ಸಾರಾಂಶ
ಬಾಳೆಹೊನ್ನೂರು, ಪ್ರಿಯಕರನೊಂದಿಗೆ ಮಾತು ಬಿಟ್ಟಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಚಾಕುವಿನಿಂದ ಇರಿದು, ಕೆರೆಗೆ ತಳ್ಳಿ ಹತ್ಯೆ ಮಾಡಿದ್ದಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶನಿವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪ್ರಿಯಕರನೊಂದಿಗೆ ಮಾತು ಬಿಟ್ಟಿದ್ದಳು ಎಂಬ ಕಾರಣಕ್ಕೆ ಆಕೆಯನ್ನು ಚಾಕುವಿನಿಂದ ಇರಿದು, ಕೆರೆಗೆ ತಳ್ಳಿ ಹತ್ಯೆ ಮಾಡಿದ್ದ
ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಶನಿವಾರ ಸಂಜೆ ಪೊಲೀಸರು ಬಂಧಿಸಿದ್ದಾರೆ.ಎನ್.ಆರ್.ಪುರ ತಾಲೂಕಿನ ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ತೃಪ್ತಿ (25) ಹತ್ಯೆಗೊಳಗಾದ ವಿವಾಹಿತೆ. ಈಕೆಯನ್ನು ಹತ್ಯೆ ಮಾಡಿದ್ದ ಬೆಂಗಳೂರಿನ ಆನೇಕಲ್ ಮೂಲದ ಆರೋಪಿ ಚಿರಂಜೀವಿ ಪರಾರಿಯಾಗುತ್ತಿದ್ದ ವೇಳೆ ವಿಶೇಷ ಪೊಲೀಸ್ ತಂಡಗಳ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ.ಹಿನ್ನಲೆ: ತೃಪ್ತಿ ಮತ್ತು ಬೆಂಗಳೂರಿನ ಚಿರಂಜೀವಿಗೆ ಮೊಬೈಲ್ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ತಿಂಗಳು ತೃಪ್ತಿ ಗಂಡ, ಮಕ್ಕಳಿಂದ ಬೇರ್ಪಟ್ಟು ಮನೆಬಿಟ್ಟು ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಳು.
ಈ ಬಗ್ಗೆ ಆಕೆ ಗಂಡ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಇಬ್ಬರನ್ನು ಪತ್ತೆ ಹಚ್ಚಿದ ಪೊಲೀಸರು ಸ್ವಗ್ರಾಮಕ್ಕೆ ಕರೆತಂದು ರಾಜೀ ಸಂಧಾನ ನಡೆಸಿ ಪ್ರಿಯಕರನೊಂದಿಗೆ ತೆರಳದಂತೆ ಸೂಚಿಸಿ ಆಕೆಯನ್ನು ಪತಿಯೊಂದಿಗೆ ಕಳುಹಿಸಿದ್ದರು.ಆ ಬಳಿಕ ತೃಪ್ತಿ ತನ್ನ ಪ್ರಿಯಕರನೊಂದಿಗೆ ಮಾತು ಬಿಟ್ಟಿದ್ದಳು. ಇದರಿಂದ ಪ್ರಿಯಕರ ಚಿರಂಜೀವಿ ಕೋಪಗೊಂಡಿದ್ದು, ಶನಿವಾರ ಕಿಚ್ಚಬ್ಬಿ ಗ್ರಾಮದ ಆಕೆಯ ಮನೆಗೆ ಗಂಡ ಇಲ್ಲದ ವೇಳೆ ಆಗಮಿಸಿ ಅವಳ ಮಕ್ಕಳ ಎದುರೇ ಚಾಕುವಿನಿಂದ ಇರಿದು ಮನೆ ಸಮೀಪದಲ್ಲಿ ಇರುವ ಕೆರೆಗೆ ತಳ್ಳಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು.ತೃಪ್ತಿಗೆ ನಾಲ್ಕು ಹಾಗೂ ಎರಡು ವರ್ಷದ ಮಕ್ಕಳಿದ್ದು, ಅವರ ಎದುರಲ್ಲೇ ಘಟನೆ ನಡೆದಿರುವುದರಿಂದ ದಿಗ್ಭ್ರಮೆಗೊಂಡಿದ್ದಾರೆ. ಸ್ಥಳಕ್ಕೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ಸಿಪಿಐ ಗುರು ಕಾಮತ್, ಪಿಎಸ್‌ಐ ರವೀಶ್ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿದ್ದರು.ನಾಪತ್ತೆಯಾಗಿದ ಆರೋಪಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ನಾಲ್ಕು ತಂಡ ರಚಿಸಿ ಪತ್ತೆ ಕಾರ್ಯ ಕೈಗೊಂಡಿದ್ದರು. ಸಂಜೆಯೇ ಆರೋಪಿಯನ್ನು ಬಂಧಿಸುವಲ್ಲಿ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಅಡಿಷನಲ್ ಎಸ್ಪಿ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಶ್ವಾನ ದಳ, ವೈಜ್ಞಾನಿಕ ಬೆರಳಚ್ಚು ತಜ್ಞರು ಭೇಟಿ ನೀಡಿದ್ದರು.ಮೃತಳ ಪತಿ ರಾಜೇಶ್ ಠಾಣೆಯಲ್ಲಿ ದೂರು ನೀಡಿದ್ದು, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
೦೭ಬಿಹೆಚ್‌ಆರ್ ೮: ಹತ್ಯೆಗೀಡಾದ ತೃಪ್ತಿ ೦೭ಬಿಚ್‌ಆರ್ ೯: ಹತ್ಯೆ ನಡೆಸಿದ ಆರೋಪಿ ಚಿರಂಜೀವಿ