ನ್ಯಾಮತಿ ತಾಲೂಕು ವಿವಿಧೆಡೆ ಮನೆಗಳು, ಕಂಬಗಳು ಧರೆಗೆ

| Published : Jul 21 2024, 01:20 AM IST

ಸಾರಾಂಶ

ನ್ಯಾಮತಿ ತಾಲೂಕಿನ ವಿವಿಧೆಡೆಗಳಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿವಿಧೆಡೆ ಮನೆಗಳ ಗೋಡೆಗಳು ಕುಸಿತಗೊಂಡಿವೆ. ಕೆಲವೆಡೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಅದೃಷ್ಟವಶಾತ್‌, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ನ್ಯಾಮತಿ: ತಾಲೂಕಿನ ವಿವಿಧೆಡೆಗಳಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿವಿಧೆಡೆ ಮನೆಗಳ ಗೋಡೆಗಳು ಕುಸಿತಗೊಂಡಿವೆ. ಕೆಲವೆಡೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಅದೃಷ್ಟವಶಾತ್‌, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪಟ್ಟಣದ ಶಂಕರಪ್ಪ ಎಂಬವರ ಮನೆ ಗೋಡೆ ಕುಸಿದ ಪರಿಣಾಮ ಪತ್ನಿ, ಎರಡು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಯಾವುದೇ ಪ್ರಾಣಾಪಾಯವಾಗಿಲ್ಲ. ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ಶಾಂತಮ್ಮ ಹಾಗೂ ಚಿನ್ನಿಕಟ್ಟೆ ಗ್ರಾಮದ ಯಶೋಧಮ್ಮ ಎಂಬವರಿಗೆ ಸೇರಿದ ಮನೆಗಳ ಗೋಡೆ ಕುಸಿತ ಕಂಡಿದೆ.

ಸುರಹೊನ್ನೆ ಗ್ರಾಮದಲ್ಲಿ 2, ಬಿದರಹಳ್ಳಿ ಗ್ರಾಮದಲ್ಲಿ 1 ಮನೆ, ಒಡೆಯರ ಹತ್ತೂರು ಗ್ರಾಮದಲ್ಲಿ 1 ಮನೆ, ಯರಗನಾಳ್‌ ಗ್ರಾಮದಲ್ಲಿ 1 ಮನೆ, ದೊಡ್ಡೇರಿ ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿದೆ. ನಿರಂತರ ಮಳೆ-ಗಾಳಿಗೆ ಮರಗಳು ಸೇರಿದಂತೆ ವಿದ್ಯುತ್‌ ಕಂಬಗಳು ಧರೆಶಾಯಿಯಾಗಿವೆ. ಕೋಡಿಕೊಪ್ಪ ಬಳಿಯ ಎಚ್‌ಟಿ ಪೋಲ್‌ 2, ಕಂಚುಗಾರನಹಳ್ಳಿ 2, ಕೊಗನಹಳ್ಳಿ 4, ಸಾಲಬಾಳ ಹಳ್ಳದ ಬಳಿ ವಿದ್ಯುತ್‌ ಪರಿವರ್ತಕಗಳು ಕುಸಿದು, ಹಾನಿಗೀಡಾಗಿವೆ.

ಧಾರಾಕಾರ ಮಳೆಯಿಂದ ಹಾನಿ ಸಂಭವಿಸಿದ ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- - - (-ಫೋಟೋ):