ಬಲಮುರಿ ಗ್ರಾಮದ ಕೊಟ್ಟಕೇರಿಯನ ಕುಟುಂಬದ ಅಭಿವೃದ್ಧಿ ಸಮಿತಿ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದ ಕೊಟ್ಟಕೇರಿಯನ ಕುಟುಂಬದ ಅಭಿವೃದ್ಧಿ ಸಮಿತಿ ಮಹಾಸಭೆಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.

ಸಮಾರಂಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಘನಾವತಿ ವಸಂತ, ಸುಲೋಚನಾ ಬಾಲಕೃಷ್ಣ ಹಾಗು ಮುಖ್ಯ ಶಿಕ್ಷಕ ದಮೇಂದ್ರ ಅವರನ್ನು ಕುಟುಂಬದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕುಟುಂಬ ಪಟ್ಟೆದಾರಾದ ಕೆ.ಡಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕುಟುಂಬದ ಪ್ರಮುಖರಾದ ಆನಂದ, ಸೋಮಣ್ಣ, ಬಾಲಕೃಷ್ಣ, ಪೂಣಚ್ಚ ತಿಮ್ಮಯ್ಯ, ಹಿರಿಯ ವಕೀಲರಾದ ಕೆ ಡಿ ದಯಾನಂದ, ಪಾರ್ವತಿ, ಶೋಭಾ, ಮೀನಾಕ್ಷಿ, ನೀಲಾವತಿ, ಸಾವಿತ್ರಿ ಹಾಗು ಕುಟುಂಬ ಸದಸ್ಯರು ಉಪಸ್ಥಿತರಿದ್ದರು.