ಮನಾಲಿಯಲ್ಲಿ ವಿಪರೀತ ಹಿಮಪಾತದಿಂದಾಗಿ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದೇವೆ. ಹಿಮದಿಂದ ರಸ್ತೆಗಳು ಸಂಪೂರ್ಣ ಮುಚ್ಚಿ ಹೋಗಿವೆ.
ಹುಬ್ಬಳ್ಳಿ:
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ವಿಪರೀತ ಹಿಮಪಾತವಾಗುತ್ತಿದ್ದು, ಪ್ರವಾಸಕ್ಕೆ ತೆರಳಿರುವ ಹುಬ್ಬಳ್ಳಿಯ 27 ಪ್ರವಾಸಿಗರು ಮುಂದೆ ಸಾಗಲು ದಾರಿ ಇಲ್ಲದೇ 3 ದಿನಗಳಿಂದ ರೆಸಾರ್ಟ್‌ವೊಂದರಲ್ಲಿ ತಂಗಿದ್ದಾರೆ.ಸದ್ಯ ಮನಾಲಿಯ ಅಂಟೀಲ್‌ವೆಲ್ಲಿ ರೆಸಾರ್ಟ್‌ನಲ್ಲಿ ಆಶ್ರಯ ಪಡೆದಿರುವ ಹುಬ್ಬಳ್ಳಿ ಪ್ರವಾಸಿಗರು, ಹೊರಗಡೆ ಹಿಮಪಾತದಿಂದ ಸಂಚಾರಕ್ಕೆ ತಡೆ ಉಂಟಾಗಿ, ರಸ್ತೆಗಳಲ್ಲಿ ಹಿಮಪಾತ ಬಿದ್ದು ರಸ್ತೆಗಳಲ್ಲಿ ವಾಹನ ಸಂಚರಿಸದಂತಹ ಪರಿಸ್ಥಿತಿ ಉಂಟಾಗಿದೆ.
ಜ. 21ರಂದು ಮನಾಲಿಗೆ ಪ್ರವಾಸ ಬೆಳೆಸಿರುವ ತಂಡದಲ್ಲಿ ಹುಬ್ಬಳ್ಳಿಯ ಉದ್ಯಮಿ ಸಂತೋಷ ಶೆಟ್ಟಿ, ರವಿ ಜಿಗಳೂರ, ಸಲ್ಮಾ ಶೇಖ, ಅನಿಸ್ ಖೋಜೆ, ಅಮಿತ್ ಸರಾ, ಕುಬೇರ ಡಿಸ್ಟೊಬೆಟರ್, ರಿತೂ ಸರಾ, ವಕೀಲರಾದ ಕೆ.ಬಿ. ಶಿವಕುಮಾರ, ಗುರುರಾಜ ಹೂಗಾರ, ಮಹಾಲಕ್ಷ್ಮೀ, ರಾಜ್ ಹುದ್ಲೂರ ಸೇರಿದಂತೆ ಒಟ್ಟು 27 ಜನರಿದ್ದಾರೆ.ಈ ಕುರಿತು ಮಾಹಿತಿ ಹಂಚಿಕೊಂಡ ಉದ್ಯಮಿ ಸಂತೋಷ ಶೆಟ್ಟಿ, ಮನಾಲಿಯಲ್ಲಿ ವಿಪರೀತ ಹಿಮಪಾತದಿಂದಾಗಿ ರಕ್ಷಣೆ ಪಡೆಯಲು ಹರಸಾಹಸ ಪಡುತ್ತಿದ್ದೇವೆ. ಹಿಮದಿಂದ ರಸ್ತೆಗಳು ಸಂಪೂರ್ಣ ಮುಚ್ಚಿ ಹೋಗಿವೆ. ಇಲ್ಲಿಂದ ಬೇರೆಡೆ ಹೋಗಲು ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗನೆ ಬೇರೆಡೆ ಸ್ಥಳಾಂತರಿಸುವಂತೆ ಅಲ್ಲಿನ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.