ಸಾರಾಂಶ
ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಮಳೆ ಬೀಳುತ್ತಿದೆ. ರಾಜ್ಯದಲ್ಲಿ ಡೆಂಘೀ ಜ್ವರದ ಹಾವಳಿಗೆ ಸಾವು, ನೋವು ಸಂಭವಿಸುತ್ತಿದ್ದರೂ ಪಟ್ಟಣದೊಳಗಿನ ಹಲವು ಬಡಾವಣೆಯಲ್ಲಿ ಚರಂಡಿ ಮೇಲೆ ಹಾಗೂ ರಸ್ತೆ ಬದಿಯಲ್ಲಿ ಗಿಡಗಳು ಬೆಳೆದು ನಿಂತು ಸೊಳ್ಳೆಗಳಿಗೆ ಆಶ್ರಯ ನೀಡುತ್ತಿವೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಮಳೆ ಬೀಳುತ್ತಿದೆ. ರಾಜ್ಯದಲ್ಲಿ ಡೆಂಘೀ ಜ್ವರದ ಹಾವಳಿಗೆ ಸಾವು, ನೋವು ಸಂಭವಿಸುತ್ತಿದ್ದರೂ ಪಟ್ಟಣದೊಳಗಿನ ಹಲವು ಬಡಾವಣೆಯಲ್ಲಿ ಚರಂಡಿ ಮೇಲೆ ಹಾಗೂ ರಸ್ತೆ ಬದಿಯಲ್ಲಿ ಗಿಡಗಳು ಬೆಳೆದು ನಿಂತು ಸೊಳ್ಳೆಗಳಿಗೆ ಆಶ್ರಯ ನೀಡುತ್ತಿವೆ.ಪಟ್ಣಣದ ಸೋಮೇಶ್ವರ ಹಾಸ್ಟೆಲ್ ರಸ್ತೆಯ ಬದಿಯಲ್ಲಿ ಕೃಷಿ ಸಹಾಯಕ ನಿರ್ದೇಶಕ ಕಚೇರಿ, ರೈತ ಸಂಪರ್ಕ ಕೇಂದ್ರ, ಪೊಲೀಸ್ ಕ್ವಾರ್ಟಸ್, ಕುಂಬಾರ ಭವನ, ಸೋಮೇಶ್ವರ ಹಾಸ್ಟೆಲ್ ಸುತ್ತ ಮುತ್ತಲೆಲ್ಲ ಗಿಡಗಳು ಬೆಳೆದು ನಿಂತಿವೆ. ಡೆಂಘೀ ಜ್ವರ ರಾಜ್ಯದಲ್ಲಿ ಹೆಚ್ಚಾಗಿದೆ, ಪುರಸಭೆ ಗಿಡ, ಗಂಟಿಗಳ ತೆರವಿಗೂ ಮುಂದಾಗಿಲ್ಲ. ಚರಂಡಿಗಳ ಮೇಲೆ ಬ್ಲೀಚಿಂಗ್ ಪೌಡರ್ ಹಾಕಿಲ್ಲ ಎಂದು ಸೋಮೇಶ್ವರ ಹಾಸ್ಟೆಲ್ ರಸ್ತೇಲಿ ಸಂಚರಿಸುವ ಜನರು ಆರೋಪಿಸಿದ್ದಾರೆ.
ನಿರ್ಲಕ್ಷ್ಯ: ಪುರಸಭೆ ಆಡಳಿತಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಪಟ್ಟಣದ ಸ್ವಚ್ಛತೆ ಕಾಪಾಡಲು ಮುಂದಾಗಿಲ್ಲ. ಇನ್ನಾದರು ಪಟ್ಟಣದ ಚರಂಡಿ ಹಾಗೂ ರಸ್ತೆ ಹಾಗು ಖಾಲಿ ನಿವೇಶನಗಳಲ್ಲಿ ಬೆಳೆದು ನಿಂತ ಗಿಡಗಳ ತೆರವುಗೊಳಿಸಿ ಸಾಂಕ್ರಾಮಿಕ ರೋಗ ತಡೆಯಲಿ ಎಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.‘ಮಳೆ ಬೀಳುತ್ತಿರುವ ಕಾರಣ ಚರಂಡಿ ಸ್ವಚ್ಛ ಮಾಡಲು ಸಾಧ್ಯವಾಗಿಲ್ಲ. ಖಾಲಿ ನಿವೇಶನ ಮಾಲೀಕರು ತಾವೇ ಗಿಡಗಳ ತೆರವು ಮಾಡಿಸಲಿ ಇಲ್ಲದಿದ್ದರೆ ಪುರಸಭೆ ಮಾಡಿಸಿದರೆ ದಂಡದ ಸಮೇತ ಹಣ ಕೊಡಬೇಕಾಗುತ್ತದೆ’.-ಕೆ.ಪಿ.ವಸಂತಕುಮಾರಿ, ಮುಖ್ಯಾಧಿಕಾರಿ, ಪುರಸಭೆ.