ಸಾರಾಂಶ
ಭಾಗ್ಯವಂತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಬಿಜೆಪಿ ಕಾರ್ಯಕರ್ತರಿಂದ ಚಾಲನೆ.
ಕನ್ನಡಪ್ರಭ ವಾರ್ತೆ ಶಹಾಪುರ
ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರುವ ಹಿನ್ನೆಲೆಯಲ್ಲಿ ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆಯನ್ನು ವಿತರಿಸುವ ಕಾರ್ಯಕ್ಕೆ ಬಿಜೆಪಿ ಕಾರ್ಯಕರ್ತರು ಚಾಲನೆ ನೀಡಿದರು.ನಗರದ ಭಾಗ್ಯವಂತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಯಿಂದ ಬಂದಿರುವ ಶ್ರೀರಾಮನ ಭಾವಚಿತ್ರ, ಮಂತ್ರಾಕ್ಷತೆ, ಕರಪತ್ರಗಳನ್ನು ವಾರ್ಡ್ ನಂಬರ್ 9, 10 ಮತ್ತು 13ರಲ್ಲಿ ಮನೆ ಮನೆಗೆ ತಲುಪಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ನಗರ ಮಂಡಲ ಅಧ್ಯಕ್ಷ ದೇವಿಂದ್ರಪ್ಪ ಕೊನೇರ, ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿ ಮನೆಗೆ ಮಂತ್ರಾಕ್ಷತೆ ವಿತರಿಸಲಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೆ ಮಂತ್ರಾಕ್ಷತೆ ನೀಡಲಾಗುತ್ತಿದೆ ಎಂದರು.ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದು ಪ್ರತಿಯೊಬ್ಬರೂ ಸ್ವೀಕರಿಸಿದ ಮಂತ್ರಾಕ್ಷತೆಯನ್ನು ತಮ್ಮ ಮನೆಯಲ್ಲಿ ಪಾಯಸ ಮಾಡಿ ಸ್ವೀಕರಿಸಬೇಕು. ಅಲ್ಲದೆ, ಕನಿಷ್ಠ ಐದು ದೀಪಗಳನ್ನು ಉತ್ತರದಿಕ್ಕಿಗೆ ಮುಖ ಮಾಡಿ ಹೊತ್ತಿಸಬೇಕು. ಅಲ್ಲದೆ, ಭಕ್ತರು ತಮ್ಮ ನೆರೆಹೊರೆಯಲ್ಲಿರುವ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯಲ್ಲಿ ಭಾಗಿಯಾಗಬೇಕು ಎಂದು ಮನೆಯಲ್ಲಿ ಸದಸ್ಯರಲ್ಲಿ ವಿನಂತಿಸಿದರು.
ದೇವೇಂದ್ರಪ್ಪ ನಾಶಿ, ವಿಶ್ವನಾಥ್ ಗೌಡಗಾವ್, ಹುಸನಪ್ಪ ಅಜ್ಜಕೊಲ್ಲಿ, ಸುರೇಶ ಫಿರಂಗಿ, ಶಿವು ಶಿರವಾಳ, ಸಾಯಬಣ್ಣ ನಾಶಿ, ಹನುಮಂತ, ಮಲ್ಲಿಕಾರ್ಜುನ್ ಮಹೇಶ್, ನಾಗರಾಜ್ , ಮಾಳಪ್ಪ ಪೂಜಾರಿ, ಭೀಮು ಡಿ., ಕೃಷ್ಣ ಕಾಂಬ್ಳೆಕರ್, ಮನೋಹರ್ ಪತ್ತಾರ್, ಮಹೇಶ್ ಕಾಂಬ್ಳೇಕರ್ ಇದ್ದರು.