ವಿಪರೀತ ಮಳೆಗೆ ಮನೆ ಕುಸಿತ

| Published : Jul 23 2024, 12:31 AM IST

ಸಾರಾಂಶ

ಅರಸೀಕೆರೆ ನಗರದಲ್ಲಿ ಕೆಲವು ದಿನಗಳಿಂದ ಒಂದೇ ಸಮನೆ ಬೀಳುತ್ತಿರುವ ಮಳೆಯಿಂದ ಮನೆಯ ಗೋಡೆಗಳು ಶಿಥಿಲಗುಂಡು ಸೋಮವಾರ ಬೆಳಗಿನ ಜಾವ ಸುಮಾರು ಐದು ಗಂಟೆಗೆ ಮನೆಯೊಂದರ ಹಿಂಭಾಗದ ಮೇಲ್ಛಾವಣಿ ಹಾಗೂ ಮನೆಯ ಗೋಡೆಗಳು ಕುಸಿದಿದ್ದು, ಈ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆ ಶಬ್ದವನ್ನು ಕೇಳಿ ಮನೆಯ ಹೊರಗೆ ಓಡಿ ಬಂದಿದ್ದ ನಂತರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯಲ್ಲಿದ್ದಂತಹ ವಸ್ತುಗಳು ಗೋಡೆಗಳ ಅಡಿಯಲ್ಲಿ ಸಿಲುಕಿ ತುಂಬಾ ನಷ್ಟ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಮಟನ್ ಮಾರ್ಕೆಟ್ (ಚಾಂದಿನಿ ಚೌಕ )ಚಪ್ಪಡಿ ಕಲ್ಲು ಬೀದಿ ಪ್ರದೇಶದಲ್ಲಿ ಮಳೆ ಹಾಗೂ ಗಾಳಿಯಿಂದಾಗಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಸೊಗರಾ ಬೇಗಂ ಎಂಬ ಮಹಿಳೆಯೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಗರದಲ್ಲಿ ಕೆಲವು ದಿನಗಳಿಂದ ಒಂದೇ ಸಮನೆ ಬೀಳುತ್ತಿರುವ ಮಳೆಯಿಂದ ಮನೆಯ ಗೋಡೆಗಳು ಶಿಥಿಲಗುಂಡು ಸೋಮವಾರ ಬೆಳಗಿನ ಜಾವ ಸುಮಾರು ಐದು ಗಂಟೆಗೆ ಮನೆಯೊಂದರ ಹಿಂಭಾಗದ ಮೇಲ್ಛಾವಣಿ ಹಾಗೂ ಮನೆಯ ಗೋಡೆಗಳು ಕುಸಿದಿದ್ದು, ಈ ವೇಳೆ ಮನೆಯಲ್ಲಿ ಮಲಗಿದ್ದ ಮಹಿಳೆ ಶಬ್ದವನ್ನು ಕೇಳಿ ಮನೆಯ ಹೊರಗೆ ಓಡಿ ಬಂದಿದ್ದ ನಂತರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಮನೆಯಲ್ಲಿದ್ದಂತಹ ವಸ್ತುಗಳು ಗೋಡೆಗಳ ಅಡಿಯಲ್ಲಿ ಸಿಲುಕಿ ತುಂಬಾ ನಷ್ಟ ಉಂಟಾಗಿದೆ.

ವಿಷಯವನ್ನು ತಿಳಿದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಎಂ ಸಮಿವುಲ್ಲಾ, ನಗರಸಭೆ ಸದಸ್ಯರಾದ ರೇಷ್ಮಾ ಯೂನಸ್, ಮಾಜಿ ನಗರಸಭೆ ಸದಸ್ಯೆ ನಸೀಮಾ ಶಫಿ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಇವರ ಬಳಿ ಮನೆ ಕಳೆದುಕೊಂಡಂತ ಮಹಿಳೆ ಕಣ್ಣೀರು ಹಾಕಿ ನನಗೆಪತಿ ಇಲ್ಲ, ಮಕ್ಕಳು ಸಹ ನನ್ನ ಬಿಟ್ಟು ಹೋಗಿದ್ದಾರೆ. ನಾನು ಬೇರೆಯವರ ಮನೆಕೆಲಸ ಮಾಡಿ ಜೀವನ ಸಾಗಿಸಿಸುತ್ತಿದ್ದೇನೆ. ಮಳೆಯಿಂದ ಮನೆ ಸಹ ಬಿದ್ದು ಹೋಗಿದೆ ಎಂದು ನೋವು ತೋಡಿಕೊಂಡಿದ್ದು, ಆದಷ್ಟು ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ನಂತರ ನಗರ ಗ್ರಾಮ ಆಡಳಿತ ಅಧಿಕಾರಿ ಶಿವಾನಂದ ನಾಯಕ್. ಕೆ.ಎಸ್. ಹಾಗೂ ರಾಜಸ್ವ ನಿರೀಕ್ಷಕ ಓಬಲೇಶ್ ಸ್ಥಳಕ್ಕೆ ಆಗಮಿಸಿ ಸ್ಥಳವನ್ನು ಪರಿಶೀಲಿಸಿ ಸರ್ಕಾರದಿಂದ ಆದಷ್ಟು ಬೇಗ ಪರಿಹಾರವನ್ನು ನೀಡುವುದಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.