ಸಾರಾಂಶ
7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ರೆ. ಫಾ. ಸಬಾಸ್ಟಿನ್ ಪೂವತ್ತಗಲ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟ್ಟರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾಗಿ ಕಳೆದ 11 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಳಂಜ ಗ್ರಾಮದ ಬಟಿಯಲ್ಲು ಸೆಂಟ್ ಸೆಬಾಸ್ಟಿನ್ ದೇವಾಲಯಕ್ಕೆ ವರ್ಗಾವಣೆಗೊಂಡಿದ್ದು ಅವರಿಗೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಬೀಳ್ಕೊಟರು.ಇತ್ತೀಚೆಗೆ 7 ನೇ ಹೊಸಕೋಟೆ ದೇವಾಲಯದ ಆವರಣದಲ್ಲಿ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್) ಅವರು ಕಳೆದ 11 ವರ್ಷಗಳಿಂದ ಸಂತ ಸೆಬಾಸ್ಟೀನ್ ದೇವಾಲಯದ ಧರ್ಮಗುರುಗಳಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವ ಮೂಲಕ ಗ್ರಾಮಸ್ಥರೊಂದಿಗೆ ಉತ್ತಮ ಒಡನಾಟ ಹಾಗೂ ಬಾಂಧವ್ಯವನ್ನು ಹೊಂದಿದ್ದು ಇದೀಗ ವರ್ಗಾವಣೆಗೊಂಡಿರುವ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪರಿಗಣಿಸಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ.ಜೋಸೆಫ್, ಸದಸ್ಯರಾದ ಮುಸ್ತಾಫ, ಸಿದ್ಧಿಕ್, ಮಾಜಿ ಅಧ್ಯಕ್ಷ ರಮೇಶ್, ಸೌಮ್ಯಶ್ರೀ, ಚಂದ್ರವತಿ, ಮಾಜಿ ಸದಸ್ಯ ರಮೇಶ್, ಸಂಜಿವಿನಿ ಒಕ್ಕೂಟದ ಅಧ್ಯಕ್ಷೆ ಲತಾ ಬಸವರಾಜ್, ಒಕ್ಕೂಟದ ಎಲ್‌ಸಿಆರ್‌ಪಿ ಉಷಾ, 7ನೇ ಹೊಸಕೋಟೆ ಎಸ್.ಎಚ್. ಕನ್ಯಾಸ್ತ್ರೀ ಮಠದ ಮದರ್ ಟೆಸ್ಸಿ ಮ್ಯಾನುವೆಲ್, ಸಿಸ್ಟರ್‌ಗಳಾದ ಸೂಪಿರಿಯರ್ ಲೀಸಾ ಟೋಮ್, ಅ್ಯನ್ಸಿ, ಜಿನ್ಸಿ, ಜುಮ್ಮ ಮಸೀದಿಯ ಅಧ್ಯಕ್ಷ ಉಮ್ಮರ್, 7ನೇ ಹೊಸಕೋಟೆ ಮಹಾಗಣಪತಿ ದೇವಾಲಯದ ಪದಾಧಿಕಾರಿಗಳು ಇದ್ದರು.