ಮೂಡಿಗೆರೆ; ಹುಬ್ಬಳ್ಳಿ ತಾಲೂಕಿನಲ್ಲಿ ಜಾತಿ ಮನಸ್ಥಿತಿಯಿಂದ ಮರ್ಯಾದೆ ಹತ್ಯೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ದಲಿತ ಸಂಘಟನಾ ಸಮಿತಿ, ಡಾ.ಬಿ.ಆರ್. ಅಂಬೇಡ್ಕರ್ ಧ್ವನಿ ಮುಖಂಡರು ಶಿರಸ್ತೆದಾರ ಸುರೇಂದ್ರ ಬಾಬು ಮೂಲಕ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು ಮಾತನಾಡಿ, ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ವಿವೇಕಾನಂದ ಮತ್ತು ಮಾನ್ಯ ಇವರಿಬ್ಬರು ಡಿಗ್ರಿ ಓದುತ್ತಿದ್ದ ಸಮಯದಲ್ಲಿ ಪರಿಚಯವಾಗಿ ಕಳೆದ ಜೂನ್‌ನಲ್ಲಿ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯಾಗಿದ್ದರು. 6 ತಿಂಗಳ ಗರ್ಭಿಣಿಯಾದ ಮಾನ್ಯ ಹಾಗೂ ಅವಳ ಪತಿ ವಿವೇಕಾನಂದ ಕುಟುಂಬದವರ ಜಾತಿ ಮುಂದಿಟ್ಟುಕೊಂಡು ಮಾನ್ಯ ಮೇಲೆ ಪ್ರಕಾಶ್‌ಗೌಡ ಪಾಟೀಲ್ ಎಂಬುವರು ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿ ಅಪರಾದ ಎಸಗಿದ್ದಾರೆ. ಇದು ಮಾನವ ಸಮಾಜವೆ ತಲೆ ತಗ್ಗಿಸುವ ಘಟನೆ ಎಂದು ಹೇಳಿದರು. ಇಂತಹ ಘಟನೆ ಎಲ್ಲಿಯೂ ಮರುಕಳಿಸಬಾರದು. ಮಾನ್ಯ ತಂದೆ ಪ್ರಕಾಶ್ ಗೌಡ ಪಾಟಿಲ್‌ ಗೆ ಮರಣ ದಂಡನೆ ವಿಧಿಸಬೇಕು. ದಲಿತ ಯುವಕ ವಿವೇಕಾನಂದ ಹಾಗೂ ಕುಟುಂಬಸ್ಥರಿಗೆ ಸರ್ಕಾರ ಭದ್ರತೆ ನೀಡುವ ಜತೆಗೆ ತಕ್ಕ ಪರಿಹಾರ ಒದಗಿಸಿ ಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಪೂರ್ಣೇಶ್, ಕಸಬಾ ಹೋಬಳಿ ಅಧ್ಯಕ್ಷ ಸತಿಶ್ ನಾಗಲಪುರ, ಗೊಣಿಬೀಡು ಹೋಬಳಿ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಧರ್ಮೇಶ್ ಗೌರಿಕೆರೆ, ವೆಂಕಟೇಶ್ ಘಟ್ಟದಹಳ್ಳಿ, ಹರೀಶ್, ರವಿ ಉಪಸ್ಥಿತರಿದ್ದರು. 23ಮೂಡಿಗೆರೆ 2ಎಮೂಡಿಗೆರೆ ತಾಲೂಕು ಕಚೇರಿಯಲ್ಲಿ ದಲಿತ ಸಂಘಟನಾ ಸಮಿತಿ, ಡಾ.ಬಿ.ಆರ್. ಅಂಬೇಡ್ಕರ್ ಧ್ವನಿ ಮುಖಂಡರು ಶಿರಸ್ತೆದಾರ ಸುರೇಂದ್ರ ಬಾಬು ಅವರಿಗೆ ಮನವಿ ಸಲ್ಲಿಸಿದರು.---------------------------------