ವೀರಶೈವ ಸಮಾಜ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು ಸಂಘಟನೆಯಲ್ಲಿ ಹಿಂದುಳಿದಿದೆ

| Published : Aug 04 2024, 01:17 AM IST

ವೀರಶೈವ ಸಮಾಜ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು ಸಂಘಟನೆಯಲ್ಲಿ ಹಿಂದುಳಿದಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಕೇಂದ್ರದಲ್ಲಿ ಬಸವ ಭವನ ನಿರ್ಮಾಣ ಮಾಡುವುದರ ಜತೆಗೆ ಅಗತ್ಯವಿರುವ ತಾಲೂಕು ಕೇಂದ್ರಗಳಲ್ಲಿ ಭವನ ನಿರ್ಮಾಣಕ್ಕೆ ಆಧ್ಯತೆ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ವೀರಶೈವ ಸಮಾಜ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದರು ಸಂಘಟನೆಯಲ್ಲಿ ಹಿಂದುಳಿದಿದ್ದು, ಈ ವಿಚಾರವನ್ನು ನಮ್ಮ ಬಾಂಧವರು ಗಂಭೀರವಾಗಿ ಪರಿಗಣಿಸಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಹಿನಕಲ್ ಬಸವರಾಜು ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಅರಕೆರೆ ವಿರಕ್ತ ಮಠದಲ್ಲಿ ಜಿಲ್ಲಾ ಮಹಾಸಭಾದ ವತಿಯಿಂದ ಸಿದ್ದೇಶ್ವರ ಶ್ರೀಗಳನ್ನು ಸನ್ಮಾನಿಸಿ, ಆಶೀರ್ವಾದ ಪಡೆದು ಮಾತನಾಡಿದ ಅವರು, ಸಂಘದ ವತಿಯಿಂದ ಮುಂದೆ ಸಮಾಜದ ಪರವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಬಸವ ಭವನ ನಿರ್ಮಾಣ ಮಾಡುವುದರ ಜತೆಗೆ ಅಗತ್ಯವಿರುವ ತಾಲೂಕು ಕೇಂದ್ರಗಳಲ್ಲಿ ಭವನ ನಿರ್ಮಾಣಕ್ಕೆ ಆಧ್ಯತೆ ನೀಡಲಿದ್ದು, ಈ ಕೆಲಸ ಮಾಡಲು ನಮಗೆ ಸಮಾಜದ ಸರ್ವರು ಬೆನ್ನೆಲುಬಾಗಿ ನಿಲ್ಲಬೇಕೆಂದರು.

ಮುಂದಿನ ತಿಂಗಳಿನಿಂದ ರಾಜ್ಯ ಜಿಲ್ಲಾ ಮತ್ತು ತಾಲೂಕು ಸಂಘಗಳಿಗೆ ಸದಸ್ಯರನ್ನಾಗಿ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಸದಸ್ಯತ್ವ ಪಡೆದು ಸಂಘಗಳ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದರು.

ನಮ್ಮನ್ನು ಆಯ್ಕೆ ಮಾಡಿದ ವೀರಶೈವ ಬಾಂಧವರ ಆಶಯಕ್ಕೆ ತಕ್ಕಂತೆ ಕೆಲಸ ಮಾಡಲು ಸಂಘದ ಪದಾಧಿಕಾರಿಗಳು ಬದ್ದರಾಗಿದ್ದು, ಚುನಾಯಿಸಿದ ಸಮಾಜದ ಮತದಾರ ಪ್ರಭುಗಳು ಮತ್ತು ಸಹಕಾರ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.

ಅರಕೆರೆ ವಿರಕ್ತ ಮಠದ ಸಿದ್ದೇಶ್ವರ ಶ್ರೀಗಳು ಮಾತನಾಡಿ, ಯಾವುದೇ ಬೇಧ ಭಾವ ಮಾಡದೆ ಸರ್ವರನ್ನು ಸಮಾನರಾಗಿ ಕಂಡು ವೀರಶೈವ ಸಮಾಜದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಿ ಎಂದು ಸಲಹೆ ನೀಡಿದರು.

ಸಂಘದ ನಿರ್ದೇಶಕರಾದ ದಕ್ಷಿಣಾಮೂರ್ತಿ, ಕೆ. ನಾಗರಾಜು, ಬಿ.ವಿ. ಬಸವರಾಜು, ಕೆ. ಶಿವಕುಮಾರ್, ಎಲ್.ಪಿ. ಧರ್ಮಮಂಜುನಾಥ್, ಪಿ. ಶೇಖರ್, ಎಂ.ಎಸ್. ರೇಚಣ್ಣ, ಡಾ.ಎಂ.ಎಂ. ಮಹದೇವಪ್ಪ, ಎಂ. ಬಸವರಾಜು, ಎನ್.ಜಿ. ಗಿರೀಶ್, ಕೆ.ಎಂ. ಮಾದಪ್ಪ, ಕೆ. ಗಿರಿಕುಮಾರ್, ಎಂ. ಷಡಕ್ಷರಿ, ಎಸ್. ಗಿರೀಶ್, ಎಂ.ಪಿ. ವಿರೂಪಾಕ್ಷ, ಎಂ. ಚಂದ್ರಶೇಖರ್, ಜಿ.ಎಂ. ಮಹೇಶ್, ಕೆ.ಎಂ. ನಟರಾಜು, ಸಿ.ಎಸ್. ನಟರಾಜು, ಎಂ. ದಾಕ್ಷಾಯಿಣಿ, ಅನುಸೂಯ ಗಣೇಶ್, ರೂಪಸತೀಶ್, ಎಸ್.ಎಂ. ದಾಕ್ಷಾಯಿಣಿ, ರೂಪ ಸತೀಶ್, ಎಂ.ಬಿ. ರಾಜೇಶ್ವರಿ ಮಹೇಶ್, ಎನ್.ಬಿ. ಭಾಗ್ಯ, ಎಚ್.ಎನ್. ಸರ್ವಮಂಗಳ, ಸೌಭಾಗ್ಯ, ಶೈಲಾನಾಗರಾಜು, ನಾಗಜ್ಯೋತಿ ಅವರನ್ನು ಶ್ರೀಗಳು ಸನ್ಮಾನಿಸಿದರು.

ಮಾರಗೌಡನಹಳ್ಳಿ ಮಠದ ಶಂಭುಲಿಂಗ ಸ್ವಾಮೀಜಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಅಖಿಲ ಭಾರತ ವೀರಶೈವ ಮಹಾ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮನೋಹರಿ, ಮಾಜಿ ಪ್ರಧಾನ ಕಾರ್ಯದರ್ಶಿ ಡಿ.ವಿ. ಗುಡಿ ಜಗದೀಶ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ. ರವಿಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ವೀರಶೈವ ಮುಖಂಡರಾದ ಸಣ್ಣಲಿಂಗಪ್ಪ, ಅರುಣ್ ಬಿ. ನರಗುಂದ್, ಯೋಗೇಶ್, ಗಂಗಾಧರ್, ಶಿವಪ್ರಕಾಶ್ ಇದ್ದರು.