ನರಸಿಂಹರಾಜಪುರಗ್ಯಾಸ್ ಸಿಗದೆ ಅನೇಕ ಹೋಟೆಲ್ ನವರು, ಬೇಕರಿ, ಹಾಸ್ಟೆಲ್ ಗಳಲ್ಲಿ ತೀವ್ರ ತೊಂದರೆಯಾಗುತ್ತಿದ್ದರೂ ಬಿಜೆಪಿ 19 ಸಂಸದರು ಚಕಾರ ಎತ್ತದೆ ಮೌನವಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆಕ್ರೋಶ ವ್ಯಕ್ತಪಡಿಸಿದರು.
- ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ನಿಂದ ಸೌದೆ ಒಲೆಯಲ್ಲಿ ಟೀ ಮಾಡಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಗ್ಯಾಸ್ ಸಿಗದೆ ಅನೇಕ ಹೋಟೆಲ್ ನವರು, ಬೇಕರಿ, ಹಾಸ್ಟೆಲ್ ಗಳಲ್ಲಿ ತೀವ್ರ ತೊಂದರೆಯಾಗುತ್ತಿದ್ದರೂ ಬಿಜೆಪಿ 19 ಸಂಸದರು ಚಕಾರ ಎತ್ತದೆ ಮೌನವಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಸಂಜೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಗ್ಯಾಸ್ ಆಶ್ರಯದಲ್ಲಿ ಗ್ಯಾಸ್ ಸರಬರಾಜು ವ್ಯತ್ಯಯ ಖಂಡಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಬಿಜೆಪಿ ನೇತೃತ್ವದ ಸರ್ಕಾರ ದೇಶದ ಜನಸಾಮಾನ್ಯರ ಮೇಲೆ ಅವೈಜ್ಞಾನಿಕ ನೀತಿಯಿಂದ ನಿರಂತರ ಶೋಷಣೆ ಮಾಡುತ್ತಿದೆ. ಜನರಲ್ಲಿ ಆತಂಕ ಸೃಷ್ಟಿಸುತ್ತಿದೆ. ಕೇಂದ್ರದ ಅಧೀನದಲ್ಲೇ ಬರುವ ಇಂಧನ ಕಂಪನಿಗಳಿಗೆ ಗ್ಯಾಸ್ ಸರಬ ರಾಜಿನ ವ್ಯತ್ಯಯ ಬಗ್ಗೆ ಏಕೆ ಶಿಸ್ತು ಕ್ರಮ ಜರುಗಿಸಿಲ್ಲ. 19 ಜನ ಬಿಜೆಪಿ ಸಂಸದರಿದ್ದಾರೆ. ಅವರೆಲ್ಲರೂ ಏನು ಮಾಡುತ್ತಿ ದ್ದಾರೆ. ರಾಜ್ಯದಿಂದ ಪ್ರತಿನಿಧಿಸಿದ ಸಂಸದರು ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿಯೇ ಇಲ್ಲ. ಬಿಜೆಪಿಗೆ ತನಗಿರುವ ಜವಾಬ್ದಾರಿ ಜ್ಞಾಪಿಸಲು ಈ ರೀತಿ ಒಲೆಯಲ್ಲಿ ಅಡುಗೆ, ಟೀ ಮಾಡಿ ಎಚ್ಚರಿಸುತ್ತಿದ್ದೇವೆ. ಗ್ಯಾಸ್ ಸಮಸ್ಯೆ ಬಗೆ ಹರಿಸದೇ ಇದ್ದಲ್ಲಿ ರಾಜೀನಾಮೆ ಕೊಡಲಿ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಜನರಿಗೆ ಕೊಟ್ಟ ಭರವಸೆಯಂತೆ ಎಲ್ಲಾ ಸವಲತ್ತು ನೀಡಿ, ನುಡಿದಂತೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಮೌನವನ್ನು ನಮ್ಮ ಪಕ್ಷ ಖಂಡಿಸುತ್ತದೆ ಎಂದರು.ಜಿ.ಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಮಣ್ಯ ಮಾತನಾಡಿ, ಇಂಧನ ಅವ್ಯವಸ್ಥೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ರಾಜ್ಯದ ಜನರೂ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಕೇಂದ್ರದಿಂದ ಬರುವ ಯಾವ ಸವಲತ್ತನ್ನು ನೀಡದೆ ಮಲ ತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.ಪ.ಪಂ. ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಬಿಜೆಪಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿನೇ, ದಿನೇ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದ ಪರಿಣಾಮ ಜನ ಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಬೆಲೆ ಏರಿಕೆ ಒಂದು ಕಡೆಯಾದರೆ ಗ್ಯಾಸ್ ಸರಬರಾಜಿಲ್ಲದೆ ರಾಜ್ಯದ ಜನರು ತತ್ತರಿಸಿ ಹೋಗಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಸೌದೆ ಒಲೆಯಲ್ಲಿ ಟೀ ಮಾಡಿದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟಿಸಿದರು. ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್ ಬೈಲ್ ನಟರಾಜ್, ನಗರ ಘಟಕದ ಅಧ್ಯಕ್ಷ ಶ್ರೀಧರ ಪಾನಿ, ಯುವ ಘಟಕದ ಅಧ್ಯಕ್ಷ ರತನ್ ಗೌಡ ಅರಗಿ,ಪ.ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್‌ಶೆಟ್ಟಿ, ಮಾಜಿ ಸದಸ್ಯರಾದ ಸುರಯ್ಯ ಭಾನು, ಅಂಜುಮ್, ಎಸ್.ಡಿ.ರಾಜೇಂದ್ರ, ಸುನೀಲ್ ಕುಮಾರ್ ಕರುಗುಂದ ನಂದೀಶ್, ಬೆನ್ನಿ, ಕೆ.ವಿ.ಸಾಜು, ಎಂ.ಆರ್.ರವಿಶಂಕರ್,ದೇವಂತ್,ನಹೀಂ,ಎಚ್.ಎಂ.ಶಿವಣ್ಣ,ರಂಜು,ನಾಗೇಶ, ಮಾಳೂರು ದಿಣ್ಣೆರಮೇಶ್, ಮಾಳೂರುದಿಣ್ಣೆ ಮೂರ್ತಿ, ಗಂಗಾಧರ,ಸುಜಿತ್, ಶಫಿರ್‌ಅಹಮ್ಮದ್,ನರೇಂದ್ರ, ಶೆಟ್ಟಿಕೊಪ್ಪ ಎಂ.ಮಹೇಶ್,ಶಿವಪಾಂಡೆ,ಶರತ್‌ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.