ಸಾರಾಂಶ
ಸಾಲ ಸದ್ಬಳಕೆ ಮಾಡಿಕೊಳ್ಳಿ । ಬ್ಯಾಂಕ್ ಅಧ್ಯಕ್ಷ ಬಿ.ನಾಗರಾಜ್ ಹೇಳಿಕೆ । ವಾರ್ಷಿಕ ಸರ್ವ ಸದಸ್ಯರ ಸಭೆಕನ್ನಡಪ್ರಭ ವಾರ್ತೆ ಹೊಸಕೋಟೆಹಲವಾರು ರೀತಿಯಲ್ಲಿ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತಿರುವ ಹೊಸಕೋಟೆ ಟೌನ್ ಬ್ಯಾಂಕ್ ಪ್ರಸಕ್ತ ಮಾರ್ಚ್ ಅಂತ್ಯದ ವೇಳೆಗೆ ₹5.5 ಕೋಟಿ ನಿವ್ವಳ ಲಾಭಾಂಶ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಬಿ.ನಾಗರಾಜ್ ತಿಳಿಸಿದರು.ನಗರದ ಖಾಸಗಿ ಸಭಾಭವನದಲ್ಲಿ ನಡೆದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.ಶತಮಾನ ಕಂಡಿರುವ ಹೊಸಕೋಟೆ ಟೌನ್ ಬ್ಯಾಂಕಿನ 111ನೇ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಿದ್ದು, ಬ್ಯಾಂಕ್ ಈಗಾಗಲೇ ಕೋಲಾರ ಜಿಲ್ಲೆಯ ಮಾಲೂರು, ಚಿಂತಾಮಣಿ, ಬೆಂಗಳೂರು ಪೂರ್ವ ತಾಲೂಕಿನ ಶೀಗೆಹಳ್ಳಿಯಲ್ಲಿ ಶಾಖೆಗಳನ್ನು ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್ ಒಟ್ಟು 16962 ಸದಸ್ಯರನ್ನು ಹೊಂದಿದ್ದು, ₹10.39 ಕೋಟಿ ಷೇರು ಬಂಡವಾಳ ₹262.24 ಕೋಟಿ ಠೇವಣಿ ಹೊಂದಿದೆ. ಸಂಘದ ಸದಸ್ಯರ ಮಕ್ಕಳಿಗೆ ಲಾಭಾಂಶದಲ್ಲಿ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಗುತ್ತಿದೆ ಎಂದರು. ಕರೋನಾ ಸಂಕಷ್ಟದ ಸಮಯದಲ್ಲಿ ಹಲವಾರು ರಾಷ್ಟ್ರೀಕೃತ ಬ್ಯಾಂಕ್‌ಗಳು ದಿವಾಳಿಯಾಗಿರುವ ನಿದರ್ಶನಗಳಿವೆ. ಆದರೆ ಹೊಸಕೋಟೆ ಟೌನ್ ಬ್ಯಾಂಕ್ ಕರೋನಾ ಸಂದರ್ಭದಲ್ಲಿ ಲಾಭ ಗಳಿಸಿದೆ ಎಂದರು.ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಆಂಜಿನಪ್ಪ ಮಾತನಾಡಿ, ಬ್ಯಾಂಕಿನ ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುತ್ತಿರುವ ಪರಿಣಾಮ ಬ್ಯಾಂಕ್ ಲಾಭಾಂಶದತ್ತ ಹೆಜ್ಜೆ ಇಟ್ಟಿದೆ. ಲಾಭಾಂಶವನ್ನು ದುಂದುವೆಚ್ಚ ಮಾಡದೆ ಅಗತ್ಯ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ನಿರ್ದೇಶಕರಾದ ಎನ್.ಬಾಲಚಂದ್ರನ್, ಎ.ಅಫ್ಸರ್, ಸಿ.ನವೀನ್, ಬಿ.ವೆಂಕಟಲಕ್ಷ್ಮೀ, ಕೆ.ಕಿರಣ್‌ಕುಮಾರ್, ಎಂ.ಚಂದ್ರಶೇಖರ್ ಎಚ್.ಜಿ.ಮೋಹನ್ ಕುಮಾರ್, ಎಚ್.ಬಿ.ನಾಗರಾಜು, ಎನ್.ರಾಜಶೇಖರ್, ಎಂ.ಅಮರೇಶ್, ಸಿ.ಕೆ.ಹಿಮಾಲಯ, ಎಂ.ರಘು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ. ಆಂಜಿನಪ್ಪ ಹಾಜರಿದ್ದರು.