ಹೊನ್ನಾಳಿ ಅರ್ಬನ್ ಸೊಸೈಟಿ ಚುನಾವಣೆ; 15 ಸದಸ್ಯರು ಮರು ಆಯ್ಕೆ

| Published : Jan 24 2024, 02:01 AM IST

ಹೊನ್ನಾಳಿ ಅರ್ಬನ್ ಸೊಸೈಟಿ ಚುನಾವಣೆ; 15 ಸದಸ್ಯರು ಮರು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

15 ಮಂದಿ ಸದಸ್ಯರ ಪೈಕಿ ಇಬ್ಬರು ಮಹಿಳೆಯರು, ಎಸ್ಸಿ, ಎಸ್ಟಿ ತಲಾ ಒಬ್ಬರು ಅಭ್ಯರ್ಥಿ ಸೇರಿ ಒಟ್ಟು 4 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ 17 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎಸ್ಸಿ ವಿಭಾಗದಲ್ಲಿ ಡಾ.ರಾಜಾನಾಯ್ಕ, ಎಸ್ಟಿ ವಿಭಾಗದಲ್ಲಿ ಪ್ರಸಾದ್, ಮಹಿಳೆಯರ ಪೈಕಿ ನಾಗರತ್ನಾ ಮತ್ತು ರೂಪಾ ಈ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರೆ ಇನ್ನುಳಿದ 11 ಜನ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಮುಂದಿನ 5 ವರ್ಷದ ಅವಧಿಗೆ ಸದಸ್ಯರ ಆಯ್ಕೆಯ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗಿದ್ದು, ರಾಜ್ ಕುಮಾರ್ ಸೇರಿ ಒಟ್ಟು 15ಮಂದಿ ಸದಸ್ಯರು ಮರು ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಒಟ್ಟು 1, 232 ಮಂದಿ ಮತದಾರರ ಪೈಕಿ 955 ಮಂದಿ ಮತದಾನ ಮಾಡಿದ್ದಾರೆ.

15 ಮಂದಿ ಸದಸ್ಯರ ಪೈಕಿ ಇಬ್ಬರು ಮಹಿಳೆಯರು, ಎಸ್ಸಿ, ಎಸ್ಟಿ ತಲಾ ಒಬ್ಬರು ಅಭ್ಯರ್ಥಿ ಸೇರಿ ಒಟ್ಟು 4 ಮಂದಿ ಅವಿರೋಧ ಆಯ್ಕೆಯಾಗಿದ್ದು, ಉಳಿದ 11 ಸ್ಥಾನಗಳಿಗೆ 17 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಎಸ್ಸಿ ವಿಭಾಗದಲ್ಲಿ ಡಾ.ರಾಜಾನಾಯ್ಕ, ಎಸ್ಟಿ ವಿಭಾಗದಲ್ಲಿ ಪ್ರಸಾದ್, ಮಹಿಳೆಯರ ಪೈಕಿ ನಾಗರತ್ನಾ ಮತ್ತು ರೂಪಾ ಈ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರೆ ಇನ್ನುಳಿದ 11 ಜನ ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನವೀನ್ ಕುಮಾರ್ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಆಯ್ಕೆಯಾದ 11ಮಂದಿ

ಡಾ. ರಾಜ್ ಕುಮಾರ್, ಎಚ್.ಎಂ.ಅರುಣ್ ಕುಮಾರ್, ಎನ್.ಜಯರಾವ್, ನಾಗರಾಜ, ಎಚ್.ಉಮೇಶ್, ಎಚ್.ಬಿ.ಮೋಹನ,7.ಜಿ.ಆರ್. ಪ್ರಕಾಶ್, ಸಿ.ಕೆ.ರವಿಕುಮಾರ್,ವಿರೇಶ್ ಎಚ್.10.ಎಚ್.ಎಂ.ಶಿವಮೂರ್ತಿ(ಹಿಂದುಳಿದ ಅ ವರ್ಗ), ಡಿ.ಎನ್.ಶಾಂತಲಾ.(ಹಿಂದುಳಿದ ಬ ವರ್ಗ) ಉಳಿದವರು ಸಾಮಾನ್ಯ ಮೀಸಲಾತಿಯಿಂದ ಗೆಲುವು ಸಾಧಿಸಿದ್ದಾರೆ. ಚುನಾವಣೆ ಫಲಿತಾಂಶ ಪ್ರಕಟ ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಗಳ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ಷೇರುದಾರರ ಆಶೋತ್ತರಕ್ಕೆ ಸ್ಪಂದಿಸಿ:

ಈ ವೇಳೆ ಗೆದ್ದ ಅಭ್ಯರ್ಥಿ ಡಾ.ರಾಜ್ ಕುಮಾರ್ ಮಾತನಾಡಿ, ಮತದಾರರು ಮತ ನೀಡಿ ಗೆಲ್ಲಿಸಿದ್ದಕ್ಕೆ ಮುಂದಿನ ದಿನಗಳಲ್ಲಿ ಸದಸ್ಯರು ಮತ್ತು ಸೊಸೈಟಿ ಷೇರುದಾರರ ಆಶೋತ್ತರಗಳಿಗೆ ಸ್ಪಂದಿಸಿ ಉತ್ತಮ ಕೆಲಸ ಮಾಡುವೆ ಎಂದು, ಚುನಾವಣೆ ಮೂಲಕ ಹಾರೈಸಿದ್ದಾರೆ, ನಾವುಗಳು ಅವರ ನಿರೀಕ್ಷೆಗೆ ತಕ್ಕಂತೆ ಉತ್ತಮ ಕೆಲಸ ಮಾಡಬೇಕು ಎಂದರು.