ಸಾರಾಂಶ
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ಸೀರತ್ ಅಭಿಯಾನದ ಪ್ರಯುಕ್ತ ಹೂಡೆಯ ಸಾಲಿಹಾತ್ ಸಭಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಉಡುಪಿ
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಪ್ರವಾದಿ ಮುಹಮ್ಮದ್ (ಸ) ಮಹಾನ್ ಚಾರಿತ್ರ್ಯವಂತ ಸೀರತ್ ಅಭಿಯಾನದ ಪ್ರಯುಕ್ತ ಹೂಡೆಯ ಸಾಲಿಹಾತ್ ಸಭಾಂಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪತ್ರಕರ್ತ ಎ.ಕೆ. ಕುಕ್ಕಿಲ, ಪ್ರಸ್ತುತ ಯಾರಾ ಕುರಿತು ವಿಶ್ವಾಸ ಇಲ್ಲದ ಸಮಾಜದಲ್ಲಿ ಬದುಕುತ್ತಿದ್ದೇವೆ. ಮಾನವೀಯ ಕಳಕಳಿ ಇರುವ ಜನರು ಸಮಾಜದಲ್ಲಿ ಕಡಿಮೆಯಾಗುತ್ತಿದ್ದಾರೆ. ಭಿನ್ನಾಭಿಪ್ರಾಯಗಳು ಇದ್ದ ಹೊರತಾಗಿಯೂ ವಿರೋಧಿಗಳು ಕೂಡ ಪ್ರವಾದಿ ಅವರ ಮೇಲೆ ವಿಶ್ವಾಸ ಹೊಂದಿದ್ದರು ಎಂದು ಹೇಳಿದರು.ಪ್ರವಾದಿ ಅವರಿಗೆ ಮುಸ್ಲಿಮೇತರೊಂದಿಗಿನ ಸಂಬಂಧ ಕೂಡ ಬಹಳಷ್ಟು ಉತ್ತಮವಾಗಿತ್ತು. ಮುಸ್ಲಿಮೇತರರ ನಂಬಿಕೆಗಳನ್ನು ನಿಂದಿಸಬಾರದು ಎಂದು ಇಸ್ಲಾಮ್ ಕಲಿಸುತ್ತದೆ. ವಿರೋಧಿಗಳು ಪ್ರವಾದಿ ಅವರ ಮೇಲೆ ದಾಳಿ ಮಾಡಿ ಕಾಳಗ ನಡೆಸಿದಂತಹ ಸಂದರ್ಭಗಳಲ್ಲೇ ವಿಜಯ ಪ್ರಾಪ್ತಿಗೊಂಡರೂ ಅವರೆಂದು ಸೋತವರ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲಿಲ್ಲ. ಬದಲಾಗಿ ಎಲ್ಲರನ್ನು ಸಾಮೂಹಿಕವಾಗಿ ಕ್ಷಮಿಸಿ ಬಿಟ್ಟರು ಎಂದು ಹೇಳಿದರು.ನಿವೃತ್ತ ಅಧ್ಯಾಪಕರಾದ ಸುಧಾಕರ್ ಶೆಟ್ಟಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಪ್ರಸ್ತಾವಿಕವಾಗಿ ಮಾತನಾಡಿದರು. ಯಾಸೀನ್ ಕೋಡಿಬೆಂಗ್ರೆ ನಿರೂಪಿಸಿ, ಧನ್ಯವಾದವಿತ್ತರು.