ಹೆದ್ದಾರಿಯಲ್ಲಿ ಸಿಕ್ಕ 2.15 ಲಕ್ಷ ಹಣ ಹಿಂದುರುಗಿಸಿದ ಹೋಟೆಲ್ ಮಾಲೀಕ

| Published : Aug 10 2025, 01:30 AM IST

ಹೆದ್ದಾರಿಯಲ್ಲಿ ಸಿಕ್ಕ 2.15 ಲಕ್ಷ ಹಣ ಹಿಂದುರುಗಿಸಿದ ಹೋಟೆಲ್ ಮಾಲೀಕ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಪಟ್ಟಣದ ಎಡೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಹೋಟೆಲ್ ಮಾಲೀಕನಿಗೆ ಸಿಕ್ಕ 2.15 ಲಕ್ಷ ಹಣವನ್ನು ಹಿಂದುರಿಗಿಸಲು ದಾಬಸ್‍ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.

ದಾಬಸ್‍ಪೇಟೆ: ಪಟ್ಟಣದ ಎಡೇಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಖಾಸಗಿ ಹೋಟೆಲ್ ಮಾಲೀಕನಿಗೆ ಸಿಕ್ಕ 2.15 ಲಕ್ಷ ಹಣವನ್ನು ಹಿಂದುರಿಗಿಸಲು ದಾಬಸ್‍ಪೇಟೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.

ಸೋಂಪುರ ಹೋಬಳಿ ಎಡೇಹಳ್ಳಿಯ ಹೋಟೆಲ್ ಮಾಲೀಕ ಚಂದ್ರಶೇಖರ್ ಹಣವನ್ನು ವಾರಸುದಾರರಿಗೆ ಹಸ್ತಾಂತರಿಸಿದವರು. ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ದಾಬಸ್‍ಪೇಟೆ ಪೊಲೀಸರ ಕಾರ್ಯ ಶ್ಲಾಘನೀಯ.

ದಾಬಸ್‍ಪೇಟೆ ಪಟ್ಟಣದ ವಿನಾಯಕ ಬಡಾವಣೆಯ ಸ್ವಾಮಿ ದಂಪತಿ, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮಗನ ಶಾಲೆಗೆ ಶುಲ್ಕ ಪಾವತಿಸಲು ಮನೆಯಿಂದ ಹೊರಡುವಾಗ ತರಾತುರಿಯಲ್ಲಿ 2,15,000 ಹಣವಿರುವ ಬ್ಯಾಗನ್ನು ಕಾರಿನ ಮೇಲ್ಬಾಗದಲ್ಲಿಟ್ಟು ಮರೆತು ಹಾಗೆ ವಾಹನ ಚಲಾಯಿಸಿಕೊಂಡು ಹೋಗುವಾಗ, ದಾರಿ ಮಧ್ಯ ಹಣದ ಬ್ಯಾಗು ಬೀಳಿಸಿಕೊಂಡಿದ್ದಾರೆ, ಆಗ ದಾಬಸ್‍ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪೊಲೀಸ್ ಇನ್ಸ್ ಪೆಕ್ಟರ್ ಬಿ.ರಾಜು ಹಾಗೂ ಪೇದೆಗಳಾದ ರಂಗನಾಥ್ ಹಾಗೂ ಗಂಗೇಶ್ ಚಾಕಚಕ್ಯತೆ, ಸಮಯ ಪ್ರಜ್ಞೆಯಿಂದ ಸಿಸಿ ಟಿವಿಯಲ್ಲಿ ಪರಿಶೀಲಿಸಿ, ಹಣ ರಾಷ್ಟ್ರೀಯ ಹೆದ್ದಾರಿಯ ಎಡೆಹಳ್ಳಿಯ ಬಳಿಯಿರುವ ಬಾಳೆಎಲೆ ಬಿರಿಯಾನಿ ಹೋಟೆಲ್ ಮಾಲೀಕ ಚಂದ್ರಶೇಖರ್ ಕೈಗೆ ಸಿಕ್ಕಿರುವುದಾಗಿ ತಿಳಿದು ಪೊಲೀಸರ ನೇತೃತ್ವದಲ್ಲಿ ಹಣ ಕಳೆದುಕೊಂಡ ವಾರಸುದಾರರಿಗೆ ಹಣ ಕೊಡಿಸಿದ್ದಾರೆ.

ಪೊಟೋ 3 : ದಾಬಸ್‍ಪೇಟೆ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸರಿಗೆ ಮತ್ತು ಹಣ ಹಿಂದುರುಗಿಸಿದ ಚಂದ್ರಶೇಖರ್‌ ಅವರನ್ನು ದಾಬಸ್‍ಪೇಟೆ ನಿವಾಸಿಗಳು ಸೇರಿ ಅಭಿನಂದಿಸಿದರು.