂಗೆಯ ಶ್ರೀ ಹೊನ್ನಾದೇವಿ ಅಮ್ಮನವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಹೊನ್ನಾದೇವಿ ಅಮ್ಮನವರ ರಥೋತ್ಸವಕ್ಕೂ ಮುನ್ನ ಅಂದರೆ 15 ದಿನಗಳು ಮುಂಚಿತವಾಗಿ ಕಂಬ(ಮಡೆ) ಪೂಜಾಕಾರ್ಯಗಳು ಜರುಗುತ್ತವೆ. ಅಂದಿನಿಂದ ಗ್ರಾಮದಲ್ಲಿ ಮತ್ತು ಮನೆಯಲ್ಲಿಯೂ ಯಾವುದೇ ರೀತಿಯ ಮಾಂಸದೂಟ ನಿಷೇಧಿಸಲಾಗುತ್ತದೆ. ಹೊನ್ನಾದೇವಿ ಅಮ್ಮನವರ ಮೂರ್ತಿಗೆ ವಿಶೇಷವಾಗಿ ಅಲಂಕಾರ ಮಾಡಿ ವಿಶೇಷ ಪೂಜೆ, ಅಭಿಷೇಕ, ಅಗ್ನಿಕೊಂಡ, ಉತ್ಸವಗಳೊಂದಿಗೆ ಮೆರವಣಿಗೆ ದೇವರನ್ನು ಮಂಗಳವಾದ್ಯದೊಂದಿಗೆ ರಥೋತ್ಸವಕ್ಕೆ ಉತ್ಸವ ಮೂರ್ತಿಯನ್ನು ತರಲಾಯಿತು.

ಭಕ್ತರು ಶ್ರದ್ಧಾಭಕ್ತಿಯಿಂದ ಜಯಘೋಷ ಹಾಕಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಮುಂದೆ ಸಾಗುತ್ತಿದ್ದಂತೆ ಭಕ್ತರು ರಥೋತ್ಸವದ ಮೇಲೆ ಸೂರು ಬಾಳೆ ತೂರಿ ಹರಕೆ ತೀರಿಸಿದರು. ರಥೋತ್ಸವದಲ್ಲಿ ಜಾನಪದ ಕಲಾತಂಡಗಳಾದ ವೀರಗಾಸೆ, ನಂದಿಧ್ವಜ ಸೇರಿದಂತೆ ಕರಡಿ ವಾದ್ಯ ಕಲಾತಂಡಗಳು, ಬೃಹತ್ ಗೊಂಬೆಗಳ ಕುಣಿತ ರಥೋತ್ಸವಕ್ಕೆ ಮೆರಗು ತಂದಿತ್ತು.

ಅನ್ನಸಂತರ್ಪಣೆ, ಪಾನಕ ವಿತರಣೆ: ಶ್ರೀ ಹೊನ್ನಾದೇವಿ ಅಮ್ಮನವರ ಬೇಸಿಗೆಯ ಬಿಸಿಗೆ ಭಕ್ತಾಗಳು ತಂಪಾಗಿರಲು ಆಗಮಿಸಿದ್ದ ಭಕ್ತರಿಗೆ ಸ್ಥಳೀಯರು ಅರವಂಟಿಕೆಗಳನ್ನು ಹಾಕಿಕೊಂಡು ಮಜ್ಜಿಗೆ ಸಿಹಿಪಾನಕ ಸೇರಿದಂತೆ ಹೆಸರುಬೇಳೆ ವಿತರಿಸಲಾಯಿತು. ದೇವಾಲಯದ ಸಮಿತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು.