ತಮ್ಮ ಗೌರವದ ದೃಷ್ಟಿಯಿಂದ ಹೆತ್ತ ಮಗಳನ್ನೇ ಭೀಕರವಾಗಿ ಹತ್ಯೆ ಮಾಡಿರುವುದು ಅಮಾನವೀಯ. 21ನೇ ಶತಮಾನದದಲ್ಲೂ ಜಾತೀಯತೆ ಆಚರಣೆ ಜೀವಂತವಿರುವುದು ಖೇದಕರ ಸಂಗತಿ. ಇಡೀ ಮನುಕುಲವೇ ತಲೆ ತಗ್ಗಿಸುವ ಸಂಗತಿ.
ಧಾರವಾಡ:
ಇನಾಂ ವೀರಾಪೂರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಖಂಡಿಸಿ ಹಾಗೂ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಹಾಗೂ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.ದುರ್ಘಟನೆಯಲ್ಲಿ ಮೃತಪಟ್ಟ ಮಾನ್ಯಾ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ ಶಾಂತಿ ಕೋರಲಾಯಿತು. ಈ ವೇಳೆ ಮಾತನಾಡಿದ ಸಂಘಟನೆ ಅಧ್ಯಕ್ಷ ಸುಧೀರ ಮುಧೋಳ, ತಮ್ಮ ಗೌರವದ ದೃಷ್ಟಿಯಿಂದ ಹೆತ್ತ ಮಗಳನ್ನೇ ಭೀಕರವಾಗಿ ಹತ್ಯೆ ಮಾಡಿರುವುದು ಅಮಾನವೀಯ. 21ನೇ ಶತಮಾನದದಲ್ಲೂ ಜಾತೀಯತೆ ಆಚರಣೆ ಜೀವಂತವಿರುವುದು ಖೇದಕರ ಸಂಗತಿ. ಇಡೀ ಮನುಕುಲವೇ ತಲೆ ತಗ್ಗಿಸುವ ಸಂಗತಿ. ಜತೆಗೆ ಮಾನ್ಯಾ ಪತಿ ಹಾಗೂ ಪತಿ ಕುಟುಂಬವನ್ನೇ ಮುಗಿಸುವ ಸಂಚು ಹಾಕಲಾಗಿತ್ತು. ಆದ್ದರಿಂದ ಯುವಕನ ಕುಟುಂಬದ ಎಲ್ಲ ಸದಸ್ಯರ ಮೇಲೆ ಹಲ್ಲೆ ಮಾಡಿದ ಆರೋಪಿತರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು ಹಾಗೂ ದೌರ್ಜನ್ಯಕ್ಕೊಳಗಾದ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಲಕ್ಷ್ಮಣ ದೊಡಮನಿ, ನಾರಾಯಣ ಮಾದರ, ಎಚ್. ರಾಮಣ್ಣ, ಮಂಜುನಾಥ ಸುತಗಟ್ಟಿ, ರವಿ ಸಿದ್ದಾಟಗಿಮಠ, ವಿರೂಪಾಕ್ಷಯ್ಯ ಹುಬ್ಲಿಮಠ, ಚಂದ್ರು ಅಂಗಡಿ, ಹನುಮಂತ ಮೊರಬ, ಶಬ್ಬೀರ ಅತ್ತಾರ, ದುರಗಪ್ಪ ಕಡೇಮನಿ, ರಾಜು ಜುನ್ನಾಯಿಕರ, ಮಂಜುನಾಥ ಹೊಸಮನಿ, ಗಿರಿರಾಜ ಮೇಲಿನಮನಿ ಇದ್ದರು.