ಸಾರಾಂಶ
ಬ್ಯಾಡಗಿ: ಸ್ಥಳೀಯ ಪೊಲೀಸರು ಈರ್ವರು ಕುಖ್ಯಾತ ಹಗಲು ಮನೆಗಳ್ಳರ ಬಂಧಿಸಿದ್ದು, ಆರೋಪಿಗಳಿಂದ ₹7.58 ಲಕ್ಷ ಮೌಲ್ಯದ 110 ಗ್ರಾಂ ತೂಕದ ಬಂಗಾರದ ಆಭರಣ, 390 ಗ್ರಾಂ ಬೆಳ್ಳಿ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ ಹೊಂಡಾ ಯೂನಿಕಾರ್ನ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಬಳ್ಳಾರಿ ತಾಲೂಕಿನ ಜಾನೆಕುಂಟೆ ತಾಂಡಾದ ಮಲ್ಲಿಕಾರ್ಜುನ ನಾಯ್ಕ ರಾಮುನಾಯ್ಕ ಹಾಗೂ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ವೆಂಕಟಗಿರಿ ತಾಂಡಾದ ವೆಂಕಟೇಶನಾಯ್ಕ ದುರ್ಗಾನಾಯ್ಕ ಆರೋಪಿಗಳು. ಇದರಲ್ಲಿ ಓರ್ವ ಡ್ರೈವರ್, ಇನ್ನೋರ್ವ ಹೋಟೆಲ್‌ನಲ್ಲಿ ಮಾಣಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಕಳೆದ ಆ.18ರಂದು ಪಟ್ಟಣದ ಮೋಟೆಬೆನ್ನೂರು ರಸ್ತೆಯಲ್ಲಿ ಮುಂಜಾನೆ 11 ಗಂಟೆ ಸುಮಾರಿಗೆ ಬಸವರಾಜ ಶಂಕ್ರಪ್ಪ ಸಂಕಣ್ಣನವರ ಇವರ ಮನೆ ಬೀಗ ಮುರಿದು ಮನೆಯಲ್ಲಿದ್ದ ಬೆಳ್ಳಿ ಬಂಗಾರ ಹಾಗೂ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು.ಪ್ರಕರಣದ ಜಾಡು ಬೆನ್ನು ಹತ್ತಿದ ಸ್ಥಳೀಯ ಪೊಲೀಸರು ಎಸ್ಪಿ ಅಂಶುಕುಮಾರ, ಅಡಿಶನಲ್ ಎಸ್ಪಿ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಎಂ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ಅಂತಿಮವಾಗಿ ಬಳ್ಳಾರಿ ನಗರದಲ್ಲಿ ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖಾಧಿಕಾರಿಗಳಾದ ಸಿಪಿಐ ಮಹಾಂತೇಶ ಲಂಬಿ ಹಾಗೂ ಹಾವೇರಿ ಗ್ರಾಮೀಣ ಸಿಪಿಐ ಸಂತೋಷ ಪವಾರ, ಪಿಎಸ್ಐ ಬಿ.ಎಸ್. ಅರವಿಂದ, ಅಪರಾಧ ವಿಭಾಗದ ಪಿಎಸ್ಐ ಎನ್.ಕೆ. ನಿಂಗೇನಹಳ್ಳಿ ಹಾಗೂ ಸಿಬ್ಬಂದಿ ಎಎಸ್ಐ ಬಸವರಾಜ ಅಂಜುಟಗಿ, ಡಿ.ಎಚ್. ಪೂಜಾರ, ಎಫ್.ಎಂ. ಖಾಜಿ, ಯು.ಬಿ. ನಂದಿಗೌಡ್ರ, ಲೋಕೇಶ ಲಮಾಣಿ, ಗುಡ್ಡಪ್ಪ ಹಳ್ಳೂರು, ಅಶೋಕ ಬಾರ್ಕಿ, ಮಂಜುನಾಥ ಬಾಳಿಕಾಯಿ, ಹಿದಾಯತ್ ದೊಡ್ಡಮುಲ್ಲಾ, ರಾಜು ಗೊಂದೇರ, ಈರನಗೌಡ ಸೊರಟೂರು, ಉಮೇಶ ಚಿಕ್ಕಮ್ಮನವರ, ಮಾಲತೇಶ ಹೊಸರಣ್ಣನವರ, ರಾಘು ಕಾಟೇನಹಳ್ಳಿ, ಶಿವರಾಜ ಇಮ್ಮಡಿ, ಬಿ.ಎನ್. ಬಚ್ಚಪ್ಪಗೌಡ್ರ, ಬಿ.ಎನ್. ಹೂಲಿಹಳ್ಳಿ, ಎಚ್.ಎಂ. ಬೆಳಕೇರಿ, ಪ್ರಭು ಸಿಂದಗಿಮಠ, ವಾಹನ ಚಾಲಕರಾದ ಮಂಜುನಾಥ ಮುಚ್ಚಟ್ಟಿ, ಹನುಮಂತ ಸುಂಕದ ತಂಡದಲ್ಲಿದ್ದರು.
ಕಳ್ಳತನ ಪ್ರಕರಣಗಳಿಂದ ಜರ್ಜಿತಗೊಂಡಿದ್ದ ಬ್ಯಾಡಗಿ ಪಟ್ಟಣದ ಜನತೆಗೆ ಕೊಂಚ ನಿರಾಳರಾಗಿದ್ದು ಇತ್ತೀಚೆಗಷ್ಟೇ ಸರಣಿ ಮನೆ ಕಳ್ಳತನ ಮಾಡುವ ಮೂಲಕ ಜನರ ನಿದ್ದೆಗೆಡಿಸಿದ್ದ 3 ಆರೋಪಿಗಳನ್ನು ಬಂಧಿಸಿದ್ದ ಬ್ಯಾಡಗಿ ಪೊಲೀಸರು ಆರೋಪಿಗಳಿಂದ ₹19.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ವಾಹನ ವಶಪಡಿಸಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು.