ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಇಲ್ಲಿನ ಲೋಕಾಯುಕ್ತ ಎಸ್ಪಿ ಪಿ.ಜಾನ್ ಆಂಟೋನಿ ಇವರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ನೀಡಿದ್ದ ಭೇಟಿಯಲ್ಲಿ ಅಲ್ಲಿನ ಸಾಕಷ್ಟು ಅವ್ಯವಸ್ಥೆಗಳನ್ನು ಗಮನಿಸಿ ಸರಿ ಪಡಿಸಲು ಸಂಬಂಧಪಟ್ಟವರಿಗೆ ಅಗತ್ಯ ಸೂಚನೆ ನೀಡಿದ ಪ್ರಸಂಗ ನಡೆದವು.ಸಾರ್ವಜನಿಕ ಆಸ್ಪತ್ರೆಯಲ್ಲಿ. ಶಸ್ತ್ರ ಚಿಕಿತ್ಸೆ ವಿಭಾಗ, ಹೆರಿಗೆ ವಾರ್ಡಗಳು, ಜನರಲ್ ವಾರ್ಡ್ ಗಳು, ಪರಿಶೀಲನೆ ಮಾಡಿದಾಗ ನಮಗೆ ಸರಿಯಾಗಿ ಊಟ ಕೊಡ್ತಾ ಇಲ್ಲ. ಮತ್ತು ಟೆಂಡರ್ ಮುಗಿದಿದೆ ಹಾಗಾಗಿ ನಿಮಗೆ ಊಟ ಕೊಡ್ತಾ ಇಲ್ಲ ಅಂತ ಹೇಳುತ್ತಾರೆಂದು ಅಲ್ಲಿಯೇ ದಾಖಲಾಗಿದ್ದ ಆಶ್ರಯ ಕೋಲಾನಿಯ ಮಲ್ಲಮ್ಮ ಹತಾಶಳಾಗಿ ಹೇಳಿದಳು.
ಜನರಲ್ ವಾರ್ಡ್ ಗಳು. ಪರಿಶೀಲನೆ ಮಾಡುವಾಗ. ಎಸಿ ಸರಿಯಾಗಿ. ಕೆಲಸ ಮಾಡುತ್ತಿಲ್ಲ. ಮತ್ತು ಗಾಳಿ ಹತ್ತಯಿಲ್ಲ. ರೋಗಿಗಳು ಅಳಲನ್ನು ತೋಡಿಕೊಂಡಿದ್ದರು. ಮತ್ತು ಜನರಲ್ ವಾರ್ಡ್‌ಗಳಲ್ಲಿ ಆಕ್ಸಿಜನ್ ಕನೆಕ್ಷನ್ ಕೊಟ್ಟಿರುವುದಿಲ್ಲವೆಂದು ಅನೇಕರು ಅಳಲು ತೋಡಿಕೊಂಡರು.ಆಸ್ಪತ್ರೆಯಲ್ಲಿನ ತೊಂದರೆಗಳ ಬಗ್ಗೆ ತಕ್ಷಣ ಕ್ರಣಕ್ಕೆ ಸ್ಥಳಧಲ್ಲಿದ್ದ ಅಧಿಕಾರಿಗಳಿಗೆ ಎಸ್ಪಿ ಆಂಟೋನಿ ಸೂಚಿಸಿದರು. ಸಾರ್ವಜನಿಕರ ದೂರುಗಳಗೆ ಮಹತ್ವ ಕೊಟ್ಟು ಕ್ರಮಕ್ಕೆ ಮುಂದಾಗುವಂತೆ ಎಸ್‌ಪಿ ಅವರು ಸೂಚನೆ ನೀಡಿದರು. ಟೆಂಡರ್ ಮುಗಿದಿದೆ ರೋಗಿಗಳಿಗೆ ಸರಿಯಾಗಿ ಊಟ ಏಕೆ ನೀಡುತ್ತಿಲ್ಲ ಎಂದು ಕೇಳಿದಾಗ ಆರೋಗ್ಯ ಅಧಿಕಾರಿಗಳು ನಾವು ಆದಷ್ಟು ಬೇಗನೆ ಸರಿಯಾಗಿ ರೋಗಿಗಳಿಗೆ ಊಟ ವ್ಯವಸ್ಥೆ ಕೊಡ್ತೀವಿ ಎಂದು ಸಮಜಾಯಿಷಿ ನೀಡಿದರೆಂದು ಎಸ್ಪಿ ಆಂಟೋನಿ ಹೇಳಿದ್ದಾರೆ.
ಆಸ್ಪತ್ರೆಯಲ್ಲಿದ್ದ ಅಲ್ಲಿನ ವಿಜಯಕುಮಾರ್. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಎಕ್ವಿಪ್ಮೆಂಟ್. ಸರಿಯಾಗಿ ಇಲ್ಲ. ಆಕ್ಸಿಜನ್. ಇರದೆ ಕಾರಣದಿಂದಾಗಿ. ನಮ್ಮ ತಾಯಿ ಮರಣ ಹೊಂದಿದ್ದಾರೆ ಸರ್ ಎಂದು ಗೋಳಾಡಿದನು. ಇದು ಸಾರ್ವಜನಿಕ ಆಸ್ಪತ್ರೆ. ಹಾಗಾಗಿ ರೋಗಿಗಳಿಗೆ ಏನೇನು ಬೇಕು. ಎಲ್ಲಾ ಔಷಧಿಗಳು ಸರಿಯಾಗಿ. ಸರಬರಾಜು.ಮಾಡಬೇಕು ಮತ್ತು ಅವರಿಗೆ ಸರಿಯಾಗಿ ಊಟ ಕೊಡಬೇಕು. ಯಾವುದೇ ಕುಂದು ಕೊರತೆ ಆಗಬಾರದು ಅಂತ ಹೇಳಿ ಎಸ್‌ಪಿ ಅವ್ರು ಸೂಚನೆ ನೀಡಿದರು.ಎಸ್‌ಪಿ ಜಾನ್ ಆಂತೋನಿ. ಮತ್ತು ಡಿಎಸ್ಪಿ. ಮಂಜುನಾಥ್. ಇನ್ಸ್‌ಪೆಕ್ಟರ್ ಧ್ರುವತಾರ. ತಾಲೂಕು ಆರೋಗ್ಯ ಅಧಿಕಾರಿ. ಡಾಕ್ಟರ್ ಸಂತೋಷ್. ಅಂಬರೀಶ್ ತಹಸಿಲ್ದಾರರು. ಕಾರ್ಯನಿರ್ವಕ ಅಧಿಕಾರಿ. ನೀಲಗಂಗಾ. ಪೊಲೀಸ್ ಸಿಬ್ಬಂದಿ ಬಸವರಾಜ್, ಸಿದ್ದರಾಮ್, ಸಂತೋಷಮ್ಮ, ಸ್ಥಳದಲ್ಲಿ ಹಾಜರಿದ್ದರು.
ರೈತ ಸಂಪರ್ಕ ಪರಿಶೀಲನೆ: ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಚಿತ್ತಾಪುರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೂ ಭೇಟಿ ನೀಡಿದ್ದರು. ತೊಗರಿ ಬೆಳೆ. ಮತ್ತು ಉದ್ದಿನಬೇಳೆ. 5 ಕೆಜಿ ಪ್ಯಾಕೆಟ್ ಗಳು. ಪೈಪುಗಳ ಹೆಸರು ಪರಿಶೀಲನೆ ನಡೆಸಿದರು. ರೈತರಿಗೆ ಏನು ಸೌಲಭ್ಯಗಳು ಸಿಗಬೇಕು. ಆದಷ್ಟು ಬೇಗನೆ ವಿತರಿಸಬೇಕೆಂದು ಹೇಳಿ ಅಲ್ಲಿನ ಅಧಿಕಾರಿಗಳಿಗೆ ಎಸ್‌ಪಿ ಅವರು ಸೂಚನೆ ನೀಡಿ ಹೇಳಿದರು. ಲಾಟರಿ ಸರಿಯಾಗಿ ಮಾಡ್ತಾ ಇಲ್ಲ. ನಾವು ಒಂದು ಟೈಮಿಗೆ ಲಾಟರಿ ಮಾಡುವಾಗ ಬರ್ತೀವಿ ಇಲ್ಲ ಅಂದ್ರೆ ನಾವು ಲಾಟರಿ ಮಾಡುವಾಗ ನಾವು ಬರೋದಿಲ್ಲ ಎಂದು ಕೃಷಿಕ ರವೀಂದ್ರ ಚಿತಾಪುರ ಎಸ್ಪಿ ಎದುರಿಗೆ ನೋವನ್ನು ಹೇಳಿಕೊಂಡಿದ್ದರು.