ಬಣಕಲ್‌ ಬಳಿ ಭೀಕರ ಅಪಘಾತ: ನಾಲ್ವರ ಸಾವು

| Published : May 25 2024, 12:48 AM IST

ಬಣಕಲ್‌ ಬಳಿ ಭೀಕರ ಅಪಘಾತ: ನಾಲ್ವರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಮೂಡಿಗೆರೆ, ಒಂದೇ ಸ್ಥಳದಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 4 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡು ಇನ್ನುಳಿದ ನಾಲ್ವರು ಪ್ರಾಣಾಪಾಯದಿಂದ ಪರಾಗಿರುವ ಘಟನೆ ಬಣಕಲ್‌ ಸಮೀಪದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮೆಸ್ಕಾಂ ಲಾರಿ- ಓಮಿನಿ- ಆಲ್ಟೋ ಕಾರ್‌ ನಡುವೆ ಅಪಘಾತ । ಧರ್ಮಸ್ಥಳದಿಂದ ಬರುವಾಗ ಅಪಘಾತಕನ್ನಡಪ್ರಭ ವಾರ್ತೆ, ಮೂಡಿಗೆರೆ

ಒಂದೇ ಸ್ಥಳದಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 4 ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡು ಇನ್ನುಳಿದ ನಾಲ್ವರು ಪ್ರಾಣಾಪಾಯದಿಂದ ಪರಾಗಿರುವ ಘಟನೆ ಬಣಕಲ್‌ ಸಮೀಪದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಧರ್ಮಸ್ಥಳಕ್ಕೆ ತೆರಳಿದ್ದ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣ ಗ್ರಾಮದವರು. ಎರಡು ವಾಹಣಗಳಲ್ಲಿ ಚಾರ್ಮಾಡಿ ಮೂಲಕ ಮೂಡಿಗೆರೆಗ ಬರುವಾಗ ಈ ದುರ್ಘಟನೆ ನಡೆದಿದೆ.

ಹಂಪಯ್ಯ (65), ಮಂಜಯ್ಯ (65), ಪ್ರೇಮಾ (62) ಅವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಪ್ರಭಾಕರ್‌ (45) ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ. ನಾಗರಾಜಯ್ಯ, ಮಂಜುನಾಥಯ್ಯ, ಅಕ್ಕಮ್ಮ, ಪ್ರತೀಕ್ಷಾ, ಮಲ್ಲಿಕಾರ್ಜುನ, ನಂದೀಶ್‌, ಉಮೇಶ್‌, ಶಿವಲೀಲಾ ಹಾಗೂ ನಯನ ಅವರಿಗೆ ಗಾಯಗಳಾಗಿದ್ದು, ಕೆಲವರನ್ನು ಚಿಕ್ಕಮಗಳೂರಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೆ, ಮತ್ತೆ ಕೆಲವರನ್ನು ಮಂಗಳೂರಿಗೆ ಕರೆದು ಕೊಂಡು ಹೋಗಲಾಗಿದೆ. ಪೂಜಾ, ಚಂದನ, ವೀರೇಶ್‌ ಹಾಗೂ ಸೃಜನಾ ಪಾರಾಗಿದ್ದಾರೆ.ಒಂದೇ ಕುಟುಂಬದವರು:

ಚನ್ನಪಟ್ಟಣ ಗ್ರಾಮದ ಒಂದೇ ಕುಟುಂಬದ 17 ಜನರು ಓಮಿನಿ ಹಾಗೂ ಆಲ್ಟೋ ಕಾರಿನಲ್ಲಿ ಧರ್ಮಸ್ಥಳಕ್ಕೆ ತೆರಳಿ, ಚಾರ್ಮಾಡಿ ಘಾಟ್‌ ರಸ್ತೆಯ ಮೂಲಕ ಕೊಟ್ಟಿಗೆಹಾರಕ್ಕೆ ಬಂದು ಅಲ್ಲಿಂದ ಮೂಡಿಗೆರೆಗೆ ಬರುವಾಗ ಬಣಕಲ್‌ ಸಮೀಪ ಎದುರಿಗೆ ಬಂದ ಮೆಸ್ಕಾಂ ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಮೆಸ್ಕಾಂ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಇದೇ ವೇಳೆ ಈ ಮಾರ್ಗದಲ್ಲಿ ಸಂಬಂಧಿಕರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರ್‌ ಓಮಿನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ರಭಸಕ್ಕೆ ಓಮಿನಿಯಲ್ಲಿದ್ದ 9 ಜನರ ಪೈಕಿ ನಾಲ್ವರು ಮೃತಪಟ್ಟಿದ್ದಾರೆ, ಇನ್ನುಳಿದ 5 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಆಲ್ಟೋ ಕಾರಿನಲ್ಲಿದ್ದ ನಾಲ್ವರು ಹೊರತುಪಡಿಸಿ ಇನ್ನುಳಿದವರು ಗಾಯಗೊಂಡಿದ್ದಾರೆ.

ಭೀಕರ ಅಪಘಾತ:

ಮಲೆನಾಡಿನಲ್ಲಿ ಸರಣಿ ಭೀಕರ ಅಪಘಾತಗಳು ಆಗಾಗ ಸಂಭವಿಸುತ್ತಿವೆ. ಕೆಲವು ವರ್ಷಗಳ ಹಿಂದೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್‌ನಲ್ಲಿ ಒಂದೇ ಸ್ಥಳದಲ್ಲಿ ಮೂರು ವಾಹನಗಳು ಅಪಘಾತಕ್ಕೆ ಈಡಾಗಿದ್ದವು.

ಶುಕ್ರವಾರ ಇದೇ ರೀತಿ ಅಪಘಾತ ಬಣಕಲ್‌ನಲ್ಲಿ ನಡೆದಿದೆ. ಒಂದೇ ಸ್ಥಳದಲ್ಲಿ ಮೂರು ವಾಹನಗಳು ಅಪಘಾತಕ್ಕೆ ಈಡಾಗಿವೆ. ಲಾರಿ ಹಾಗೂ ಆಲ್ಟೋ ಕಾರು ಡಿಕ್ಕಿ ಹೊಡೆದ ಪರಿಣಾಮ ಓಮಿನಿ ನಜ್ಜು ಗುಜ್ಜಾಗಿದೆ.

ಮೃತ ದೇಹಗಳನ್ನು ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಬಣಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಹಕ ಎಂಜಿನಿಯರ್‌ ಕಾಂಬ್ಳಿ ಸ್ಥಳಕ್ಕೆ ಭೇಟಿ ನೀಡಿದ್ದರು.

--- ಬಾಕ್ಸ್‌----ಮೃತಪಟ್ಟವರುಪ್ರಭಾಕರ್

ಹಂಪಯ್ಯ

ಮಂಜಯ್ಯ

ಪ್ರೇಮ

----

ಗಾಯಗೊಂಡವರುನಾಗರಾಜಯ್ಯ

ಮಂಜುನಾಥಯ್ಯ

ಅಕ್ಕಮ್ಮ

ಪ್ರತೀಕ್ಷಾ

ಮಲ್ಲಿಕಾರ್ಜುನ

ನಂದೀಶ್‌

ಉಮೇಶ್‌

ಶಿವಲೀಲಾ

ನಯನ

----ಪಾರಾದವರುಪೂಜಾ

ಚಂದನ

ವಿರೇಶ್‌

ಸೃಜನಾ

---ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 7ಮೂಡಿಗೆರೆ ತಾಲೂಕಿನ ಬಣಕಲ್‌ ಬಳಿ ಶುಕ್ರವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಜ್ಜು ಗುಜ್ಜಾದ ಓಮಿನಿ ಹಾಗೂ ಆಲ್ಟೋ ಕಾರ್‌.