- ರೇಣುಕಾಚಾರ್ಯ ಹೇಳಿಕೆ । ನಗರ ಘಟಕ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಪಟ್ಟಣ ಒಂದು ಬಾರಿ ಬಿಟ್ಟರೆ ಬೇರೆ ಎಲ್ಲ ಚುನಾವಣೆಯಲ್ಲೂ ಬಿಜೆಪಿಗೆ ಅತ್ಯಧಿಕ ಮತಗಳನ್ನು ನೀಡಿ, ಪಕ್ಷಕ್ಕೆ ಶಕ್ತಿ ನೀಡಿದೆ. ವಿಧಾನಸಭೆ, ಲೋಕಸಭೆ ಹಾಗೂ ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಮತಗಳು ಬಂದಿವೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಹೊನ್ನಾಳಿ ನಗರ ಘಟಕ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೊನ್ನಾಳಿ ನಗರ ಹಾಗೂ ತಾಲೂಕು ಯಾವಾಗಲೂ ಬಿಜೆಪಿ ಸಂಘಟನೆಯಲ್ಲಿ ಮುಂದಿದೆ. ಬೂತ್ ಕಮಿಟಿ, ಶಕ್ತಿ ಕೇಂದ್ರ, ಎಸ್‌ಐಆರ್, ಮನ್‌ ಕಿ ಬಾತ್, ಹೀಗೆ ರಾಜ್ಯ ಘಟಕದಿಂದ ನೀಡಿರುವ ಎಲ್ಲ ಸೂಚನೆಗಳನ್ನು ಪಾಲಿಸಿದ್ದೇವೆ. ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಪುರಸಭೆ ಗದ್ದುಗೆ ಹಿಡಿಯುವುದಕ್ಕೆ ಈಗಿನಿಂದಲೇ ತಯಾರಿ ಮಾಡಿಕೊಳ್ಳೋಣ. ನೂತನ ಅಧ್ಯಕ್ಷ ನವೀನ್ ಇಂಚರ ಅವರನ್ನು ಎಲ್ಲರ ಒಮ್ಮತದೊಂದಿಗೆ ಅವಿರೋಧವಾಗಿ ಆಯ್ಕೆಮಾಡಿದ್ದೇವೆ. ಅವರ ನೇತೃತ್ವದಲ್ಲಿ ಪುರಸಭೆ ಚುನಾವಣೆ ಎದುರಿಸೋಣ ಎಂದರು.


ನಗರ ಘಟಕದ ನೂತನ ಅಧ್ಯಕ್ಷ ನವೀನ್ ಇಂಚರ ಮಾತನಾಡಿ, ಅಲಂಕಾರಕ್ಕೆ ನಗರ ಘಟಕದ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಿಲ್ಲ. ಈ ಸ್ಥಾನವನ್ನು ಸವಾಲಾಗಿ ಸ್ವೀಕರಿಸಿ ಮುಂದಿನ ಎಲ್ಲ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಮತ ಗಳಿಸುವುದಕ್ಕೆ ಹಾಗೂ ಪುರಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾನು, ನನ್ನ ಪದಾಧಿಕಾರಿಗಳ ತಂಡ ಕೆಲಸ ಮಾಡುತ್ತೇವೆ. ಇದಕ್ಕೆ ಬಿಜೆಪಿಯ ಎಲ್ಲ ಸ್ತರದ ಕಾರ್ಯಕರ್ತರು ಹಾಗೂ ಪ್ರಮುಖರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಎಂ.ಆರ್.ಮಹೇಶ್, ಕುಬೇರಪ್ಪ, ಎಸ್.ಎಸ್. ಬೀರಪ್ಪ, ನೆಲಹೊನ್ನೆ ಮಂಜುನಾಥ್, ಪಾಲಾಕ್ಷಪ್ಪ, ನಿಂಗಪ್ಪ, ಚಾಟಿ ಶೇಖರ್, ರಘು, ಮಾರುತಿ ನಾಯ್ಕ್, ಬಾಬು ಹೋಬಳದಾರ್, ಶಿವು ಹುಡೇದ್, ಗಿರೀಶ್ ದೊಡ್ಡೇರಿ, ಸರಳಿಮನೆ ಮಂಜಪ್ಪ, ಕುಮಾರಸ್ವಾಮಿ ಹಾಗೂ ಇತರರು ಇದ್ದರು.

- - -

(ಬಾಕ್ಸ್‌)

* ನೂತನ ನಗರ ಘಟಕಕ್ಕೆ ನೇಮಕ

ಬಿಜೆಪಿ ಹೊನ್ನಾಳಿ ನಗರ ಘಟಕದ ಅಧ್ಯಕ್ಷರಾಗಿ ನವೀನ್ ಇಂಚರ, ಉಪಾಧ್ಯಕ್ಷರಾಗಿ ಉಲ್ಲಾಸ್, ಚಾಟಿ ಪುಟ್ಟರಾಜು, ಸಚಿನ್, ರಾಜು ಗುಡ್ಡಜ್ಜಿ, ಓಂಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್, ಚಂದು ಸೂರಿ, ಕಾರ್ಯದರ್ಶಿಗಳಾಗಿ ಅಂಬ್ಲಿ ಕೆಂಚಪ್ಪ, ಮನು, ಲೋಹಿತ್, ಶ್ಯಾಮ್, ಅಮಿತ್ ಮೂಲಿ, ಶಶಿ ಹಾಗೂ ಕಾರ್ಯಕಾರಿ ಸದಸ್ಯರಾಗಿ, ಕಾಡಸಿದ್ದಪ್ಪ, ವಿಜಯಕುಮಾರ್, ಚೇತನ್, ಪರಮೇಶ್, ವಿಶ್ವನಾಥ್, ಶಿವು, ವಿನಯ್, ಚನ್ನೇಶ್, ಗೋಪಾಲಕೃಷ್ಣ, ಗೋಪಿನಾಥ್ ಹಾಗೂ ರಾಜಣ್ಣ ಪೂನಾ ಟೈಲರ್ ಅವರನ್ನು ನೇಮಕ ಮಾಡಲಾಗಿದೆ.

- - -

-28ಎಚ್.ಎಲ್.ಐ1:

ಹೊನ್ನಾಳಿ ಪಟ್ಟಣದ ಗುರು ಭವನದಲ್ಲಿ ಹೊನ್ನಾಳಿ ನಗರ ಘಟಕ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.