ಶುಗರ್‌ ಪ್ರಿಯರ ನೇರಳೆ ಹಣ್ಣಿಗೆ ಭಾರಿ ಡಿಮ್ಯಾಂಡ್

| Published : May 23 2024, 01:00 AM IST

ಸಾರಾಂಶ

ಮುಂಗಾರು ಹಂಗಾಮಿನ ಮಳೆಗಾಲ ಆರಂಭವಾದರೆ ಈ ಹಣ್ಣುಗಳಿಗೆ ಸುಗ್ಗಿಯ ಕಾಲ ಆರಂಭವಾಯಿತು ಎಂದೇ ಲೆಕ್ಕ

ಅಶೋಕ ಸೊರಟೂರ ಲಕ್ಷ್ಮೇಶ್ವರ

ಕಪ್ಪು ಸುಂದರಿ ನೇರಳೆ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ವಿಟಮಿನ್ ಸಿ ಅಂಶ ಹೊಂದಿ ಮಧುಮೇಹಕ್ಕೆ ಸಿದ್ಧೌಷಧಿ ಎನಿಸಿರುವ ನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಹೆಚ್ಚಿದೆ.

ಈ ಹಣ್ಣು ಹಲವು ಔಷಧೀಯ ಗುಣ ಹೊಂದಿದ್ದು, ಅದರಲ್ಲೂ ಸಕ್ಕರೆ ಕಾಯಿಲೆ ಇರುವವರು ಈ ಹಣ್ಣನ್ನು ಹುಡುಕಿಕೊಂಡು ಬಂದು ಖರೀದಿಸುತ್ತಾರೆ. ಗ್ಯಾಸ್ಟ್ರಿಕ್, ಹೊಟ್ಟೆ ಉರಿ, ಬಿಪಿ ಹಾಗೂ ಹೊಟ್ಟೆಯ ಸಂಬಂಧಿ ರೋಗ ವಾಸಿ ಮಾಡುವ ಶಕ್ತಿ ಈ ಹಣ್ಣಿನಲ್ಲಿ ಇದ್ದುದರಿಂದ ಬೇಡಿಕೆ ಹೆಚ್ಚಿದೆ.

ಮುಂಗಾರು ಹಂಗಾಮಿನ ಮಳೆಗಾಲ ಆರಂಭವಾದರೆ ಈ ಹಣ್ಣುಗಳಿಗೆ ಸುಗ್ಗಿಯ ಕಾಲ ಆರಂಭವಾಯಿತು ಎಂದೇ ಲೆಕ್ಕ. ಬೇಸಿಗೆಯಲ್ಲಿ ಹೂವು ಬಿಟ್ಟು ನಳನಳಿಸುತ್ತಿದ್ದ ಗಿಡಗಳಲ್ಲಿ ಮಳೆ ಬೀಳಲು ಆರಂಭವಾದ ತಕ್ಷಣ ಮಳೆಯು ಸಿಂಚನಕ್ಕೆ ಮೈದುಂಬಿಕೊಂಡು ಹಣ್ಣುಗಳು ಕಪ್ಪಗೆ ಮಿಂಚಲು ಆರಂಭಿಸುತ್ತೇವೆ. ಆಗ ಹಣ್ಣುಗಳನ್ನು ಜೋಪಾನವಾಗಿ ಗಿಡದ ಕೊಂಬೆಗಳಿಂದ ಹರಿದು ತರುವುದು ಸಾಹಸದ ಕೆಲಸವೇ ಸರಿ. ಹಣ್ಣು ಕೀಳುವ ಸಮಯದಲ್ಲಿ ನೆಲಕ್ಕೆ ಬಿದ್ದರೆ ಆ ಹಣ್ಣು ಒಡೆದು ಹೋಗುತ್ತದೆ. ಆದ್ದರಿಂದ ಹೆಚ್ಚು ಜಾಗ್ರತೆಯಿಂದ ಹೆಣ್ಣು ಬಿಡಿಸಿ ಮಾರಾಟಕ್ಕೆ ತರುತ್ತಾರೆ.

ಸದ್ಯ ನೇರಳೆ ಹೆಣ್ಣಿನ ಬೆಲೆ ಕೆಜಿಗೆ ₹200 ₹ 250 ವರೆಗೆ ಇದೆ. ಸಾಮಾನ್ಯ ತಳಿಯ ನೇರಳೆ ಹಣ್ಣಿಗಿಂತ ಜಂಬೂ ನೇರಳೆ ಹೆಣ್ಣಿಗೆ ಭಾರಿ ಡಿಮ್ಯಾಂಡ್ ಇದೆ. ಈಗ ಮಾರುಕಟ್ಟೆಯಲ್ಲಿ ಎರಡು ಮೂರು ತರಹದ ನೇರಳೆ ಹಣ್ಣು ಆಗಮಿಸಿದ್ದು. ಮಧುಮೇಹಿಗಳಿಗೆ ಈ ಹಣ್ಣು ತಿಂದು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.