ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣದೇವರಾಯ ಚಲನಚಿತ್ರದ ಹಾಡೊಂದನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಗೌರವದಿಂದ ಕಂಡು ಕನ್ನಡ ಭಾಷೆ ಉಳಿವಿಗಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಡಾ.ರಾಜ್‌ಕುಮಾರ್ ಅವರಿಗೆ ಏ.24ರ ಹುಟ್ಟುಹಬ್ಬದ ದಿನದಂದು ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕನ್ನಡ ಚಿತ್ರರಂಗದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ಡಾ.ರಾಜ್‌ಕುಮಾರ್ ಅವರ ಕಲಾ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಡಾ.ರಾಜ್‌ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಒತ್ತಾಯಿಸಿದರು.ಪಟ್ಟಣದ ಗಂಗಾಮತ ಬೀದಿಯಲ್ಲಿರುವ ಡಾ.ರಾಜ್‌ಕುಮಾರ್ ಕಲಾ ಸಂಘದ ಕಚೇರಿಯಲ್ಲಿ ಡಾ.ರಾಜ್‌ಕುಮಾರ್ 20ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಡಾ.ರಾಜ್‌ಕುಮಾರ್ ಮಾಡದ ಪಾತ್ರವಿಲ್ಲ ಎಂಬ ಮಾತಿನಂತೆ ಪ್ರಪಂಚದಲ್ಲಿ ಎಲ್ಲಾ ಪಾತ್ರಗಳನ್ನು ಅಭಿನಯಿಸಬಲ್ಲ ವ್ಯಕ್ತಿ ಡಾ.ರಾಜ್‌ಕುಮಾರ್ ಮಾತ್ರ ಎನ್ನುವುದನ್ನು ಅಮೆರಿಕಾ ಸಂಸ್ಥೆಯೊಂದು ಕೆಂಟುಕಿಕರ್ನಲ್ ಪ್ರಶಸ್ತಿ ನೀಡಿ ಘೋಷಿಸಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣದೇವರಾಯ ಚಲನಚಿತ್ರದ ಹಾಡೊಂದನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ಅಪಾರ ಗೌರವದಿಂದ ಕಂಡು ಕನ್ನಡ ಭಾಷೆ ಉಳಿವಿಗಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ ಡಾ.ರಾಜ್‌ಕುಮಾರ್ ಅವರಿಗೆ ಏ.24ರ ಹುಟ್ಟುಹಬ್ಬದ ದಿನದಂದು ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಪ್ರಧಾನ ಮಂತ್ರಿಗಳು ಘೋಷಣೆ ಮಾಡಬೇಕೆಂದು ಕೋರಿದರು.ಇದೇ ವೇಳೆ ಎಂ.ಜಿ.ರಂಗಸ್ವಾಮಿ, ರೊಟರೀಯನ್ ಸೋಮಶೇಖರ್, ಜಗ್ಗು, ನಂಜುಂಡಸ್ವಾಮಿ, ಷರೀಫ್, ನಾಗರಾಜು, ಪುಟ್ಟರಾಜು, ನಂಜುಂಡಯ್ಯ,ಶಿವಣ್ಣ ಸೇರಿದಂತೆ ಇತರರು ಇದ್ದರು.
ಇಂದು ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನಮಂಡ್ಯ: ನಂಜಮ್ಮ ಮೋಟೆಗೌಡ ಚಾರಿಟಬಲ್ ಅಂಡ್ ಎಜುಕೇಶನ್ ಟ್ರಸ್ಟ್ ಹಾಗೂ ಮಹಿಳಾ ಸರ್ಕಾರಿ ಕಾಲೇಜು ಆಂಗ್ಲ ಭಾಷಾ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಮೌಲ್ಯಮಾಪನ ಕೊಠಡಿಯಲ್ಲಿ ಏ.೧೩ರಂದು ಬೆಳಗ್ಗೆ ೧೧ ಗಂಟೆಗೆ ಬಿ.ಆರ್. ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಗುರುರಾಜ ಪ್ರಭು ವಹಿಸುವರು. ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಟಿ.ಹನುಮಂತು ಪ್ರಾಸ್ತಾವಿಕ ನುಡಿಗಳನ್ನಾಡುವರು. ಸಹ ಪ್ರಾಧ್ಯಾಪಕ ಎಸ್.ನವೀನ್ ಅಂಬೇಡ್ಕರ್ ಕುರಿತು ಮಾತನಾಡುವರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಟಿ.ಆರ್.ದೀಪಕ್ ಅಭಿನಂದನಾ ನುಡಿಗಳನ್ನಾಡುವರು.
ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನಕುಮಾರ್ ಹಾಗೂ ದ್ವಿತೀಯ ದರ್ಜೆ ಸಹಾಯಕಿ ವೈ.ಎಂ.ಸುಮಿತ್ರ ಅವರಿಗೆ ಅಂಬೇಡ್ಕರ್ ಶಿಕ್ಷಣ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಕಾಲೇಜಿನ ವ್ಯವಸ್ಥಾಪಕ ಕೆ.ಪಿ.ರವಿಕುಮಾರ್, ಅಲಯನ್ಸ್ ಒಂದನೇ ರಾಜ್ಯಪಾಲ ಕೆ. ಎಸ್.ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ ಉಪಸ್ಥಿತರಿರುವರು.