ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಾದ್ಯಂತ ಅಕ್ಟೋಬರ 1, 2026ನ್ನು ಅರ್ಹತಾ ದಿನಾಂಕವನ್ನಾಧರಿಸಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನಲೆಯಲ್ಲಿ ಜೂನ್ 30 ರಿಂದ ಜುಲೈ 29 ವರೆಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 7 ಮತಕ್ಷೇತ್ರ ಒಳಗೊಂಡಂತೆ ಒಟ್ಟು 1785 ಮತಗಟ್ಟೆಗಳು ಇದ್ದು, ಪ್ರತಿ ಮತಗಟ್ಟೆಗೆ ಓರ್ವ ಮತಗಟ್ಟೆ ಅಧಿಕಾರಿ ಹಾಗೂ ಪ್ರತಿ 10 ರಿಂದ 12 ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲೆ ಓರ್ವ ಸುಪರವೈಜರನ್ನು ನೇಮಕ ಮಾಡಲಾಗಿದೆ. ಮುಧೋಳ ಮತಕ್ಷೇತ್ರದಲ್ಲಿ 212 ಮತಗಟ್ಟೆಗಳು ಇದ್ದರೆ, ತೇರದಾಳ 236, ಜಮಖಂಡಿ 232, ಬೀಳಗಿ 265, ಬಾದಾಮಿ 260, ಬಾಗಲಕೋಟೆ 319 ಹಾಗೂ ಹುನಗುಂದ ಮತಕ್ಷೇತ್ರದಲ್ಲಿ 261 ಮತಗಟ್ಟೆಗಳಿವೆ ಎಂದು ತಿಳಿಸಿದರು.

ಜೂನ್ 4, 2026ರ ಅಂತ್ಯಕ್ಕೆ 803389 ಮಹಿಳೆಯರು, 832639 ಹಾಗೂ 100 ಇತರೆ ಸೇರಿ ಒಟ್ಟು 16,36,128 ಮತದಾರರಿದ್ದಾರೆ. ಜಿಲ್ಲೆಯ 7 ಮತಕ್ಷೇತ್ರಗಳ ಮ್ಯಾಪಿಂಗ್ ಕಾರ್ಯ ಶೇ.97.07 ರಷ್ಟು ನಡೆದಿದ್ದು, ಮುಧೋಳ ಮತಕ್ಷೇತ್ರದಲ್ಲಿ 98.29 ರಷ್ಟು ಮ್ಯಾಪಿಂಗ್ ಕಾರ್ಯ ನಡೆದರೆ, ತೇರದಾಳದಲ್ಲಿ ಶೇ.95.31, ಜಮಖಂಡಿ ಶೇ.99.32, ಬೀಳಗಿ ಶೇ.98.53, ಬಾದಾಮಿ ಶೇ.97.35, ಬಾಗಲಕೋಟೆ ಶೇ.92.20 ಹಾಗೂ ಹುನಗುಂದ ಕ್ಷೇತ್ರದಲ್ಲಿ ಶೇ.99.03 ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಈ ಕಾರ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಬೂತ ಮಟ್ಟದ ಏಜೆಂಟರು ಪರಿಷ್ಕರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದು, ಮನೆ ಮನೆ ಭೇಟಿ ಸಮಯದಲ್ಲಿ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.

ಪರಿಷ್ಕರಣೆಗೆ ಸಂಬಂಧಿಸಿದಂತೆ ನಮೂನೆಗಳು ಹಾಗೂ ಹೆಚ್ಚಿನ ಮಾಹಿತಿಗಾಗಿ ಚುನಾವಣಾ ಅಧಿಕಾರಿಗಳ ವೆಬ್ಸೈಟ್ ಮುಖ್ಯ ಚುನಾವಣಾಧಿಕಾರಿಗಳ ವೆಬ್ಸೈಟ್ ಭಾರತ ಚುನಾವಣಾ ಆಯೋಗದ ವೆಬ್ಸೈಟ್ ಗೆ ಭೇಟಿ ನೀಡಿ ಪಡೆಯಬಹುದಾಗಿದೆ. ಈ ಬಗ್ಗೆ ಮಾಹಿತಿ ಬೇಕಾದಲ್ಲಿ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಮತದಾರರಿಗೆ ಅನುಕೂಲವಾಗುವಂತೆ ಪ್ರತಿ ಗ್ರಾ.ಪಂ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ವಾರ್ಡಗಳಲ್ಲಿ ಓಟರ್ ಪೇಸಿಲಿಟೇಶನ್ ಸೆಂಟರ ಹಾಗೂ ಪ್ರತಿ ಮತಗಟ್ಟೆಯಲ್ಲಿ ಬಿಎಲ್ಓ ಪೇಸಿಲಿಟೇಶನ್ ಸೆಂಟರ ಪ್ರಾರಂಭಿಸಲಿ ಕ್ರಮಕೈಗೊಳ್ಳಲಾಗಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಉಪಸ್ಥಿತರಿದ್ದರು.


ಮತದಾರರ ನೋಂದಣಾಧಿಕಾರಿ, ಸಹಾಯಕ ನೋಂದಣಾಧಿಕಾರಿಗಳ ವಿವರ:

ಮುಧೋಳ ಮತಕ್ಷೇತ್ರದ ಮತದಾರರ ನೋಂದಣಾಧಿಕಾರಿ ವಿರುಪಾಕ್ಷ ಬಣಗಾರ (9880166825), ಸಹಾಯಕ ಮತದಾರರ ನೋಂದಣಾಧಿಕಾರಿ ಚಿಕ್ಕಪ್ಪ ನಾಯಕ (8861387349), ತೇರದಾಳ ಕ್ಷೇತ್ರದಲ್ಲಿ ಗಂಗಾಧರ ಮಾಳಗಿ (9741695388), ಗಿರೀಶ ಸವದಿ (7090995555), ಜಮಖಂಡಿ ಕ್ಷೇತ್ರದಲ್ಲಿ ಶ್ವೇತಾ ಬೀಡಿಕರ (9535425369), ಅನೀಲ ಬಡಿಗೇರ (8904669613), ಬೀಳಗಿ ಕ್ಷೇತ್ರದಲ್ಲಿ ವಿರೂಪಾಕ್ಷಿ ಬನಗಾರ (9880166825), ವಿನೋದ ಹತ್ತಳ್ಳಿ (ಬೀಳಗಿ-9901332717), ವಾಸುದೇವ ಸ್ವಾಮಿ (ಬಾಗಲಕೋಟೆ-9980067196), ಎಸ್.ಎಫ್.ಬೊಮ್ಮಣ್ಣವರ (ಬಾದಾಮಿ-9449817560), ಬಾದಾಮಿ ಕ್ಷೇತ್ರಕ್ಕೆ ಅರುಣ ಕುಲಕರ್ಣಿ(9880488881), ಎಸ್.ಎಫ್.ಬೊಮ್ಮಣ್ಣವರ (9449817560), ಬಾಗಲಕೋಟೆ ಕ್ಷೇತ್ರಕ್ಕೆ ಸಂತೋಷ ಜಗಲಾಸರ (6364400262), ವಾಸುದೇವಸ್ವಾಮಿ (ಬಾಗಲಕೋಟೆ-9980067196), ಪ್ರದೀಪಕುಮಾರ ಹಿರೇಮಠ (ಹುನಗುಂದ-8073688515), ಹುನಗುಂದ ಕ್ಷೇತ್ರಕ್ಕೆ ಪ್ರದೀಪಕುಮಾರ ಹಿರೇಮಠ (ಹುನಗುಂದ-8073688515), ಅಮರೇಶ ಪಮ್ಮಾರ (ಇಲಕಲ್ಲ-9597197182).